ಕಾಂಗ್ರೆಸ್ ಸರಕಾರ ವಿರುದ್ಧ ಬಿಜೆಪಿಗರ ಆಕ್ರೋಶ..!
ಇಂಡಿ : ಸರಕಾರ ಕಣ್ಣು ಮುಚ್ಚಿ ಮುಚ್ಚಿಕೊಂಡಿದೆ. ರೈತರ ಆತ್ಮಹತ್ಯೆ ಅಂತಹ ಗಂಭೀರ ಪರಿಸ್ಥಿತಿ ಅರ್ಥವಾಗುತ್ತಿಲ್ಲ..! ಮಳೆ ಇಲ್ಲದೆ, ಭಿತ್ತಿದ್ದ ಬೀಜ ನಾಟುವ ಮುನ್ನವ ಬೆಳೆ ಕಮರಿ ಹೋಗುತ್ತಿದ್ದು ರೈತರು ಕಂಗಾಲಾಗಿದ್ದಾರೆ. ಆದರೆ ರೈತರಿಗೆ ಸಕಾರಾತ್ಮಕ ಸ್ಪಂದಿಸುವ ಜವಾಬ್ದಾರಿ ಹೊಂದಿರುವ ಸರಕಾರ ಸಂಪೂರ್ಣ ವಿಫಲವಾಗಿದ್ದು, ರಾಜ್ಯ ರೈತ ವಿರೋಧಿ ಕಾಂಗ್ರೆಸ್ ಸರಕಾರವಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿ ತಹಶಿಲ್ದಾರ ಬಿ.ಎಸ್ ಕಡಕಬಾವಿ ಅವರ ಮೂಲಕ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರಮುಖ ರಸ್ತೆಯಲ್ಲಿ ಪ್ರತಿಭಟನೆ ಪ್ರಾರಂಭಸಿದ ಅವರು, ಹೃದಯಭಾಗದ ಬಸವೇಶ್ವರ ವೃತಕ್ಕೆ ತೆರಳಿ ಸರಕಾರದ ವಿರುದ್ಧ ದಿಕ್ಕಾರ ಕೂಗಿದರು. ತದನಂತರ ತಾಲೂಕು ಆಡಳಿತ ಸೌಧಕ್ಕೆ ತೆರಳಿ, ಸೌಧದ ಆವರಣದಲ್ಲಿ ಕಾರ್ಯಕರ್ತರು ಪ್ರತಿಭಟಿನೆ ಮಾಡಿದರು.
ಈ ಸಂದರ್ಭದಲ್ಲಿ ರೈತಾ ಮೂರ್ಚಾ ಜಿಲ್ಲಾ ಅಧ್ಯಕ್ಷ ಕಾಸುಗೌಡ ಬಿರಾದಾರ, ಮಂಡಳ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ, ಮುಖಂಡ ಅನೀಲ ಜಮಾದಾರ, ಶೀಲವಂತ ಉಮರಾಣಿ, ರಾಜಕುಮಾರ ಸಗಾಯಿ, ತಾ.ಪಂ ಮಾಜಿ ಸದಸ್ಯ ಸಿದ್ದರಾಮ ತಳವಾರ ಮಾತಾನಾಡಿದ ಅವರು ರೈತ ವಿರೋಧಿ ಹಾಗೂ ಬಿಜೆಪಿ ಸರಕಾರದ ಜನಪರ ಯೋಜನೆಗಳನ್ನು ಕೈ ಬಿಟ್ಟಿದಕ್ಕೆ ಕಾಂಗ್ರೆಸ್ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಿಡಿಕಾರಿದರು.
ರಾಜ್ಯದಲ್ಲಿ ಮಳೆ ಅಭಾವದಿಂದ ಎಲ್ಲಾ ಜಲಾಶಯಗಳಲ್ಲಿ ಪ್ರತಿ ವರ್ಷದಂತೆ ಸಂಗ್ರಹವಾಗಬೇಕಿದ್ದ ನೀರಿನ ಪ್ರಮಾಣ ಸಂಪೂರ್ಣ ಕುಸಿತ ಕಂಡಿದೆ. ಇದರಿಂದಾಗಿ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗುವ ಬಗ್ಗೆ ಆತಂಕವಾಗಿದೆ. ಜೊತೆಗೆ ವಿದ್ಯುತ್ ಅಭಾವದಿಂದ ಅನಿಯಮಿತ ಲೊಡ ಶೆಡ್ಡಿಂಗ್ ಪರಿಣಾಮವಾಗಿ ಹಗಲು ಹೊತ್ತಿನಲ್ಲಿಯೆ ರೈತರ ಪಂಪಸೆಟಗಳಿಗೆ ನಿರಂತರ 7 ಘಂಟೆಗಳ ಕಾಲ ವಿದ್ಯುತ್ ಪೂರೈಕೆಯಲ್ಲಿ ಸರಕಾರ ವಿಫಲವಾಗಿದೆ. ಅದಲ್ಲದೇ ಶೇ 80 % ರಷ್ಟು ಬೆಳೆಗಳನ್ನು ಬಿತ್ತನೆ ಮಾಡಿದ್ದು ರಕ್ಷಿಸಿಕೊಳ್ಳಲು ವಿದ್ಯುತ್ ಸಮಸ್ಯೆಯಿಂದ ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನೂ ಈ ಹಿಂದಿನ ಬಿಜೆಪಿ ಸರಕಾರದ ಹಲವಾರು ರೈತಪರ, ಜನಪರ ಯೋಜನೆಗಳಿಗೆ ಕೊಕ್ ಕೊಟ್ಟಿದ್ದಾರೆ. ಕಿಸಾನ್ ಸಮ್ಮಾನ್ ನೀಧಿ, ರೈತ ವಿಧ್ಯಾ ನಿಧಿ, ಭೂ ಸಿರಿ, ಶ್ರಮ ಶಕ್ತಿ, ರೈತ ಸಂಪದ ಯೋಜನೆ ಹಾಗೂ ಎಪಿಎಂಸಿ ಕಾನೂನು, ಕೃಷಿ ಭೂಮಿ ಮಾರಾಟ, ಜಿಲ್ಲೆಗೊಂದು ಗೋಶಾಲೆ, ಕ್ಷೀರ ಸಮೃದ್ದಿ ಯೋಜನೆ ಅಂತಹ ರೈತರಪರ ಯೋಜನೆಗಳನ್ನು ನಿರ್ಲಕ್ಷ್ಯಸಿ ಕೃಷಿ ಕ್ಷೇತ್ರವನ್ನು ಕಡೆಗಣಿಸಲಾಗಿದೆ. ಇನ್ನೂ ಪಟ್ಟಣದ 1 ಮತ್ತು 2 ಕೆರೆಗೆ ನೀರು ಬರುತ್ತಿಲ್ಲ. ಜನ ಜಾನುವಾರುಳಿಗೆ ನೀರಿನ ಕಷ್ಟವಾಗುತ್ತಿದೆ. ಕೂಡಲೇ ಬುಯ್ಯಾರ ಲಿಪ್ಟ ಮುಖಾಂತರ ಕೆರೆ ತುಂಬಿ ಜನರಿಗೆ ಸಹಕಾರವಾಗಲು ಒತ್ತಾಯ ಮಾಡುತ್ತೆವೆ. ಒಟ್ಟಾರೆಯಾಗಿ ಬರಗಾಲ ಘೋಷಣೆ ಮಾಡಿ, ರೈತ ಆತ್ಮಹತ್ಯೆಯಂತಹ ಅನಾಹುತಗಳಿಗೆ ಆಸ್ಪದೆಕೊಡದೆ ರೈತ ವರ್ಗಕ್ಕೆ ಧೈರ್ಯ ತುಂಬುವ ಹಾಗೂ ಆರ್ಥಿಕವಾಗಿ ಸಶಕ್ತರನ್ನಾಗಿ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ರೈತರ ನೆರವಿಗೆ ಧಾವಿಸಬೇಕಾಗಿದ್ದು ಅತ್ಯಂತ ಅಗತ್ಯವಾಗಿದೆ ಎಂದು ಈ ಮೂಲಕ ತಿಳಿಸುತ್ತೆವೆ. ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ರೆ ಹಳ್ಳಿ ಹಳ್ಳಿಯಲ್ಲೂ ಜನರು ಉಗ್ರವಾದ ಪ್ರತಿಭಟನೆಗೆ ಮುಂದಾಗುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಬಿಜೆಪಿ ಮುಖಂಡ ಸಿದ್ಧಲಿಂಗ ಹಂಜಗಿ, ಹಣಮಂತರಾಯಗೌಡ ಪಾಟೀಲ, ಬುದ್ದುಗೌಡ ಪಾಟೀಲ, ಬಿ ಎಸ್ ಪಾಟೀಲ, ಪುರಸಭೆ ಸದಸ್ಯ ದೇವೆಂದ್ರ ಕುಂಬಾರ, ಪಿಂಟು ರಾಠೋಡ, ಅನೀಲಗೌಡ ಬಿರಾದಾರ, ರವಿ ವಗ್ಗಿ, ಶಾಂತು ಕಂಬಾರ, ಸೋಮು ನಿಂಬರಗಿಮಠ, ಸಂಜು ದಶವಂತ, ಬಾಳು ಮುಳಜಿ, ಯಲ್ಲಪ್ಪ ಹದರಿ, ಮಲ್ಲಿಕಾರ್ಜುನ ವಾಲಿಕಾರ, ಕಾಶಿನಾಥ ನಾಯಕೋಡಿ, ಶಿವರಾಜ ಕೆಂಗನಾಳ, ಶಂಕರ ಜಮಾದಾರ ಹಾಗೂ ಅನೇಕ ಕಾರ್ಯಕರ್ತರು, ರೈತರು ಉಪಸ್ಥಿತರಿದ್ದರು.