ಶವವಾಗಿ ಪತ್ತೆಯಾದ ಬಾಲಕ..!
ಆಲಮಟ್ಟಿ: ಇಲ್ಲಿನ ಎಎಲ್ ಬಿಸಿ ಕಾಲುವೆಯ ಹರಿಯುವ ನೀರಿನಲ್ಲಿ ಮುಳುಗಿದ್ದ ಬಾಲಕನ ಶವವು ಮಂಗಳವಾರ ಪತ್ತೆಯಾಗಿದೆ.
ಮೃತ ಬಾಲಕ ರವಿ.ಮಂಜುನಾಥ. ಜಗ್ಗಲ(16)ನು ಬಾಗಲಕೋಟ ಜಿಲ್ಲೆಯ ಬದಾಮಿ ತಾಲ್ಲೂಕಿನ ನೀರಲಕೇರಿಯವರಾಗಿದ್ದು, ಕಳೆದ ಕೆಲ ವರ್ಷಗಳಿಂದ ಆಲಮಟ್ಟಿಯಲ್ಲಿಯೇ ವ್ಯಾಪಾರ ಮಾಡುತ್ತಾ ವಾಸವಾಗಿದ್ದಾರೆ ಎಂದು ತಿಳಿದುಬಂದಿದೆ.
ಸೋಮವಾರ ಮಧ್ಯಾಹ್ನ ಕಾಲುವೆಯಲ್ಲಿ ಸ್ನಾನಕ್ಕೆ ಹೋದಾಗ ಕಾಲುಜಾರಿ ನೀರಿನಲ್ಲಿ ಮುಳುಗಿರುವ ಘಟನೆ ಸಂಭವಿಸಿದ್ದು, ಅಗ್ನಿಶಾಮಕ ಸಿಬ್ಬಂದಿಗಳು ಮತ್ತು ನುರಿತ ಈಜುಗಾರರು ರಾತ್ರಿಯಾಗುವವರೆಗೂ ಬಾಲಕನ ಶೋಧ ಕಾರ್ಯ ನಡೆಸಿದರೂ ಪತ್ತೆಯಾಗಿರಲಿಲ್ಲ. ಮಂಗಳವಾರ ಮುಂಜಾನೆ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ನಿಡಗುಂದಿ ಠಾಣೆಯಲ್ಲಿ ದಾಖಲಾಗಿದೆ.