ಬರದಿಂದ ತತ್ತರಿಸಿದ ರೈತರಿಗೆ, ಮಧ್ಯಮ ವರ್ಗದವರಿಗೆ ಭರವಸೆ ಕಾಣದ ಬಜೆಟ್ : ಬಿಜೆಪಿ ಮುಖಂಡ ಕೆಂಗನಾಳ ಕಿಡಿ
ಇಂಡಿ : ರಾಜ್ಯದ 2024-25 ಸಾಲಿನ ಬಜೆಟ್ ನಲ್ಲಿ ರೈತರ ಹಾಗೂ ಮಧ್ಯಮ ವರ್ಗದವರ ಏಳಿಗೆಗೆ ಯಾವದೇ ಪ್ರಮುಖ ಅಂಶಗಳು ಇಲ್ಲದಿರುವದು ಬೇಸರ ತಂದಿದೆ.
ಮೊದಲೇ ನಮ್ಮ ರೈತರು ಸತತ ಅತೀವೃಷ್ಟಿ, ಬರಗಾಲ ದಂತ ಹೊಡತಕ್ಕೆ ನಲುಗಿ ಹೋಗಿರುವ ಶ್ರಮಿಕರಿಗೆ ಮೇಲೇತ್ತುವ ಕೆಲಸ ಮುಖ್ಯಮಂತ್ರಿಗಳು ಮಾಡಬೇಕಿತ್ತು. ಆದರೆ ಗ್ಯಾರಂಟಿಗಳ ಅನುಷ್ಠಾನಕ್ಕೆ ಹೆಚ್ಚು ಒತ್ತು ಕೊಟ್ಟು ಅಭಿವೃದ್ಧಿಗೆ ಯಾವ ಅನುದಾನ ನೀಡದೆ ಇರುವದು ದುರದೃಷ್ಟ. ಇನ್ನೂ ನಮ್ಮ ಭಾಗದ ರೈತರ ಗುತ್ತಿಬಸವಣ್ಣ ಕಾಲುವೆಯ ನೀರು ಕೊನೆಯ 147 KM ವರೆಗೂ ನೀರು ಹರಿಸುವ ಯೋಜನೆಗೆ ಡಿಜಿಟಲ್ ಗೇಟ್ ಅಳವಡಿಸಿ, ನಮ್ಮ ಪಾಲಿನ ನೀರು ನಮಗೆ ನೀಡುವ ಭರವಸೆಯು ಹುಸಿಯಾಗಿದೆ ಎಂದು ಬಿಜೆಪಿ ಮುಖಂಡ ಶಿವರಾಜ್ ಕೆಂಗನಾಳ ಕಾಂಗ್ರೇಸ್ ಸರಕಾರದ ಮೇಲೆ ಕಿಡಿಕಾರಿ ಪತ್ರಿಕೆ ಪ್ರಕಟಣೆಗೆ ತಮ್ಮ ಹೇಳಿಕೆ ನೀಡಿದ್ದಾರೆ.