ಇಂಡಿಯಲ್ಲಿ ಬೃಹತ್ ಪಿಂಚಣಿ ಅದಾಲತ್ : ಎಸಿ ಅಬೀದ್ ಗದ್ಯಾಳ
ಮದ್ಯವರ್ತಿಗಳ ಹಾವಳಿಗೆ ಕಡಿವಾಡ : ತಹಶಿಲ್ದಾರ ಬಿ ಎಸ್ ಕಡಕಬಾವಿ.
ಇಂಡಿ: ಪ್ರತೀ ವ್ಯಕ್ತಿಯ ಅನುಕೂಲಕ್ಕಾಗಿ ಸರ್ಕಾರ
ಯೋಜನೆಗಳನ್ನು ಮಾಡಿದೆ. ಅವುಗಳ ದುರುಪಯೋಗ – ವಾಗದಂತೆ ನೋಡಿಕೊಳ್ಳಬೇಕೆಂದು ದಿವಾಣಿ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಿಕ
ದಂಡಾಧಿಕಾರಿ ಹಾಗೂ ತಾಲ್ಲೂಕು ಕಾನೂನು ಸೇವೆಗಳ
ಸಮಿತಿ ಕಾರ್ಯದರ್ಶಿ ಈಶ್ವರ ಎಸ್.ಎಂ. ಸೂಚಿಸಿದರು.
ಶನಿವಾರ ತಾಲ್ಲೂಕು ಆಡಳಿತ ವತಿಯಿಂದ ಕಂದಾಯ ಇಲಾಖೆ ಹಾಗೂ ತಾಲೂಕು ಕಾನೂನು ಸೇವಾ ಸಮೀತಿ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಪಿಂಚಣಿ ಅದಾಲತ್ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲಾ ರಾಷ್ಟ್ರಗಳು ವ್ಯಕ್ತಿಗಳ ಅಭಿವೃದ್ಧಿಗಾಗಿ ಯೋಜನೆಗಳನ್ನು ಮಾಡುತ್ತಿವೆ. ಹಿಂದೆ ರಾಜ
ಮಹಾರಾಜರು ತಮ್ಮ ಪ್ರಜೆಗಳ ಸಂರಂಕ್ಷಣೆಗಾಗಿ
ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅದೇ
ಮಾದರಿಯಲ್ಲೇ ಈಗಿನ ಸರಕಾರಗಳು ಸಹ ಹಲವು
ಯೋಜನೆಳನ್ನು ಜಾರಿಗೆ ತರುತ್ತಿವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಂದಾಯ
ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿ, ಪಿಂಚಣಿ ಎಂದರೆ ಜನರಿಗೆ ಭದ್ರತೆ ಒದಗಿಸುವದು.
ವಿಕಲಚೇತನರಿಗೆ, ವಿಧವೆಯರಿಗೆ, ಹಿರಿಯರಿಗೆ, ರೈತ
ಮಹಿಳೆಯರಿಗೆ ಮಾಶಾಸನ ನೀಡಿ ಅವರಿಗೆ ಭದ್ರತೆ
ಒದಗಿಸುತ್ತದೆ. ಅದೇ ರೀತಿ ಪಿಂಚಣಿಯಲ್ಲಿ ಯಾರಿಗಾದರೂ ತೊಂದರೆಯಾದರೆ ಅದನ್ನು ಅದಾಲತ್ ಮೂಲಕ ಬಗೆಹರಿಸಿಕೊಳ್ಳಲೂ ಕೂಡಾ ಅವಕಾಶವಿದೆ ಎಂದ ಅವರು ಸರ್ಕಾರವೇ ಜನತೆಯ ಬಳಿಗೆ ಹೋಗಿ ಅವರ ಸಂಕಷ್ಟಗಳನ್ನು ಆಲಿಸಿ, ಅವರಿಗೆ ಭದ್ರತೆ
ಒದಗಿಸಿಕೊಡುವ ಕಾರ್ಯಕ್ರಮವೇ ಪಿಂಚಣಿ ಅದಾಲತ್
ಕಾರ್ಯಕ್ರಮವಾಗಿದೆ. ಇದರ ಸದುಪಯೋಗ
ಮಾಡಿಕೊಳ್ಳಿ ಎಂದರು.
ತಹಶೀಲ್ದಾರ ಬಿ.ಎಸ್. ಕಡಕಬಾವಿ ಮಾತನಾಡಿ, ಪಿಂಚಣಿ ಅದಾಲತ್ ಕಾರ್ಯಕ್ರಮ ಪ್ರತೀ ತಿಂಗಳು ಕೊನೆಯ ಶನಿವಾರ ಆಯೋಜಿಸಲಾಗುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಳ್ಳಿ ಎಂದರು. ಸ್ಥಳದಲ್ಲಿಯೇ 30 ಜನರಿಗೆ ಪಿಂಚಣಿ ಆದೇಶ ನೀಡಲಾಯಿತು.
ವೇದಿಕೆಯಲ್ಲಿ ತಾಲ್ಲೂಕು ಪಂಚಾಯತಿ ಇಓ ಬಾಬುರಾವ
ರಾಠೋಡ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್. ಆಲಗೂರ,
ಗ್ರೇಡ-2 ತಹಶೀಲ್ದಾರ ಧನಪಾಲಶೆಟ್ಟಿ ದೇವೂರ,
ವಕೀಲರ ಸಂಘದ ಅಧ್ಯಕ್ಷ ಪಿ.ಬಿ. ಪಾಟೀಲ, ವಕೀಲರ
ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಬಿರಾದಾರ, ವಕೀಲ ಡಿ.ಎಸ್. ಮಡಿವಾಳಕರ, ಸಹಾಯಕ ಸರ್ಕಾರಿ ಅಭಿಯೋಜಕ ಐ.ಕೆ. ಗಚ್ಚಿನಮಹಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇಂಡಿ: ಪಟ್ಟಣದ ಗುರುಭವನದಲ್ಲಿ ತಾಲ್ಲೂಕು ಆಡಳಿತ ಏರ್ಪಡಿಸಿದ್ದ ಬೃಹತ್ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ನ್ಯಾಯಾಧೀಶ ಈಶ್ವರ ಎಸ್.ಎಂ. ಉದ್ಘಾಟಿಸಿದರು.
ಇಂಡಿ: ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಬೃಹತ್ ಪಿಂಚಣಿ ಅದಾಲತ್‍ನಲ್ಲಿ ಸ್ಥಳದಲ್ಲೇ ಫಲಾನುಭವಿಗಳಿಗೆ ಪಿಂಚಣಿ ಆದೇಶ ಪ್ರತಿ ವಿತರಿಸಲಾಯಿತು.