ಲಿಂಗಸೂಗೂರು: ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಬಿಜೆಪಿ ತಾಲೂಕು ಮಹಿಳಾ ಮೋರ್ಚಾದ ಅಧ್ಯಕ್ಷರಾದ ಜಯಶ್ರೀ ಸಕ್ರಿಯವರ ನೇತೃತ್ವದಲ್ಲಿ ಮಹಿಳಾ ಮೋರ್ಚಾದ ವತಿಯಿಂದ ಮಹಿಳಾ ಸಾಧಕಿಯರಾದ ಶ್ರೀಮತಿ ಶಾಂತಾ ಮಲ್ಲಿಕಾರ್ಜುನ ಪಾಟೀಲ ಹಾಗೂ ಸುಮಿತ್ರಾ ಸಿಂಧೆಯವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷರಾದ ವೀರನಗೌಡ ಪಾಟೀಲ್ ಲೆಕ್ಕಿಹಾಳ, ಹಿರಿಯ ಮುಂಖಡರಾದ ಗಿರಿಮಲ್ಲನ ಗೌಡ ಮಾಲಿಪಾಟೀಲ್, ಸಿದ್ರಾಮಪ್ಪ ತಾತನವರು, ಚನ್ನಬಸವ ಹೀರೆಮಠ, ಜರಿನಾ ಬೇಗಂ ಪುರಸಭೆ ಸದಸ್ಯರು, ಶೋಭಾ ಕಾಟವಾ, ಜ್ಯೋತಿ ಸುಂಕದ, ಸ್ಮೀತಾ ಅಂಗಡಿ, ಲಕ್ಷ್ಮಿದೇವಿ, ಗುಂಡಮ್ಮ, ವಸಂತಮ್ಮ, ಲಕ್ಷ್ಮಿ, ಈರಮ್ಮ, ಸರೋಜಾ, ಸಿದ್ದಮ್ಮ ಇನ್ನಿತರ ಮಹಿಳೆಯರು ಭಾಗವಹಿಸಿದ್ದರು.