ಜನಸಾಮಾನ್ಯರ ಅತ್ಯುತ್ತಮ ಕೇಂದ್ರೀಕೃತ ಬಜೆಟ್ : ಕಾಂಗ್ರೆಸ್ ಮುಖಂಡ ಹುಚ್ಚಪ್ಪ ತಳವಾರ
ಇಂಡಿ : ಆರೋಗ್ಯ , ಶಿಕ್ಷಣ, ಜಲಸಂಪನ್ಮೂಲ ಅತೀ ಹೆಚ್ಚು ಒತ್ತು ಕೊಡಲಾಗಿದೆ. ಅದಲ್ಲದೇ ಅತ್ಯಂತ ಕೇಳಸ್ತರದ ಜನರಿಗಾಗಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಪೂರಕವಾಗಿ ಹಲವು ಕ್ರಮಗಳನ್ನು ಘೋಷಿಸಲಾಗಿದೆ. ಹಳೆಯ ಯೋಜನೆಗಳ ಮರು ಜಾರಿ, ಹೊಸ ಕಾರ್ಯಕ್ರಮಗಳ ಘೋಷಣೆಯ ಜತೆಯಲ್ಲೇ ಈ ಮೂರೂ ವರ್ಗಗಳ ಅಭಿವೃದ್ಧಿಗೆ ಕಾನೂನಾತ್ಮಕ ಬಲ ತುಂಬುವ ಪ್ರಯತ್ನಕ್ಕೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ.