ಭೀಮಾತೀರ : ಕೊಳವೆಬಾವಿಯಲ್ಲಿ ಬಿದ್ದ ಮಗುವಿನ ರಕ್ಷಣೆ | ಸತತ 20 ಗಂಟೆಗಳ ಕಾರ್ಯಾಚರಣೆ ಸಾವು ಗೆದ್ದು ಬಂದ ಸಾತ್ವಿಕ್
ಇಂಡಿ : ಬುಧವಾರ ಸಂಜೆ 5 ಗಂಟೆಯ ಸುಮಾರಿಗೆ
ಕೊಳವೆ ಬಾವಿಯಲ್ಲಿ ಬಿದ್ದ ಸಾತ್ವಿಕ್ ಮುಜಗೊಂಡ
ಇವನನ್ನು ರಕ್ಷಿಸುವಲ್ಲಿ ಜಿಲ್ಲಾ ಆಡಳಿತ ಮತ್ತು ತಾಲೂಕು ಆಡಳಿತ ಯಶಸ್ವಿಯಾಗಿದೆ. ಸತತ 20 ಗಂಟೆಯ ಕಾರ್ಯಾಚರಣೆ ಬಳಿಕ ಸಾತ್ವಿಕ್ ಸಾವು ಗೆದ್ದು ಬಂದಿದ್ದಾನೆ. ಕಾರ್ಯಾಚರಣೆಯಲ್ಲಿ ಹೈದ್ರಾಬಾದದ 21 ಜನರ ಎನ್‍ಡಿಆರ್‍ಎಫ್ ತಂಡ, ಬೆಳಗಾಂವ ಮತ್ತು
ಕಲಬುರಗಿಯಿಂದ ಬಂದ 25 ಜನರ ಎಸ್‍ಡಿಆರ್‍ಎಫ್ ತಂಡ, 50 ಜನ ಪೋಲಿಸರು, 20 ಜನ ಗೃಹ ರಕ್ಷಕದಳದ
ಮತ್ತು ಇಂಡಿ ಸರಕಾರಿ ಆಸ್ಪತ್ರೆ ವೈದ್ಯರು ಮತ್ತು
ಸಿಬ್ಬಂದಿ ಸತತ ಪ್ರಯತ್ನದ ಮೂಲಕ ಕಾರ್ಯಾಚರಣೆ ಯಶಸ್ವಿಯಾಗಿದೆ. ಘಟನಾ ಸ್ಥಳಕ್ಕೆ ಲಚ್ಯಾಣದ ಪೂಜ್ಯ ಶ್ರೀ ವೃಷಭಲಿಂಗೇಶ್ವರ ಶ್ರೀಗಳು, ಶಾಸಕ
ಯಶವಂತರಾಯಗೌಡ ಪಾಟೀಲ, ಜನತಾದಳದ ಬಿ.ಡಿ.
ಪಾಟೀಲ, ಬಿಜೆಪಿಯ ಕಾಸುಗೌಡ ಬಿರಾದಾರ,
ದಯಾಸಾಗರ ಪಾಟೀಲ ಸೇರಿದಂತೆ ಅನೇಕ ಗಣ್ಯರು,
ಜಿಲ್ಲಾಧಿಕಾರಿ ಟಿ.ಭೂಬಾಲನ, ಸಿಇಒ ರಿಷಿ ಆನಂದ, ಎಸ್ಪಿ ಋಷಿಕೇಶ ಭಗವಾನ, ಇಂಡಿಯ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ, ಇಒ ನೀಲಗಂಗಾ ಬಬಲಾದ, ಟಿಎಚ್‍ಒ ಅರ್ಚನಾ ಕುಲಕರ್ಣಿ, ಚಿಕ್ಕಮಕ್ಕಳ ತಜ್ಞ ಡಾ|| ವಿಪುಲ್ ಕೋಳೆಕರ ಮತ್ತಿತರಿದ್ದರು.
ನೆರೆದ ಸಾವಿರಾರು ಜನರು ಮಗುವನ್ನು ಹೊರಗೆ
ತರುತ್ತಿದ್ದಂತೆ ಸಿದ್ದಲಿಂಗ ಮಹಾರಾಜ ಕಿ ಜೈ ಜಯಘೋಷ ಹಾಕಿದರು.
ನನ್ನ ಮಗುವು ಸುರಕ್ಷಿತ ಪಾರಾಗಿ ಬಂದರೆ ನಾನು
ಮನೆಯಿಂದ ಸಿದ್ದಲಿಂಗ ಮಹಾರಾಜರ ಮಠದ ವರೆಗೆ
ದಿಡ ನಮಸ್ಕಾರ ಹಾಕುವೆ ಎಂದು ಬೇಡಿಕೊಂಡಿದ್ದೆ.
ದೇವರು ನನ್ನ ಮಗುವನ್ನು ರಕ್ಷಿಸಿದ್ದಾರೆ.
ಸಾತ್ವಿಕ ತಾಯಿ ಪೂಜಾ
ಪೂಜಾ ಮುಜಗೊಂಡ
ಬಾಲಕ ಸಾತ್ವಿಕ್ ಆರೋಗ್ಯದಿಂದ ಇದ್ದಾನೆ. ಆದರೆ
ಕೆಲವು ಸಣ್ಣ ಪುಟ್ಟ ಘಾಯಗಳಿದ್ದರೆ ಅವು ಸಿಟಿ
ಸ್ಕಾನನಲ್ಲಿ ಮಾತ್ರ ತಿಳಿಸಿತ್ತದೆ. ಹೀಗಾಗಿ ಹಿರಿಯ
ಅಧಿಕಾರಿಗಳ ಜೊತೆಗೆ ಚರ್ಚಿಸಿ ಮಗುವನ್ನು
ವಿಜಯಪುರದ ಜಿಲ್ಲಾ ಆಸ್ಪತ್ರೆಗೆ
ಕಳುಹಿಸಲಾಗುವದು.ಮಗುವಿನ ಆರೋಗ್ಯದ
ಕುರಿತು ಚಿಂತನೆ ಬೇಡ
ಡಾ. ವಿಪುಲ್ ಕೋಳೆಕರ, ಚಿಕ್ಕ ಮಕ್ಕಳ ತಜ್ಞರು ಸರಕಾರಿ ಆಸ್ಪತ್ರೆ ಇಂಡಿ
ಈ ಕಾರ್ಯಾಚರಣೆಯಲ್ಲಿ ಎಲ್ಲರ ಶ್ರಮವಿದೆ. ಮಗು
ಸಾತ್ವಿಕ್ ಆರೋಗ್ಯವು ಚೆನ್ನಾಗಿದೆ.
ಕಾರ್ಯಾಚರಣೆಯಲ್ಲಿ ಸಹಕರಿಸಿದ ಎಲ್ಲರಿಗೂ
ತಾಲೂಕಾ ಆಡಳಿತದ ಪರವಾಗಿ ಧನ್ಯವಾದಗಳು
ಎಸಿ ಅಬೀದ್ ಗದ್ಯಾಳ
ಕೊಳವೆ ಬಾವಿಯಲ್ಲಿ ಬಿದ್ದ ಮಗುವನ್ನು ರಕ್ಷಿಸಿ
ಮೇಲೆ ತರುತ್ತಿರುವದು.