BLDE :ಪೂಲ್ ಕ್ಯಾಂಪಸ್ ಡ್ರೈವ್- 2025
ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ಎ. ಎಸ್. ಪಾಟೀಲ ಕಾಲೇಜ್ ಆಫ್ ಕಾಮರ್ಸ್(ಸ್ವಾಯತ್ತ)ನ ಮ್ಯಾನೆಜಮೆಂಟ್ ಆಫ್ ರಿಸರ್ಚ್ ಸೆಂಟರ್ ನಲ್ಲಿ ಗುರುವಾರ ಪೂಲ್ ಕ್ಯಾಂಪಸ್ ಡ್ರೈವ್- 2025 ನಡೆಯಿತು.
ಈ ಪೂಲ್ ಕ್ಯಾಂಪಸ್ ಡ್ರೈವ್-2025 ನ್ನು ಬಿ.ಎಲ್. ಡಿ.ಇ ಸಂಸ್ಥೆಯ ಆಡಳಿತಾಧಿಕಾರಿ ಪ್ರೊ. ವಿ. ಎಸ್. ಬಗಲಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಶಿಕ್ಷಣ ಮತ್ತು ಉದ್ಯೋಗಕ್ಕೆ ಅವಿನಾಭಾವ ಸಂಬಂಧವಿದೆ. ಉತ್ತಮ ಶಿಕ್ಷಣ, ತರಬೇತಿ ಪಡೆಯುವುದರಿಂದ ಉದ್ಯಮದಲ್ಲಿ ಯಶಸ್ಸು ಸಾಧಿಸಬಹುದು. ಇದರಲ್ಲಿ ಪರಸ್ಪರ ಸಹಯೋಗದಿಂದ ಉನ್ನತ ಸಾಧನೆ ಮಾಡಬಹುದು. ವಿದ್ಯಾರ್ಥಿಗಳು ಇಂಥ ಪೂಲ್ ಕ್ಯಾಂಪಸ್ ಡ್ರೈವ್ ಕಾರ್ಯಕ್ರಮಗಳನ್ನು ಸದುಪಯೋಗ ಪಡಿಸಿಕೊಂಡು ಬದುಕು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಈ ಪೂಲ್ ಕ್ಯಾಂಪಸ್ ಡ್ರೈವ್-2025ನಲ್ಲಿ ಒಟ್ಟು 10 ಹೆಸರಾಂತ ಕಂಪನಿಗಳು ಪಾಲ್ಗೋಂಡಿದ್ದವು. ಐಟಿ, ಹಣಕಾಸು, ಮಾರ್ಕೆಟಿಂಗ್, ರಿಟೇಲ್, ಕನ್ಸಲ್ಟಿಂಗ್ ಮತ್ತು ಉತ್ಪಾದನೆ ಕ್ಷೇತ್ರಗಳಿಗೆ ಸೇರಿದದ ಫೋನ್ಪೇ, ಆರ್.ಎನ್.ಎಸ್ ಮೋಟಾರ್ಸ್, ಜಿಯೋ, ಯತಿ ಕಾರ್ಪ್, ಸಂತೋಷ್ ಆಟೋ, ಪೇಟಿಎಂ ಮುಂತಾದ ಕಂಪನಿಗಳು ಪಾಲ್ಗೋಂಡು ಮ್ಯಾನೇಜ್ಮೆಂಟ್ ಮತ್ತು ಸಂಬಂಧಿತ ವಿಭಾಗಗಳಲ್ಲಿ ಅಂತಿಮ ವರ್ಷದ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರ ಸಂದರ್ಶನ ನಡೆಸಿದರು.
ನಾನಾ ಸಂಸ್ಥೆಗಳಿಂ 450ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪೂಲ್ ಕ್ಯಾಂಪಸ್ ಡ್ರೈವ್ ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ನೇಮಕಾತಿ ಪೂರ್ವ-ನಿಯೋಜನೆ ಮಾತುಕತೆಗಳು, ಗುಂಪು ಚರ್ಚೆಗಳು, ತಾಂತ್ರಿಕ ಸಂದರ್ಶನ ಮತ್ತು ಮಾನವ ಸಂಪನ್ಮೂಲ ಹೀಗೆ ನಾನಾ ರೌಂಡ್ಸ್ ಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಿತು.
ಈ ಕಾರ್ಯಕ್ರಮದಲ್ಲಿ ಯಶೋಧಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್ ನ ಪರಾಗ್ ಸತ್ರಾಲ್ಕರ, ಬೆಂಗಳೂರಿನ ಯತಿಕಾರ್ಪ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಿಇಓ ಯತೀಶ. ಕೆ. ಎಸ್, ಬೆಂಗಳೂರಿನ ಫೋನ್ ಪೇ ಏರಿಯಾ ಸೇಲ್ಸ್ ಮ್ಯಾನೇಜರ್ ಪರ್ವೇಜ್, ವಿಜಯಪುರ ಸಂತೋಷ್ ಗ್ರೂಪ್ ನ ಜ್ಯೋತಿ ಗೋಣಿ, ಐ.ಎಫ್.ಟಿ ಮಾನವ ಸಂಪನ್ಮೂಲ ಕಾರ್ಯನಿರ್ವಾಹಕ ದೀಪ್ತಿ ಮುಂತಾದವರು ಉಪಸ್ಥಿತರಿದ್ದರು.
ಕಾಲೇಜಿನ ನಿರ್ದೇಶಕ ಡಾ. ಸಿ. ಜಿ. ಬ್ಯಾಹಟ್ಟಿ ಸ್ವಾಗತಿಸಿದರು. ಪ್ರಾಚಾರ್ಯ ಪ್ರೊ. ಬಿ. ಎಸ್. ಬೆಳಗಲಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಪ್ಲೇಸಮೆಂಟ್ ಅಧಿಕಾರಿ ಡಾ. ಮಹಾಂತೇಶ ಕನಮಡಿ ವಂದಿಸಿದರು, ಡಾ. ಅಶ್ವಿನಿ ಯರನಾಳ ನಿರೂಪಿಸಿದರು.
BLDEA ASP Commerce Collage Pool Campus Drive
ವಿಜಯಪುರ ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ಎ. ಎಸ್. ಪಾಟೀಲ ಕಾಲೇಜ್ ಆಫ್ ಕಾಮರ್ಸ್(ಸ್ವಾಯತ್ತ)ನ ಮ್ಯಾನೆಜಮೆಂಟ್ ಆಫ್ ರಿಸರ್ಚ್ ಸೆಂಟರ್ ನಲ್ಲಿ ಪೂಲ್ ಕ್ಯಾಂಪಸ್ ಡ್ರೈವ್- 2025 ನಡೆಯಿತು. ಬಿ.ಎಲ್. ಡಿ.ಇ ಸಂಸ್ಥೆಯ ಆಡಳಿತಾಧಿಕಾರಿ ಪ್ರೊ. ವಿ. ಎಸ್. ಬಗಲಿ ಕಾರ್ಯಕ್ರಮ ಉದ್ಗಾಟಿಸಿದರು. ಈ ಸಂದರ್ಭದಲ್ಲಿ ಡಾ. ಸಿ. ಜಿ. ಬ್ಯಾಹಟ್ಟಿ, ಪ್ರೊ. ಬಿ. ಎಸ್. ಬೆಳಗಲಿ ಮುಂತಾದವರು ಉಪಸ್ಥಿತರಿದ್ದರು.