ವಿಜಯಪುರ : ರಾಜ್ಯ ಸರ್ಕಾರದ ಬಜೆಟ್
ಕಿವಿಯ ಮೇಲೆ ಹೂವು ಇಟ್ಟಂತೆ ಆಗಿದೆ ಎಂದು ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸೋರ್ಜಿವಾಲ್ ಹೇಳಿದರು.
ವಿಜಯಪುರ ನಗರದಲ್ಲಿ ಶುಕ್ರವಾರ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಒಂದು ಸುಳ್ಳು ಹೇಳುವ ಸರ್ಕಾರ ಆಗಿದೆ. ಪ್ರಧಾನಿ ಮೋದಿ ಕೂಡ ಸುಳ್ಳು ಹೇಳಿಕೊಂಡು ಬರುತ್ತಿದ್ದಾರೆ. ಅದನ್ನು ಸಿಎಂ ಬಸವರಾಜ್ ಬೊಮ್ಮಾಯಿಗೂ ಸುಳ್ಳು ಹೇಳುವ ಪಾಠ ಮಾಡಿದ್ದಾರೆ ಎಂದು ಕಿಡಿಕಾರಿದರು. ನಾಲ್ಕು ವರ್ಷ ಆಡಳಿತದಲ್ಲಿ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಇದೀಗ್ 20 ದಿನಗಳಲ್ಲಿ ಏನು ಆಗುತ್ತದೆ ಎಂದು ವಾಗ್ದಾಳಿ ನಡೆಸಿದರು. ಕಳೆದ ಬಜೆಟ್‌ನಲ್ಲಿ ಆರೋಗ್ಯ ಸೇವೆ ಸೇರಿದಂತೆ ಹಲವು ಯೋಜನೆಯನ್ನು ಘೋಷಿಸಿತು. ಆದ್ರೇ, ಯಾವುದು ಜಾರಿಗೆ ಬಂದಿಲ್ಲ. ಇದು ಸಿಎಂ ಬೊಮ್ಮಾಯಿಯ ಭ್ರಷ್ಟಾಚಾರ ಸರ್ಕಾರ ಆಗಿದೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರ ಹಿಂಸಾಚಾರ ಸರ್ಕಾರ ಆಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನ ಹೇಳಿಕೆ ನೀಡಿದ ಖಂಡನೀಯ. ಅದಕ್ಕಾಗಿ ಸಚಿವ ಅಶ್ವಥ್ ನಾರಾಯಣ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ಅಲ್ಲದೇ, ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಆರೋಪಗಳು ಸತ್ಯವಾಗಿದೆ. ಕೋಟ್ಯಾಂತರ ಹಣ ಕಾರ್ಪೋರೆಟ್‌ನಲ್ಲಿ ಅಳವಡಿಸಿದ್ದಾರೆ. ಅದಕ್ಕಾಗಿ ಇದನ್ನು ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.