ವಿಜಯಪುರ : ಸಚಿವ ಸಿಸಿ ಪಾಟೀಲ್ ಎದುರು ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಹಾಗೂ ಎಂ ಬಿ ಪಾಟೀಲ್ ನಡುವೆ ವಾಗ್ವಾದ ನಡೆದ ಘಟನೆ ನಡೆದಿದೆ. ಗಲಾಟೆ ನಡೆಯುತ್ತಿದ್ದಂತೆ ಕಾರ್ಯಕ್ರಮದಿಂದ ಎದ್ದು ಸಚಿವ ಸಿಸಿ ಪಾಟೀಲ್ ಹೊರ ನಡೆದಿದ್ದಾರೆ.
ವಿಜಯಪುರ ಜಿಲ್ಲೆ ತಿಕೋಟ ತಾ. ಕನಮಡಿ ಗ್ರಾಮದಲ್ಲಿ ರಸ್ತೆ ಭೂಮಿ ಪೂಜೆಗಾಗಿ ಸಚಿವ ಸಿಸಿ ಪಾಟೀಲ್ ಆಗಮಿಸಿದ್ದರು. ನನಗ್ಯಾಕೆ ಕುರ್ಚಿಯ ಹಾಕಿಲ್ಲ ಎಂದು ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಗಲಾಟೆ ನಡೆಸಿದರು. ಪ್ರೋಟೋಕಾಲ್ ನಂತೆ ಸಚಿವ ಸಿಸಿ ಪಾಟೀಲ್, ಶಾಸಕ ಎಂ. ಬಿ. ಪಾಟೀಲ್ ಸೇರಿ ಸ್ವಾಮೀಜಿ ಉಪಸ್ಥಿತರಿದ್ದರು.
ಕಳೆದ ಎರಡು ಬಾರಿ ಎಂ. ಬಿ. ಪಾಟೀಲ್ ವಿರುದ್ಧ ಸ್ಪರ್ಧಿಸಿ ಸೋಲುಂಡಿದ್ದ ವಿಜುಗೌಡ ಪಾಟೀಲ್ ಭೂಮಿ ಪೂಜೆ ಬಳಿಕ ನಡೆದ ವೇದಿಕೆ ಕಾರ್ಯಕ್ರಮದ ಬ್ಯಾನರ್ ನಲ್ಲಿ ಪೋಟೋ ಹಾಗೂ ವೇದಿಕೆ ಮೇಲೆ ಕುರ್ಚಿ ಹಾಕಿಲ್ಲ ಎಂದು ಖ್ಯಾತೆ ತೆಗೆದಿದ್ದಾರೆ. ಗಲಾಟೆಯಿಂದ ಬೇಸತ್ತು ವೇದಿಕೆಯಿಂದ ಸಿಸಿ ಪಾಟೀಲ್ ಹೊರ ನಡೆದರು. ಈ ವೇಳೆ ಸಿಸಿ ಪಾಟೀಲರನ್ನ ಮನವೊಲಿಸಿ ಮತ್ತೆ ವೇದಿಕೆಗೆ ಶಾಸಕ ಎಂ ಬಿ ಪಾಟೀಲ್ ಕರೆತಂದರು.