ತಂದೆ ತಾಯಿಂದಿರನ್ನು ತಬ್ಬಲಿ ಮಾಡಬೇಡಿ..! ಎಂಬ ಸಂದೇಶ ಸಾರುವ ಯತ್ನ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸಂಚಾರ..
ಏಕಾಂಗಿಯಾಗಿ ಬೈಕ್‌ನಲ್ಲಿ ದೇಶ ಪರ್ಯಟನೆ…
ವಿದೇಶಿ ಸಂಸ್ಕೃತಿಗೆ ಮಾರು ಹೋಗಬೇಡಿ..! ಚಿತ್ರಾ ರಾವ್..
ಶಾಂತಿನಿಕೇತನ ಪ್ರಾಥಮಿಕ ಶಾಲೆಯಲ್ಲಿ ರಕ್ಷಾ ಬಂಧನ ಕಟ್ಟುವ ಮೂಲಕ ಬೈಕ್ ರೈಡರ್ ಚಿತ್ರಾರಾವ್ ಅವರನ್ನು ಸ್ವಾಗತ ಕೋರಿದರು.
ಇಂಡಿ : ದೇಶ ಕಟ್ಟುವ ಕೆಲಸಕ್ಕೆ ಸಮರ್ಪಿಸಿಕೊಂಡು ನನ್ನ ಭಾರತ ಪರಿಕಲ್ಪನೆಯಲ್ಲಿ ಏಕಾಂಗಿಯಾಗಿ ಬೈಕ್‌ನಲ್ಲಿ ದೇಶ ಪರ್ಯಟನೆ ಹೊರಟಿರುವ ಚಿತ್ರಾರಾವ್ ಅವರ ಪ್ರಯಾಣ ಸುಖಕರವಾಗಿರಲಿ ಎಂದು ಪುರಸಭೆ ಮಾಜಿ ಅಧ್ಯಕ್ಷ ಯಮುನಾಜಿ ಸಾಳೊಂಕೆ ಗುರುವಾರ ಹೇಳಿದರು.
ಪಟ್ಟಣದ ಹೃದಯಭಾಗದ ಬಸವೇಶ್ವರ ವೃತ್ ದಲ್ಲಿ ನೂರಾರು ಯುವಕರು ಹಾಗೂ ಪ್ರತಿಷ್ಠಿತ ಶ್ರೀ ಶಾಂತೇಶ್ವರ ಮಹಿಳಾ ಪದವಿ ಪೂರ್ವ ಕಾಲೇಜು ಮತ್ತು ಶಾಂತಿನಿಕೇತನ ಹಿರಿಯ ಪ್ರಾಥಮಿಕ ಶಾಲೆಯ ವಿಧ್ಯಾರ್ಥಿಗಳು ಬೈಕ ಸವಾರಿ ಚೀತ್ರಾರಾವ್ ಅವರನ್ನು ಸ್ವಾಗತಿಸಿ ಸನ್ಮಾನಿಸಿ ಗೌರವಿಸುವ ಸಂದರ್ಭದಲ್ಲಿ ಮಾತಾನಾಡಿದರು.
ಕರ್ನಾಟಕದ ರಾಮನಗರ ಜಿಲ್ಲೆ ನಿವಾಸಿಯಾಗಿರುವ ಚಿತ್ರಾ ರಾವ್ ಅವರು, ಭರತನಾಟ್ಯ ಕಲಾವಿದೆಯಾಗಿ, ಒಳ್ಳೆಯ ಉದ್ಯೋಗದಲ್ಲಿದ್ದು ಜತೆಗೆ ಸಮಾಜಸೇವಾ ಪ್ರವೃತ್ತಿ ಮಾಡುತ್ತಿರುವುದು ಇಡೀ ನಾಡು ಹೆಮ್ಮೆಪಡುವ ವಿಷಯ ಎಂದು ಹೇಳಿದರು. ಅದಲ್ಲದೇ
ಯುವ ಜನರಿಗೆ, ಶಾಲಾ ಮಕ್ಕಳಿಗೆ ಉತ್ತಮ ಸಂದೇಶ ಸಾರಲು ಏಕಾಂಗಿಯಾಗಿ ಬೈಕ್ ಸವಾರಿ ಹೊರಟಿರುವ ಚಿತ್ರಾ ರಾವ್ ಅವರ ಹಾದಿ ಸುಖಕರವಾಗಿರಲಿ. ನಿಮ್ಮ ಸಂದೇಶ ಎಲ್ಲರಿಗೂ ತಲುಪಲಿ, ಸುರಕ್ಷಿತವಾಗಿ ವಾಪಸಾಗಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಬೈಕ್ ಸವಾರಿ ಚಿತ್ರಾರಾವ ಮಾತಾನಾಡಿದ ಅವರು, ಎಲ್ಲಾ ಆಚರಣೆಗೆ ವಿದೇಶಿ ಸಂಸ್ಕೃತಿಗೆ ಮಾರು ಹೋಗುವುದರಿಂದ ಭವಿಷ್ಯದಲ್ಲಿ ದೊಡ್ಡ ಗಂಡಾಂತರ ಅನುಭವಿಸಬೇಕಾಗುತ್ತೆದೆ.
ಹಿರಿಯರನ್ನು ಸಾಕಿ ಸಲುಹಬೇಕಾದ ಮಕ್ಕಳ ನಿರ್ಲಕ್ಷ್ಯದಿಂದ ಎಷ್ಟೋ ತಂದೆ-ತಾಯಿಗಳನ್ನು ವೃದ್ಧಾಶ್ರಮದಲ್ಲಿ ಕಾಣುತ್ತಿದ್ದೇವೆ. ಹೆತ್ತವರನ್ನು ಸಾಕುವ ಹೊಣೆ ಮಕ್ಕಳದ್ದಾಗಿದೆ. ಹೆತ್ತು ಹೊತ್ತು ಬೆಳೆಸಿದವರನ್ನು ಅನಾಥವಾಗಿಸುವುದು ಬೇಡ ಎಂದು ಹೇಳಿದರು.
20 ದಿನ, 3590 ಕಿಮೀ ಸಂಚಾರ
ಕನ್ನಡಿಗರ ಪ್ರೋತ್ಸಾಹದಿಂದ ಗೆಜ್ಜೆ ಕಟ್ಟಿ ನೃತ್ಯ ಮಾಡುತ್ತಿದ್ದೆ. ನನ್ನ ತಂದೆ-ತಾಯಿಗಳ ಪರಿಶ್ರಮ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ವಿದ್ಯಾಭ್ಯಾಸ ಮಾಡಿ ಒಳ್ಳೆಯ ಉದ್ಯೋಗದಲ್ಲಿದ್ದೇನೆ. ತಾಯಿ ನಡೆಸುತ್ತಿರುವ ವೃದ್ಧಾಶ್ರಮದಲ್ಲಿ ಹಿರಿಯ ಜೀವಗಳ ಕಥೆ – ವ್ಯಥೆಯನ್ನು ಹತ್ತಿರದಿಂದ ನೋಡಿದ್ದೇನೆ. ಈ ನಿಟ್ಟಿನಲ್ಲಿ ಭವಿಷ್ಯದಲ್ಲಿ ವೃದ್ಧಾಶ್ರಮಗಳು ಹೆಚ್ಚದಿರಲಿ, ಹೆತ್ತವರನ್ನು ಮಕ್ಕಳು ದೇವರಂತೆ ಕಾಣಲಿ ಎಂಬ ಉದ್ದೇಶದೊಂದಿಗೆ ನನ್ನ ಭಾರತ ಕಲ್ಪನೆಯಲ್ಲಿ ದೇಶದೆಲ್ಲೆಡೆ ಸಂದೇಶ ಸಾರಲು ಬಹುದಿನಗಳ ಆಸೆಯಂತೆ ಬೈಕ್‌ನಲ್ಲಿ ಕನ್ಯಾಕುಮಾರಿಯಿಂದ ಪ್ರಯಾಣ ಪ್ರಾರಂಭಿಸಿ ಕಾಶ್ಮೀರದವರೆಗೆ ಒಟ್ಟು 3590 ಕಿ.ಮೀ. ದೂರವನ್ನು 20 ದಿನ ತಮಿಳುನಾಡು, ರಾಜಸ್ಥಾನ, ಪಂಜಾಬ್ ರಾಜ್ಯಗಳಲ್ಲಿ ಸಂಚರಿಸಲಿದ್ದೇನೆ ಎಂದು ಹೇಳಿದರು. ಈ ಪ್ರಯತ್ನಕ್ಕೆ ನಿಮ್ಮ ಆಶೀರ್ವಾದ ಇರಲಿ ಎಂದು ಚಿತ್ರಾರಾವ್ ಆಶಿಸಿದರು.
ಈ ಸಂದರ್ಭದಲ್ಲಿ ಎಸ್ ಎಸ್ ಪಿ ಯು ಮಹಿಳಾ ಕಾಲೇಜು ಉಪಾಧ್ಯಕ್ಷ ನೀಲಕಂಠಗೌಡ ಪಾಟೀಲ, ಚಂದು ದೇವರ, ಪ್ರಾಚಾರ್ಯ ಎ ಬಿ ಪಾಟೀಲ ಸಂತೋಷ ಗವಳಿ, ಪಾಪು ಕಿತಲಿ, ಮಲ್ಲಿಕಾರ್ಜುನ ಹಾವಿನಾಳಮಠ, ಮಲ್ಲಿಕಾರ್ಜುನ ವಾಲಿಕಾರ, ಅವಿನಾಶ್ ಬಗಲಿ, ಜಗದೀಶ್ ಕ್ಷೇತ್ರಿ, ಹುಚ್ಷಪ್ಪ ತಳವಾರ, ರಾಮಸಿಂಗ ಕನ್ನೊಳ್ಳಿ, ಶೀವುಕುಮಾರ ಬಿಸನಾಳ, ಅನೀಲಗೌಡ ಬಿರಾದಾರ, ದೇವೇಂದ್ರ ಕುಂಬಾರ, ಶರಣಗೌಡ ಬಂಡಿ, ಸತೀಶ ಕುಂಬಾರ, ಬುದ್ದುಗೌಡ ಪಾಟೀಲ, ಮಲ್ಲು ಗುಡ್ಲ, ಸುದೀರ ಕರಕಟ್ಟಿ ಹಾಗೂ ಇನ್ನೂ ಅನೇಕ ಯುವಕರು, ಮುಖಂಡರು ಉಪಸ್ಥಿತರಿದ್ದರು.