ಮನೆ ಬಾಗಲಿಗೆ ಅನ್ನ ಸುವಿಧಾ : ಶ್ಲಾಘನೀಯ ಕಾರ್ಯ ಸ್ನೇಹಲತಾ ಶೆಟ್ಟಿ
ವಿಜಯಪುರ : “ಅನ್ನ ಸುವಿಧಾ”ಎನ್ನುವ ಹೊಸ ಯೋಜನೆ 2024ನೇ ಸಾಲಿನ ಬಜೆಟ್ ಮಂಡನೆ ವೇಳೆ ಸಿಎಂ ಸಿದ್ದ ರಾಮಯ್ಯನವರು ಪ್ರಕಟಿಸಿದ್ದಾರೆ. ಅದಲ್ಲದೇ ಮನೆಯಿಂದ ಹೊರ ಹೋಗಿ ದಿನಬಳಕೆಯ ಸಾಮಗ್ರಿ ಖರೀದಿಸಲು ಕಷ್ಟವಾಗುವ ವಯೋವೃದ್ದರನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಹಸಿವು ಮುಕ್ತ ಕರ್ನಾಟಕವೇ ನಮ್ಮ ಆಶಯ ಸಾಮಾಜಿಕ ಭದ್ರತೆಯ ಕಳಕಳಿಯೊಂದಿಗೆ, 80 ವರ್ಷ ಮೇಲ್ಪಟ್ಟ ವಯಸ್ಸಿನವರೇ ಇರುವ ಮನೆಗಳಿಗೆ ಆಹಾರ ಧಾನ್ಯ ವಿತರಣೆ ಮಾಡುವ ಅನ್ನ ಸುವಿಧಾ ಯೋಜನೆ ಬಜೆಟ್ ನಲ್ಲಿ ಘೋಷಣೆ ಮಾಡಿದ್ದು ಅತ್ಯಂತ ಜನಪರ ಬಜೆಟ್ ಇದಾಗಿದೆ.
ಕೆಪಿಸಿಸಿ ರಾಜ್ಯ ಮಹಿಳಾ ಕಾರ್ಯದರ್ಶಿ ಸ್ನೇಹಲತಾ ಶೆಟ್ಟಿ ವಿಜಯಪುರ