ಬಿಜೆಪಿ ಅಭ್ಯರ್ಥಿ ಕಾಸುಗೌಡ ಬಿರಾದಾರ ನಾಮಪತ್ರ ಸಲ್ಲಿಕೆ.
ಇಂಡಿ : ಇಂಡಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಾಸುಗೌಡ ಬಿರಾದಾರ ಶನಿವಾರ ನಾಮಪತ್ರ ಸಲ್ಲಿಸಿದರು. ಸರಳವಾಗಿ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ಆಡಳಿತ ಸೌಧಕ್ಕೆ ತೆರಳಿ ಅಲ್ಲಿನ ಚುನಾವಣೆ ಅಧಿಕಾರಿ ಹಾಗೂ ಕಂದಾಯ ಉಪ ಅಧಿಕಾರಿಯಾಗಿರುವ ರಾಮಚಂದ್ರ ಗಡದೆ ಅವರಿಗೆ ಸರಳವಾಗಿ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆ ನಂತರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಂಡಳ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ ಹಾಗೂ ಅಭ್ಯರ್ಥಿ ಕಾಸುಗೌಡ ಬಿರಾದಾರ ಮಾತಾನಾಡಿದ ಅವರು, ಇಂದು ಸರಳವಾಗಿ ನಾಮಪತ್ರ ಸಲ್ಲಿಸಿರುವೆ. ಇದೇ ಏ – 19 ರಂದು ಬೃಹತ್ ಪ್ರಮಾಣದಲ್ಲಿ ರಾಜ್ಯದ, ಜಿಲ್ಲೆಯ ಹಾಗೂ ತಾಲ್ಲೂಕು ಮುಖಂಡರು ಮತ್ತು ಕಾರ್ಯಕರ್ತರ ಜೊತೆಗೆ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಲು ನಿರ್ಧಾರ ಮಾಡಲಾಗಿದೆ. ಪಕ್ಷದಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ. ಆಕಾಂಕ್ಷಿಗಳ ಪಟ್ಟಿದೊಡ್ಡದು ಇರಬಹುದು. ಆದರೆ ಎಲ್ಲರ ಜೊತೆಗೆ ಸೌಹಾರ್ದ ಬೇಟಿ ಮಾಡಿದ್ದೆವೆ. ಅವರನ್ನು ಕರೆದುಕೊಂಡು ಎಲ್ಲರೂ ಸೇರಿ ಬಿಜೆಪಿ ಪಕ್ಷಕ್ಕೆ ಪಕ್ಕಾ ಗೆಲುವು ತರುತ್ತೆವೆ ಎಂದು ಹೇಳಿದರು. ಸದ್ಯ ಕ್ಷೇತ್ರದಲ್ಲಿ ಸುಮಾರು 86 ಹಳ್ಳಿಗಳಿಗೆ ಓಡಾಟ ಮಾಡುತ್ತಿದ್ದೆವೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಸವರಾಜ ಬೊಮ್ಮಾಯಿ ಯೋಜನೆಗಳನ್ನು ಮತಕ್ಷೇತ್ರದಲ್ಲಿ ಜನರಿಗೆ ಮನವರಿಕೆ ಮಾಡುವೆ. ಇನ್ನೂ ಚುನಾವಣಾ ಪ್ರಚಾರದಲ್ಲಿ ಸ್ಟಾರ್ ಕ್ಯಾಂಪಿಯನ್, ರಾಷ್ಟ್ರ ರಾಜ್ಯ ಮಟ್ಟದ ನಾಯಕರು ಮತಕ್ಷೇತ್ರದ ಪ್ರಚಾರ ಕೈಗೊಳ್ಳುವರು ಎಂದು ಹೇಳಿದರು.
ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ, ಅನೀಲ ಜಮಾದಾರ ,ರವಿ ಖಾನಾಪೂರ, ಸಿದ್ದಲಿಂಗ ಹಂಜಗಿ, ಯಲ್ಲಪ್ಪ ಹದರಿ, ರವಿ ವಗ್ಗಿ ಶಾಂತು ಕಂಬಾರ, ರಾಜಶೇಖರ ಯರಗಲ್ ಉಪಸ್ಥಿತರಿದ್ದರು.