ಸಿಂಧನೂರು : ಕಾಂಗ್ರೆಸ್ ಮುಖಂಡರ ಮೇಲೆ ಬಿಜೆಪಿ ಮಾಡುವ ದ್ವೇಷದ ರಾಜಕಾರಣ ಕೈ ಬಿಡಬೇಕು ಎಂದು ಮಾಜಿ ಶಸಕ ಹಂಪನಗೌಡ ಬಾದರ್ಲಿ ನೇತೃತ್ವದಲ್ಲಿ ನಗರದಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಮಾಜಿ ಶಸಕ ಹಂಪನಗೌಡ ಬಾದರ್ಲಿ ನಿವಾಸದಿಂದ ಹೋರಾಟ ಪ್ರತಿಭಟನೆ ಮೆರವಣಿಗೆ ಗಾಂಧಿ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ರಸ್ತೆ ತಡೆ ಪ್ರತಿಭಟನೆಯಿಂದ ವಾಹನ ಸಂಚಾರ ಅಸ್ತವ್ಯಸ್ತ ಗೊಂಡು ದೂರದ ಊರಿಗೆ ಹೊಗುವ ಪ್ರಯಾಣಿಕರಿಗೆ ಪ್ರತಿಭಟನೆ ಬಿಸಿ ತಟ್ಟಿತು. ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಪತ್ರಿಕಾ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದು ಇಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆದಿಲ್ಲ.ಪ್ರಧಾನಿ ನರೇಂದ್ರ ಮೋದಿ ರಾಜಕಿಯ ದುರುದ್ದೇಶದಿಂದ ವಿನಾ ಕಾರಣ ಪಕ್ಷದ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ಮೇಲೆ ತನಿಖೆ ಸಂಸ್ಥೆಗಳನ್ನು ಬಿಟ್ಟು ತನಿಖೆ ಮಾಡುವ ನೆಪದಲ್ಲಿ ಕಿರುಕುಳ ನೀಡುತ್ತಿರುವುದನ್ನು ಕಾಂಗ್ರೆಸ್ ಪಕ್ಷ ಉಗ್ರವಾಗಿ ಖಂಡಿಸುತ್ತದೆ ಎಂದರು.
ಬಿಜೆಪಿ ದೇಶದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಧರ್ಮ ಧರ್ಮಗಳ ಮೇಲೆ ಜಗಳ ಹಚ್ಚಿ ಅಶಾಂತಿ ವಾತಾವರಣ ಸೃಷ್ಟಿ ಮಾಡಿ ಅಧಿಕಾರದಲ್ಲಿ ಮುಂದುವರೆದಿದ್ದು ಅವರ ಅವನತಿಗೆ ಅವರೇ ಕಾರಣಿಕರ್ತರಾಗುತ್ತಾರೆ.ಅದಾನಿ ಬಿಜೆಪಿ ಸರಕಾರ ಅವಧಿಯಲ್ಲಿ ಆಗರ್ಭ ಶ್ರೀಮಂತನಾಗಿದ್ದು ಈತನ ಮೇಲೆ ತನಿಖೆ ಸಂಸ್ಥೆಗಳು ತನಿಖೆ ನಡೆಸದೆ ಕಾಂಗ್ರೆಸ್ ಮುಖಂಡರ ಮೇಲೆ ತನಿಖೆ ನೆಪದಲ್ಲಿ ಕಾಂಗ್ರೆಸ್ ಮುಖಂಡರಿಗೆ ಕಿರುಕುಳ ನೀಡುವುದನ್ನು ಬಿಡಬೇಕು.ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬೆನ್ನಲುಬಾಗಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಇರುತ್ತೇವೆ ಎಂದರು.
ಉದ್ಯೋಗ ಇಲ್ಲದೇ ಯುವಕರು ನಿರುದ್ಯೋಗಿ ಗಳಾಗುತ್ತಿದ್ದು ಅಗ್ನಿ ಪಂಥ್ ಯೋಜನಡಿಯಲ್ಲಿ ೪ ವರ್ಷ ಉದ್ಯೋಗ ನೀಡಿ ನಂತರ ನಿರುದ್ಯೋಗಿ ಗಳನ್ನಾಗಿ ಮಾಡಲಾಗುತ್ತದೆ.ರೈತರಲ್ಲಿ ಗೊಂದಲ ಸೃಷ್ಠಿ ಮಾಡಿ ಅವರಿಗೆ ಯಾವುದೇ ರೀತಿಯ ನೆರವು ನೀಡದೆ ಮೋಸ ಮಾಡುತ್ತ ಬರಲಾಗಿದೆ.ರೈತರ ಆದಾಯ ದುಪ್ಪಟ್ಟು ಆಗಿಲ್ಲ. ಬಡವರು ಬದವರಾಗಿ,ಶ್ರೀಮಂತ ರು ಶ್ರೀಮಂತ ರಾಗಿ ಇರುವುದೇ ಕೇಂದ್ರ ಸರ್ಕಾರದ ಉದ್ದೇಶವಾಗಿದೆ ಹೊರತು ಯುವಕರು,ಮಹಿಳೆಯರು, ರೈತರು,ವಿದ್ಯಾರ್ಥಿಗಳು, ಕೃಷಿ ಕಾರ್ಮಿಕರು ಸೇರಿದಂತೆ ಯಾವುದೇ ಜನಪರ ಯೋಜನೆಗಳನ್ನು ಜಾರಿಗೆ ತರದೆ ನಿರ್ಲಕ್ಷ್ಯ ಮಾಡಿದೆ.
ನಗರಸಭೆ ಅಧ್ಯಕ್ಷರಾದ ಮಲ್ಲಿಕಾರ್ಜುನ ಪಾಟೀಲ್,ಉಪಾಧ್ಯಕ್ಷ ಮೂರ್ತಜಾ ಹುಸೇನ್,ಸದಸ್ಯ ರಾದ ಶೇಖರಪ್ಪ ಗಿಣಿವಾರ,ಹೆಚ್ ಬಾಷಾ,ವೀರೇಶ ಹಟ್ಟಿ,ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಗೌಡ ಬಾದರ್ಲಿ,ಬಾಬು ಬಸವರಾಜ ಹಿರೇಗೌಡರು,ಕಾಂಗ್ರೆಸ್ ಮುಖಂಡರಾದ ಜಾಫರ್ ಜಾಗೀರದಾರ, ನಿರುಪಾದೇಪ್ಪ ವಕೀಲರು,ದುರುಗಪ್ಪ ಕಟಾಲಿ,ಆರ್ ತಿಮ್ಮಯ್ಯ ನಾಯಕ್, ಹುಸೇನ್ ಸಾಬ್,ಸೇರಿದಂತೆ ನೂರಾರು ಜನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ತಹಶೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.