ಲಿಂಗಸೂಗೂರು: 2023 ರ ವಿಧಾನಸಭೆ ಚುನಾವಣೆಯ ಬಿಜೆಪಿಯ 2 ನೇ ಪಟ್ಟಿಯಲ್ಲಿ ಲಿಂಗಸೂಗೂರು ಮತ ಕ್ಷೇತ್ರದಿಂದ ಮಾನಪ್ಪ ಡಿ. ವಜ್ಜಲ್ ಹೆಸರು ಫೈನಲ್ ಆಗುತ್ತಿದ್ದಂತೆ ಅಬ್ಬರದ ಪ್ರಚಾರ ನಡೆಸಲಾಗುತ್ತಿದೆ.
ತಾಲೂಕಿನ ನಾಗರಹಾಳ ಗ್ರಾಮದಲ್ಲಿ ಬಿಜೆಪಿಯ ಯುವ ಮೋರ್ಚಾ ಅಧ್ಯಕ್ಷ ಈಶ್ವರ ಎಮ್ ವಜ್ಜಲ ಅವರು ಮನೆ ಮನೆ ಪ್ರಚಾರ ಕೈಗೊಂಡಿದ್ದಾರೆ. ಈ ವೇಳೆ
ಈಶ್ವರ ಎಮ್ ವಜ್ಜಲ್ ಮಾತನಾಡಿ ನಂದವಾಡಗಿ ಏತ ನೀರಾವರಿಯ ರೂವಾರಿಗಳಾದ ಪುಜ್ಯ ತಂದೆಯವರು ದೇವಸ್ಥಾನ, ಶಿಕ್ಷಣ, ಕ್ರೀಡೆ, ಅಲ್ಪಸಂಖ್ಯಾತರ ದೀನ- ದಲಿತರ ಏಳಿಗೆಗಾಗಿ ಶ್ರಮಿಸಿದ್ದಾರೆ.
ಇನ್ನು ತಾಲೂಕಿನ ಬಹುತೇಕ ಹಳ್ಳಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದಾರೆ. ಮಹಿಳೆಯರ ಕಲ್ಯಾಣಕ್ಕಾಗಿ ರೈತರ ಒಳಿತಿಗಾಗಿ ತಾಲೂಕಿನ ಅಭಿವೃದ್ಧಿಗೆ ಸದಾ ಸಿದ್ದರಾಗಿರುವ ಮಾನಪ್ಪ ವಜ್ಜಲರನ್ನು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಹುಮತದಿಂದ ಗೆಲ್ಲಿಸಿ ಕೊಡಬೇಕೆಂದು ಮನೆ ಮನೆಗೆ ತೆರಳಿ ಮನವಿ ಮಾಡಿಕೊಂಡರು.