ವಿಜಯಭೂತ ಅಭಿಯಾನಕ್ಕೆ ಸಚಿವ ಕೋಟ ಶ್ರೀನಿವಾಸ ಚಾಲನೆ..!
ಇಂಡಿ : ತಾಲ್ಲೂಕಿನ ಲಚ್ಯಾಣದಲ್ಲಿ ಬಿಜೆಪಿ ಪಕ್ಷದ ಇಂಡಿ ಮಂಡಲ ಘಟಕದ ವತಿಯಿಂದ ಭಾನುವಾರ ನಡೆದ ಭತಗುಣಕಿ ಮಹಾಶಕ್ತಿ ಕೇಂದ್ರ ಸಮಾವೇಶ ಹಾಗೂ ವಿಜಯಭೂತ ಅಭಿಯಾನಕ್ಕೆ ಸಮಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಹಾಗೂ ಬಿಜೆಪಿ ಪಕ್ಷದ ವಿಜಯಭೂತ ಅಭಿಯಾನದ ರಾಜ್ಯ ಉಸ್ತುವಾರಿ ಕೋಟ ಶ್ರೀನಿವಾಸ ಪೂಜಾರಿ ಚಾಲನೆ ನೀಡಿದರು.
ಬಳಿಕ ಅವರು ಮಾತನಾಡಿ, ಬಿಜೆಪಿ ಪಕ್ಷದ ಭೂತಗಳು ಸರಿಯಾಗಿರಬೇಕು. ಭೂತಗಳನ್ನು ಗಟ್ಟಿಗೊಳಿಸಬೇಕು. ಬರುವ ಜ.೧೨ರ ಒಳಗಾಗಿ ಭೂತ ಮಟ್ಟದಲ್ಲಿ ಬಿಜೆಪಿ ಧ್ವಜ ಹಾರಿಸಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
ಸಮೃದ್ಧ ಭಾರತ ಸ್ವಾಭಿಮಾನಿ ಭಾರತ ನಿರ್ಮಾಣ ಮಾಡಲು ಬಿಜೆಪಿ ಸ್ಥಾಪನೆಯಾಗಿದೆ. ಜಗತ್ತು ಭಾರತಕ್ಕೆ ಗೌರವಿಸುವಂತೆ ಮಾಡಿದ್ದು ಬಿಜೆಪಿ. ಇಂಥಹ ಪಕ್ಷ ಕಟ್ಟಲು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಪಾರ ಶ್ರಮಿಸಿದ್ದಾರೆ. ಇಂಥಹ ಪಕ್ಷದ ಇಂದಿನ ನಾಯಕ ಪ್ರಧಾನಿ ನರೇಂದ್ರ ಮೋದಿ ಉತ್ತಮವಾದ ಆಡಳಿತ ನೀಡುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಸಲ್ಲಿಸಿದ ಮನವಿ ಸ್ಪಂದಿಸಿ ಈ ಕುರಿತು ಮಾತನಾಡಿ, ಸ್ಥಳಿಯ ಮೂರಾರ್ಜಿ ದೇಸಾಯಿ ವಸತಿ ಪ್ರೌಢ ಶಾಲೆಯನ್ನು ಉನ್ನತ ದರ್ಜೆಗೆ ಏರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಭರವಸೆ ನೀಡಿದರು.
ಸಮಾರಂಭದಲ್ಲಿ ಭಾಗವಹಿಸುವ ಮುನ್ನ ಸಚಿವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಕ್ಷೇತ್ರದ ಅಧಿಪತಿ ಲಿಂಗೈಕ್ಯ ಶ್ರೀ ಸಿದ್ಧಲಿಂಗ ಮಹಾರಾಜರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ನಂತರ ಸ್ಥಳಿಯರಿಂದ ಪವಾಡ ಪುರುಷ ಸಿದ್ಧಲಿಂಗ ಮಹಾರಾಜರ ಮಹಿಮೆ ಹಾಗೂ ಮಠದ ಇತಿಹಾಸ ತಿಳಿದು ಪುನೀತರಾದರು.
ಈ ಸಮಾರಂಭದಲ್ಲಿ ಪಕ್ಷದ ರೈತ ಮೊರ್ಚಾದ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ, ಬಿಜೆಪಿ ಪಕ್ಷದ ಮುಖಂಡರಾದ ಸುರೇಶ ಬಿರಾದಾರ, ಶ್ರೀಶೈಲಗೌಡ ಬಿರಾದಾರ, ಮಲ್ಲಿಕಾರ್ಜುನ ಕಿವಡೆ, ರಾಜಕುಮಾರ ಸಗಾಯಿ, ಚಿದಾನಂದ ಛಲವಾದಿ, ಶೀಲವಂತ ಉಮರಾಣಿ, ಎಸ್.ಎ. ಪಾಟೀಲ, ಮಲ್ಲಿಕಾರ್ಜುನ ಕಿವಡೆ, ತಾಲ್ಲೂಕು ಪಂಚಾಯಿತಿ ಸದಸ್ಯ ಗಂಗಾಧರ ಪಾಟೀಲ, ವಿಜಯ ಭೂತ ಅಭಿಯಾನದ ತಾಲ್ಲೂಕು ಉಸ್ತುವಾರಿ ವಿವೇಕ ಡಬ್ಬಿ, ಪಕ್ಷದ ಭತಗುಣಕಿ ಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀಮಂತ ಮೊಗಲಾಯಿ, ಸ್ಥಳಿಯ ಗ್ರಾ.ಪಂ. ಸದಸ್ಯ ಅಶೋಕಗೌಡ ಪಾಟೀಲ, ನಿವೃತ್ತ ಪ್ರಾಚಾರ್ಯ ಡಿ.ಎಸ್. ಪಾಟೀಲ, ದೊಡಗೊಂಡಪ್ಪಗೌಡ ಹೊಸಮನಿ, ಗ್ರಾ. ಪಂ. ಮಾಜಿ ಉಪಾಧ್ಯಕ್ಷ ವಿಠ್ಠಲ ಬಾಬುಳಗಾಂವ, ಪಕ್ಷದ ಸ್ಥಳಿಯ ಪಕ್ಷದ ಮುಖಂಡರಾದ ಎಂ.ಎಸ್. ಮುಜಗೊಂಡ, ಕಲ್ಲನಗೌಡ ಬಿರಾದಾರ, ಯಶವಂತ ಬಿರಾದಾರ, ಸುಭಾಸ್ ಲಾಳಸೇರಿ, ಗುಂಡು ಅಜನಾಳ, ಸಿದ್ದು ವಾಲಿ, ಹಣಮಂತ ಲಾಳಸೇರಿ ಹಾಗೂ ಪಕ್ಷದ ಹಲವು ಕಾರ್ಯಕರ್ತರು ಭಾಗವಹಿಸಿದ್ದರು.