ಕಲ್ಬುರ್ಗಿ : ತಳವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ವಿತರಿಸುವಲ್ಲಿ ಸರಕಾರ ವಿಳಂಭ ನೀತಿ ಅನುಸರಿಸುತ್ತಿದೆ. ತಳವಾರ ಮತ್ತು ಪರಿವಾರ ಸಮುದಾಯದ ಜಾತಿಗಳನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರ್ಪಡೆಗೊಳಿಸಲು ರಾಷ್ಟ್ರಪತಿ ಅಂಕಿತ ಹಾಕಿ ಹೊಸ ಶಾಸನ ರೂಪಿಸಿ ಜೊತೆಗೆ ಕೇಂದ್ರ ಸರಕಾರ ಘಂಟಾಘೋಷವಾಗಿ ಜಾತಿ ಪ್ರಮಾಣ ಪತ್ರ ನೀಡಲು ಆದೇಶ ಮಾಡಿ ಎರಡು ವರ್ಷ ಕಳೆದಿದೆ.
ಆದರೆ ಇಲ್ಲಿಯವರೆಗೂ ಜಾತಿ ಪ್ರಮಾಣ ಪತ್ರ ಕೊಡಲ್ಲಿಕ್ಕೆ ಕರ್ನಾಟಕ ಸರಕಾರ ಸುಖಾ ಸುಮ್ನೆ ತೊಂದರೆ ಕೊಡುವುದರ ಜೊತೆಗೆ ಸುಳ್ಳು ಆಸ್ವಾಸನೆಯ ಭರವಸೆ ಕೊಡುತ್ತಾ ಈ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಸಂವಿಧಾನಕ್ಕೆ ಮತ್ತು ತಮ್ಮದೇ ಕೇಂದ್ರ ಸರಕಾರಕ್ಕೆ ಅಗೌರವ ತರುವ ಕೆಲಸ ಮಾಡುತ್ತಿದ್ದಾರೆ. ಸಿಂದಗಿ ಮತ್ತು ಹಾನಗಲ್ ಮತಕ್ಷೇತ್ರದ ಉಪ ಚುನಾವಣೆಯಲ್ಲಿ ಇಡೀ ಸರಕಾರವೇ ಸಚಿವರ ಮತ್ತು ಮುಖ್ಯ ಮಂತ್ರಿಗಳು ಸೇರಿ ಭರವಸೆ ಕೊಟ್ಟಿದ್ದಾರೆ. ಆದರೆ ಭರವಸೆ, ಭರವಸೆಯಾಗಿ ಉಳಿದಿದ್ದು, ನಮ್ಮ ಸಮುದಾಯಕ್ಕೆ ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಕತ್ತಲಲ್ಲಿ ಮುಳಗಿದಂತಾಗಿರಲು ಸರಕಾರವೇ ಕಾರಣವಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ತಳವಾರ ಎಸ್ಟಿ ಹೋರಾಟ ಸಮಿತಿ ಕಪ್ಪು ಪಟ್ಟಿ ಪ್ರದರ್ಶಿಸುವ ಕಾರ್ಯ ಕಲ್ಬುರ್ಗಿಯಲ್ಲಿ ನಡೆದಿದೆ.
ಎಸ್ ವಿಪಿ ವೃತ್ತದ ಬಳಿ ಸರ್ದಾರ್ ವಲ್ಲಭಭಾಯಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಸಂದರ್ಭದಲ್ಲಿ ವಿವಿಧ ಕಡೆ ಕುಳಿತ ಸಮಿತಿ ಸದಸ್ಯರು ಕಪ್ಪು ಪಟ್ಟಿ ಪ್ರದರ್ಶಿಸಿ ಸರಕಾರ ಮತ್ತು ಮುಖ್ಯ ಮಂತ್ರಿ ವಿರುದ್ಧ ದಿಕ್ಕಾರ ಕೂಗಿದರು. ತಕ್ಷಣವೇ ಎಚ್ಚತ್ತ ಪೋಲಿಸರು ಸಮಾರು ೨೦ ಜನ ಪ್ರತಿಭಟನಾಕಾರರನ್ನು ಬಂಧಿಸಿದರು. ಮತ್ತೇ ಸಾಯಂಕಾಲದ ವರೆಗೆ ಇಟ್ಟುಕೊಂಡು ತದನಂತರ ವಾತಾವರಣ ಸರಿಹೊದ ನಂತರ ಬಿಡುಗಡೆ ಮಾಡಿದರು.