‘ಬ್ರಿಲಿಯಂಟ್ ಪೊಲಿಟಿಷಿಯನ್’ ಪ್ರತಾಪ್ ಸಿಂಹ!
Voice Of Janata: Political News:
ಪಲಾಯನವಾದಿ ಪ್ರತಾಪ್ ಸಿಂಹ ಅವರೇ ಸಂಸತ್ ದಾಳಿಕೋರರಿಗೆ ಪಾಸ್ ಕೊಟ್ಟಿದ್ದೇಕೆ ಎಂದು ಕೇಳಿದರೆ ಚಾಮುಂಡೇಶ್ವರಿಗೆ ಗೊತ್ತು ಅಂತೀರಿ, ನಿಮ್ಮ ತಮ್ಮ ಕೋಟ್ಯಂತರ ರೂಪಾಯಿ ಬೆಲೆಬಾಳುವ ಮರಗಳನ್ನು ಕಡಿದಿದ್ದೇಕೆ ಎಂದು ಕೇಳಿದರೆ ಡಾ.ಯತೀಂದ್ರ ಅವರ ಕಡೆ ಕೈ ತೋರಿಸುತ್ತೀರಿ, ತಮ್ಮ ಗುರು ಮೋದಿಯವರಂತೆ ವಿಷಯಾಂತರ ಮಾಡುವಲ್ಲಿ, ದಿಕ್ಕು ತಪ್ಪಿಸುವಲ್ಲಿ ತಾವೂ ಕೂಡ “ಬ್ರಿಲಿಯಂಟ್ ಪೊಲಿಟಿಷಿಯನ್” ಅಲ್ಲವೇ ಪ್ರತಾಪ್ ಸಿಂಹ ಅವರೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಈ ಸಂಬಂಧ ಟ್ವಿಟ್ ಮಾಡಿರುವ ಕಾಂಗ್ರೆಸ್, ಪ್ರತಾಪ್ ಸಿಂಹ ಅವರೇ, ತಮ್ಮ ಪ್ರತಾಪ ಬ್ಯಾರಿಕೇಡ್ ಹಾರುವುದರಲ್ಲಿ ಅಷ್ಟೇ ಅಲ್ಲ, ವಾಸ್ತವಿಕ ಪ್ರಶ್ನೆಗಳಿಗೆ ವಿಷಯಾಂತರ ಮಾಡದೆ ನೇರವಾಗಿ ಉತ್ತರಿಸುವುದರಲ್ಲೂ ನಿಮ್ಮ ಪ್ರತಾಪ ತೋರಿಸಿ. ನಿಮ್ಮ ಸಹೋದರ ಜಮೀನು ಗುತ್ತಿಗೆ ಪಡೆದಿದ್ದು ನಿಜವಲ್ಲವೇ?ನಿಜಕ್ಕೂ ಶುಂಠಿ ಬೆಳೆಯಲು ಗುತ್ತಿಗೆ ಪಡೆದಿದ್ದೋ ಅಥವಾ ಅಲ್ಲಿದ್ದ ಬೆಲೆಬಾಳುವ ಮರಗಳನ್ನು ಲಪಟಾಯಿಸಲು ಗುತ್ತಿಗೆ ಪಡೆದಿದ್ದೋ? ಮರಗಳನ್ನು ಕಡಿದು ಸಾಗಿಸಲು ಜೆಸಿಬಿ, ಹಿಟಾಚಿಗಳನ್ನು ಕಳಿಸಿದ್ದು ನಿಮ್ಮ ತಮ್ಮನೇ ಅಲ್ಲವೇ? ಎಂದಿದೆ. ಅರಣ್ಯ ಭೂಮಿಯಾಗಲಿ, ಖಾಸಗಿ ಭೂಮಿಯಾಗಲಿ ಅನುಮತಿ ಪಡೆಯದೆ ಮರಗಳನ್ನು ಕಡಿಯುವುದು ಕಾನೂನು ಉಲ್ಲಂಘನೆ ಎಂಬ ಸಾಮಾನ್ಯ ಅರಿವು ಇರಲಿಲ್ಲವೇ? ಸಚಿವ ಮಧು ಬಂಗಾರಪ್ಪರವರದ್ದು ವಯಕ್ತಿಕ ವ್ಯವಹಾರಕ್ಕೆ ಸಂಬಂಧಿಸಿದ ವಿಚಾರ, ಅವರು ಸಾರ್ವಜನಿಕರ ತೆರಿಗೆಯ ಹಣವನ್ನು ಲಾಪಟಾಯಿಸಿಲ್ಲ, ತಮ್ಮ ಇಲಾಖೆಯಲ್ಲಿ ಅವ್ಯವಹಾರ ಮಾಡಿಲ್ಲ, ಸರ್ಕಾರಕ್ಕೆ ಸಂಬಂಧಿಸಿದಂತೆ ಯಾವುದೇ ಹಗರಣ ನಡೆಸಿಲ್ಲ. ಸರ್ಕಾರದ ಹಣಕ್ಕೆ ನಷ್ಟ ಉಂಟುಮಾಡಿಲ್ಲ. ಮಧು ಬಂಗಾರಪ್ಪನವರ ವಯಕ್ತಿಕ ವ್ಯವಹಾರವನ್ನು ಹಿಡಿದು ಜಗ್ಗಾಡುತ್ತಿರುವ ಬಿಜೆಪಿ ನಾಯಕರು ತಮ್ಮ ತಮ್ಮದೇ ಪಕ್ಷದ ನಾಯಕರು ಹೇಳಿದ 40 ಸಾವಿರ ಕೋಟಿ ರೂಪಾಯಿಯ ಬೃಹತ್ ಹಗರಣದ ಬಗ್ಗೆ ಜನತೆಗೆ ಉತ್ತರ ನೀಡುವುದು ಯಾವಾಗ? ಅದು ಜನರ ಬೆವರಿನ ಹಣ, ಸರ್ಕಾರದ ಹಣ ಬಿ ವೈ ವಿಜಯೇಂದ್ರ ಅವರೇ, ಮಧು ಬಂಗಾರಪ್ಪನವರ ಕತೆ ಬಿಟ್ಟು 40 ಸಾವಿರ ಕೋಟಿಯ ಬಗ್ಗೆ ಉತ್ತರ ನೀಡಿ ಎಂದು ಕಿಡಿ ಕಾರಿದೆ.