• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಮಕ್ಕಳೊಂದಿಗೆ ಬಿಸಿಯೂಟ ಸವಿದ ಅಧಿಕಾರಿ ಮತ್ತು ಎಸ್.ಡಿ.ಎಂ.ಸಿ ಸದಸ್ಯರು

    ಮಕ್ಕಳೊಂದಿಗೆ ಬಿಸಿಯೂಟ ಸವಿದ ಅಧಿಕಾರಿ ಮತ್ತು ಎಸ್.ಡಿ.ಎಂ.ಸಿ ಸದಸ್ಯರು

    ಕುರಿ ಸಾಕಾಣಿಕೆ ಲಾಭದಾಯಕ ಡಾ. ಅಡಕಿ

    ಕುರಿ ಸಾಕಾಣಿಕೆ ಲಾಭದಾಯಕ ಡಾ. ಅಡಕಿ

    ಪತ್ರಕರ್ತರಾದವರು ಸತ್ಯವನ್ನು ಹೇಳಲು ಹಿಂಜರಿಯಬಾರದು..!

    ಪತ್ರಕರ್ತರಾದವರು ಸತ್ಯವನ್ನು ಹೇಳಲು ಹಿಂಜರಿಯಬಾರದು..!

    ಹಲಸಂಗಿ ದೃವತಾರೆ ಮಧುರಚೆನ್ನರು :ಸಾಹಿತಿ ಗೀತಯೋಗಿ

    ಹಲಸಂಗಿ ದೃವತಾರೆ ಮಧುರಚೆನ್ನರು :ಸಾಹಿತಿ ಗೀತಯೋಗಿ

    “ಬಾಯಿಯು ದೇಹಕ್ಕೆ, ಹೆಬ್ಬಾಗಿಲು; ಆರೋಗ್ಯಕರ ಹಲ್ಲುಗಳು-ಒಸಡುಗಳು, ಆರೋಗ್ಯಕರ ದೇಹದ ಸಂಕೇತ”

    “ಬಾಯಿಯು ದೇಹಕ್ಕೆ, ಹೆಬ್ಬಾಗಿಲು; ಆರೋಗ್ಯಕರ ಹಲ್ಲುಗಳು-ಒಸಡುಗಳು, ಆರೋಗ್ಯಕರ ದೇಹದ ಸಂಕೇತ”

    ಇಲ್ಲಿನ ಸೇವೆ ನನಗೆ ಸಾಕಷ್ಟು ತೃಪ್ತಿ ನೀಡಿದೆ : ತಾಲೂಕು ದಂಡಾಧಿಕಾರಿ ಬಲರಾಮ

    ಇಲ್ಲಿನ ಸೇವೆ ನನಗೆ ಸಾಕಷ್ಟು ತೃಪ್ತಿ ನೀಡಿದೆ : ತಾಲೂಕು ದಂಡಾಧಿಕಾರಿ ಬಲರಾಮ

    ಶಾಸಕರಿಂದ ಹುಬ್ಬೆ ಹುಣಸೆ ಡ್ಯಾಮ್ ಹಾಗೂ ಕಾಲುವೆಗಳ ವೀಕ್ಷಣೆ

    ಶಾಸಕರಿಂದ ಹುಬ್ಬೆ ಹುಣಸೆ ಡ್ಯಾಮ್ ಹಾಗೂ ಕಾಲುವೆಗಳ ವೀಕ್ಷಣೆ

    ಸರಕಾರಿ ಆದರ್ಶ ವಿಧ್ಯಾನಿಲಯಕ್ಕೆ  ಮೂಲಭೂತ ಸೌಲಭ್ಯ ನೀಡಲು ಶಾಸಕ ನಾಡಗೌಡರಿಗೆ ಮನವಿ

    ಸರಕಾರಿ ಆದರ್ಶ ವಿಧ್ಯಾನಿಲಯಕ್ಕೆ  ಮೂಲಭೂತ ಸೌಲಭ್ಯ ನೀಡಲು ಶಾಸಕ ನಾಡಗೌಡರಿಗೆ ಮನವಿ

    ಚಾರ್ಟರ್ಡ್ ಅಕೌಂಟೆಂಟ್ ಪಾಸಾದ ತರುಣ ಜೈನ ಗೆ ಸನ್ಮಾನ ಕಲಿತ ವಿದ್ಯೆ ದೇಶ ಸೇವೆಗೆ ಸಲ್ಲಲಿ: ನಡಹಳ್ಳಿ

    ಚಾರ್ಟರ್ಡ್ ಅಕೌಂಟೆಂಟ್ ಪಾಸಾದ ತರುಣ ಜೈನ ಗೆ ಸನ್ಮಾನ ಕಲಿತ ವಿದ್ಯೆ ದೇಶ ಸೇವೆಗೆ ಸಲ್ಲಲಿ: ನಡಹಳ್ಳಿ

    ಹೈಟೆಕ್ ಆಯುರ್ವೇದ ಆಸ್ಪತ್ರೆ ಮತ್ತು ಶೈಕ್ಷಣಿಕ ಭವನ ಉದ್ಘಾಟನೆ

    ಹೈಟೆಕ್ ಆಯುರ್ವೇದ ಆಸ್ಪತ್ರೆ ಮತ್ತು ಶೈಕ್ಷಣಿಕ ಭವನ ಉದ್ಘಾಟನೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result
    • Home
    • ಸಂಪಾದಕೀಯ
    • ಸುದ್ದಿ
      ಮಕ್ಕಳೊಂದಿಗೆ ಬಿಸಿಯೂಟ ಸವಿದ ಅಧಿಕಾರಿ ಮತ್ತು ಎಸ್.ಡಿ.ಎಂ.ಸಿ ಸದಸ್ಯರು

      ಮಕ್ಕಳೊಂದಿಗೆ ಬಿಸಿಯೂಟ ಸವಿದ ಅಧಿಕಾರಿ ಮತ್ತು ಎಸ್.ಡಿ.ಎಂ.ಸಿ ಸದಸ್ಯರು

      ಕುರಿ ಸಾಕಾಣಿಕೆ ಲಾಭದಾಯಕ ಡಾ. ಅಡಕಿ

      ಕುರಿ ಸಾಕಾಣಿಕೆ ಲಾಭದಾಯಕ ಡಾ. ಅಡಕಿ

      ಪತ್ರಕರ್ತರಾದವರು ಸತ್ಯವನ್ನು ಹೇಳಲು ಹಿಂಜರಿಯಬಾರದು..!

      ಪತ್ರಕರ್ತರಾದವರು ಸತ್ಯವನ್ನು ಹೇಳಲು ಹಿಂಜರಿಯಬಾರದು..!

      ಹಲಸಂಗಿ ದೃವತಾರೆ ಮಧುರಚೆನ್ನರು :ಸಾಹಿತಿ ಗೀತಯೋಗಿ

      ಹಲಸಂಗಿ ದೃವತಾರೆ ಮಧುರಚೆನ್ನರು :ಸಾಹಿತಿ ಗೀತಯೋಗಿ

      “ಬಾಯಿಯು ದೇಹಕ್ಕೆ, ಹೆಬ್ಬಾಗಿಲು; ಆರೋಗ್ಯಕರ ಹಲ್ಲುಗಳು-ಒಸಡುಗಳು, ಆರೋಗ್ಯಕರ ದೇಹದ ಸಂಕೇತ”

      “ಬಾಯಿಯು ದೇಹಕ್ಕೆ, ಹೆಬ್ಬಾಗಿಲು; ಆರೋಗ್ಯಕರ ಹಲ್ಲುಗಳು-ಒಸಡುಗಳು, ಆರೋಗ್ಯಕರ ದೇಹದ ಸಂಕೇತ”

      ಇಲ್ಲಿನ ಸೇವೆ ನನಗೆ ಸಾಕಷ್ಟು ತೃಪ್ತಿ ನೀಡಿದೆ : ತಾಲೂಕು ದಂಡಾಧಿಕಾರಿ ಬಲರಾಮ

      ಇಲ್ಲಿನ ಸೇವೆ ನನಗೆ ಸಾಕಷ್ಟು ತೃಪ್ತಿ ನೀಡಿದೆ : ತಾಲೂಕು ದಂಡಾಧಿಕಾರಿ ಬಲರಾಮ

      ಶಾಸಕರಿಂದ ಹುಬ್ಬೆ ಹುಣಸೆ ಡ್ಯಾಮ್ ಹಾಗೂ ಕಾಲುವೆಗಳ ವೀಕ್ಷಣೆ

      ಶಾಸಕರಿಂದ ಹುಬ್ಬೆ ಹುಣಸೆ ಡ್ಯಾಮ್ ಹಾಗೂ ಕಾಲುವೆಗಳ ವೀಕ್ಷಣೆ

      ಸರಕಾರಿ ಆದರ್ಶ ವಿಧ್ಯಾನಿಲಯಕ್ಕೆ  ಮೂಲಭೂತ ಸೌಲಭ್ಯ ನೀಡಲು ಶಾಸಕ ನಾಡಗೌಡರಿಗೆ ಮನವಿ

      ಸರಕಾರಿ ಆದರ್ಶ ವಿಧ್ಯಾನಿಲಯಕ್ಕೆ  ಮೂಲಭೂತ ಸೌಲಭ್ಯ ನೀಡಲು ಶಾಸಕ ನಾಡಗೌಡರಿಗೆ ಮನವಿ

      ಚಾರ್ಟರ್ಡ್ ಅಕೌಂಟೆಂಟ್ ಪಾಸಾದ ತರುಣ ಜೈನ ಗೆ ಸನ್ಮಾನ ಕಲಿತ ವಿದ್ಯೆ ದೇಶ ಸೇವೆಗೆ ಸಲ್ಲಲಿ: ನಡಹಳ್ಳಿ

      ಚಾರ್ಟರ್ಡ್ ಅಕೌಂಟೆಂಟ್ ಪಾಸಾದ ತರುಣ ಜೈನ ಗೆ ಸನ್ಮಾನ ಕಲಿತ ವಿದ್ಯೆ ದೇಶ ಸೇವೆಗೆ ಸಲ್ಲಲಿ: ನಡಹಳ್ಳಿ

      ಹೈಟೆಕ್ ಆಯುರ್ವೇದ ಆಸ್ಪತ್ರೆ ಮತ್ತು ಶೈಕ್ಷಣಿಕ ಭವನ ಉದ್ಘಾಟನೆ

      ಹೈಟೆಕ್ ಆಯುರ್ವೇದ ಆಸ್ಪತ್ರೆ ಮತ್ತು ಶೈಕ್ಷಣಿಕ ಭವನ ಉದ್ಘಾಟನೆ

      Trending Tags

      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಕ್ರೈಮ್‌
      • ಇತರೆ
      No Result
      View All Result
      voice of janata
      No Result
      View All Result
      Home ಸಂಪಾದಕೀಯ

      ಭೀಮಾತೀರ : ಕನ್ನಡಿಗರ ಹೃದಯ ವೈಶಾಲ್ಯತೆಗೆ ಹಿಡಿದ ಕೈಗನ್ನಡಿ

      Voiceofjanata.in

      April 27, 2025
      0
      ಭೀಮಾತೀರ : ಕನ್ನಡಿಗರ ಹೃದಯ ವೈಶಾಲ್ಯತೆಗೆ ಹಿಡಿದ ಕೈಗನ್ನಡಿ
      0
      SHARES
      278
      VIEWS
      Share on FacebookShare on TwitterShare on whatsappShare on telegramShare on Mail

      ಭೀಮಾತೀರ : ಕನ್ನಡಿಗರ ಹೃದಯ ವೈಶಾಲ್ಯತೆಗೆ ಹಿಡಿದ ಕೈಗನ್ನಡಿ

       

      Bhimateer SPL STORY written By Kori

       

        • ಶಾಸನಗಳ ಸಾಲಿನಲ್ಲಿ ಭೀಮಾರತಿಯಾಗಿ ಕೀರ್ತನೆಗಳ ಗಾನದಲಿ ಚಂದ್ರಭಾಗಾ

         

      ಕನ್ನಡ ನಾಡು ಭಾರತಕ್ಕೆ ಮತ್ತು ಇಡೀ ಜಗತ್ತಿಗೆ ಅನೇಕ ರೀತಿಯ ಮಹತ್ತರವಾದ ಕೊಡುಗೆಗಳನ್ನು ನೀಡಿದೆ. ಅದರಲ್ಲೂ ಸ್ವಧರ್ಮಿಯರಿರಲಿ ಅನ್ಯಮತ ಧರ್ಮದವರಿರಲಿ ಅವರೆಲ್ಲರ ಧಾರ್ಮಿಕ ಭಾವನೆಗಳಿಗೆ, ಅವರ ನಂಬಿಕೆಯ ಆಶೋತ್ತರಗಳಿಗೆ ಸ್ಪಂದಿಸಿ, ಅವರೊಂದಿಗೆ ಯಾವ ಬೇದ ಭಾವ ಮಾಡದೇ, ಸಹಿಷ್ಣುತೆಯ ಸುಮದ ಘಮದ ಪರಿಮಳವನ್ನು ಆಘ್ರಾಣಿಸಿದೆ.

      ದೇಶ-ವಿದೇಶಗಳ ಯಾತ್ರಿಕರಿಗೆ, ಬಾಂಧವ್ಯದ ಬಿನ್ನವತ್ತಳಿಕೆಯ ಪತ್ರ ನೀಡಿ ರತ್ನಗಂಬಳಿ ಹಾಸುತ್ತ ಸ್ವಾಗತ ನೀಡಿದೆ. ಅದು ಈಜಿಪ್ಟನ ಯಾತ್ರಿಕ ಟಾಲಮಿಯಿಂದ ಹಿಡಿದು ಕನ್ನಡ ಕಸ್ತೂರಿಯನ್ನು ವಿಶ್ವದಾದ್ಯಂತ ಹರಡಿಸಿದ ಫರ್ಡಿನಾಂಡ್ ಕಿಟಲ್ ರವರೆಗೆ ಎಲ್ಲರನ್ನು ತನ್ನವರೆಂದು, ತನ್ನ ಮಡಿಲ ಮಕ್ಕಳೆಂದು, ಒಡಲ ಕುಡಿಗಳೆಂದು ಒಪ್ಪಿಕೊಂಡಿದೆ. ಅವರ ಮೇಲೆ ಭ್ರಾತತ್ವದಿಂದ ಕೂಡಿದ ವಾತ್ಸಲ್ಯಗಳ ಪ್ರೇಮಪೂರಿತ ಪುಷ್ಪವೃಷ್ಟಿಗಳ ಸುರಿಮಳೆಗರೆದಿದೆ. ಇದು ಕನ್ನಡಿಗರ ಹೃದಯ ವೈಶಾಲ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ.

      ಇನ್ನೂ ಕನ್ನಡ ನಾಡಿನ ವಿಸ್ತಾರ, ವ್ಯಾಪಕತೆ ಪ್ರಾಚೀನತೆಯ ಕುರಿತು ತಿಳಿದುಕೊಳ್ಳಬೇಕಾದರೇ,ಅದು ಗ್ರೀಕರ ನಾಟಕಗಳಲ್ಲಿ ಪ್ರಯೋಗಿಸಿದ ಕನ್ನಡದ ಕಸ್ತೂರಿ ಪದಗಳಿಂದ ಹಿಡಿದು, ಅದರ ಕಂಪುಗಳನ್ನು ಮೂಸುತ್ತ ಸಾವಿರಾರು ವರ್ಷಗಳ ಕನ್ನಡ ನಾಡಿನ ಇತಿಹಾಸದ ಹೆಜ್ಜೆ ಗುರುತಿನ ಜನಪದ ಹಾಡಾಗಿರುವ ಪುಣ್ಯಕೋಟಿಯ ಗೋವಿನ ಹಾಡಿನಲ್ಲಿ ಕರ್ನಾಟಕ ಎಂದು ಲಯ- ಲಾಲಿತ್ಯ ಬದ್ದವಾಗಿ ಗುನಗುಟ್ಟುವಿಕೆಯನ್ನು ಕೇಳಬಹುದು.!

      ಹೀಗೆ ಕನ್ನಡದ ಅಸ್ಮಿತೆಯೂ ಮಂದಾರ ಪರ್ವತದಂತೆ ಬಹು ಎತ್ತರಕ್ಕೇರಿ ಕದಂಬರ ಕಾಲದಲ್ಲಿ ಹಾಲಾಗಿ ಹರಿದು,ಹಲ್ಮಿಡಿ ಶಾಸನದಲ್ಲಿ ಉಕ್ತಿಯಾಗಿ ಬೆಳೆಯುತ್ತ ಕೆನೆಗಟ್ಟಿ, ವಿಶ್ವಲಿಪಿಗಳ ರಾಣಿಯಾಗಿ ಕಂಗೊಳಿಸುತ್ತ ಕೆನೆ ಮೊಸರಾಗುತ್ತ
      ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂದು ಬಣ್ಣಿಸುತ್ತ ಬೆಣ್ಣೆಯಾಗಿ, ಅದು ಎಂಟು ಜ್ಞಾನ ಪೀಠಗಳ ಪಡೆಯುವದರ ಮೂಲಕ ಹೆರತುಪ್ಪವಾಗಿ ಘಮಘಮಿಸುತ್ತಿದೆ.!

       

      ಕನ್ನಡದ ನಾಗಾಲೋಟವು ಅಂದು ಹನುಮನುದಯಿಸಿದ ಅಮೃತಘಳಿಗೆಯಿಂದ ಹಿಡಿದು, ಜಗತ್ತಿನ ನಾಲ್ಕು ಪರಮ ಶ್ರೇಷ್ಠವಾದ ಸಾಮ್ರಾಜ್ಯಗಳಲ್ಲಿ, ವಿಜಯನಗರ ಸಾಮ್ರಾಜ್ಯವು ಒಂದಾಗಿದ್ದು ಅದು ವಿಶ್ವದ ಜನ ನಿಬ್ಬೆರಗಾಗುವಂತೆ ಬೆಳೆದಿತ್ತು.ಅಂದಿನ ನಾಲ್ಕು ಸುವರ್ಣ ಸಾಮ್ರಾಜ್ಯಗಳಲ್ಲಿ ಒಂದಾಗಿದ್ದ ರೋಮ ಸಾಮ್ರಾಜ್ಯದ ಶ್ರೀಮಂತಿಕೆಯಷ್ಟೇ, ವಿಜಯನಗರ ಸಾಮ್ರಾಜ್ಯ ಝಗಮಗಿಸುತ್ತಿತ್ತು. ಮುತ್ತು-ರತ್ನಗಳ ವಿಜಯಮಾಲೆ ಹೊತ್ತು, ಸಮರೋತ್ಸಾಹದಿಂದ ಯುದ್ಧ ಭೂಮಿಯ ಮಧ್ಯದಲ್ಲಿ ರಣಗಂಬ ನೆಟ್ಟು, ವಿಜಯ ದುಂದುಬಿ ಮೊಳಗಿಸಿ, ಕೀರ್ತಿಯ ಧವಳ ಶಿಖರವೇರಿದ ಸಾಹಸವನ್ನು ಯಾರು ಎಂದೆಂದಿಗೂ ಮರೆಯಲಾರರು.

       

      ಕರುನಾಡಿನ ಮಣ್ಣಿನ ಮಹಿಮೆಯ ಕೀರ್ತಿಯ ಧವಳ ಶಿಖರ ಹುಡುಕುತ್ತ, ಹಲವಾರು ಶತಮಾನಗಳ ಹಿಂದೆ ಚಂದ್ರಗುಪ್ತ ಮೌರ್ಯ ಶ್ರವಣಬೆಳಗೊಳದಲ್ಲಿ ನೆಲೆ ನಿಂತು ತನ್ನ ಮೋಕ್ಷ ಸಂಪಾದನೆಯ ದಾರಿಯನ್ನು ಕನ್ನಡ ನೆಲದಲ್ಲಿ ಕಂಡುಕೊಂಡನು. ಕನ್ನಡದ ಆಳಸರ ಪಾರುಪತ್ಯ ಅದರ ಹಿರಿಮೆ, ಗರಿಮೆ ಎಂದಿಗೂ ಅನುಪಮವಾದುದ್ದು. ವೀರರು ಧೀರರಾಳಿದ ಅಂದಿನ ಕರುನಾಡಿನ ನೆಲದಲ್ಲಿ ಪಂಡರಪುರ ಪಾಂಡುರಂಗನ ವಿಠ್ಠಲನ ಕ್ಷೇತ್ರವು ಒಂದಾಗಿತ್ತು ಎಂಬುವುದು ಹೆಮ್ಮೆಯ ಸಂಗತಿ.!

       

      ದೇಶದ ನಾಲ್ಕು ದಿಶೆಗಳಲ್ಲಿ ತನ್ನ ಮಹಿಮೆಗಳಿಂದ ಪ್ರಖ್ಯಾತವಾಗಿರುವ ಇಂದಿನ ಮಹಾರಾಷ್ಟ್ರದ ಪಂಡರಪುರ ಪುಣ್ಯಕ್ಷೇತ್ರ ಕೂಡಾ ಕನ್ನಡ ನಾಡಿನ ಆಳ್ವಿಕೆಗೆ ಒಳಪಟ್ಟಿತ್ತು. ಪಂಡರಪುರದಲ್ಲಿ ಪರ್ವ ದಿನಗಳಲ್ಲಿ ಸುಮಾರು ಆರು ಲಕ್ಷ ವಾರಿಕರರು, ಮತ್ತು ಅಸಂಖ್ಯಾತ ವಿಠ್ಠಲನ ಭಕ್ತರನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಇಂತಹ ಅತ್ಯಮೋಘವಾದ ದೇವಾಲಯದ ನಿರ್ಮಾಣದಾತನೇ, ಕನ್ನಡ ನಾಡಿನ ಹೊಯ್ಸಳ ದೊರೆ (ಬಿಟ್ಟಿದೇವ) ವಿಷ್ಟುವರ್ಧನ.! ಪಂಡರಪುರದ ಭಾಗ್ಯದ ದೇವರಾಗಿರುವ ವಿಠ್ಠಲನು ತನ್ನ ಭಕ್ತರ ನಿತ್ಯ ನಿರಂತರವಾಗಿ
      ನುಡಿಸುವ ಏಕತಾರಿಯ ತಂಬೂರಿಯ ನಾದವನ್ನು ಕೇಳುತ್ತ ಭಕ್ತರ ಪಾಲಿನ ಕಾಮದೇನು ಕಲ್ಪವೃಕ್ಷವಾಗಿದ್ದಾನೆ.!

       

      ಸಂಶೋಧನೆಯ ಆಭಿಪ್ರಾಯದೊಂದಿಗೆ,
      ಪಾಂಡುರಂಗನಪುರವೇ ಪಂಡರಪುರವಾಯಿತು!

       

      ಪಂಡರಪುರ ಪಾಂಡುರಂಗನಪುರ, ಪಂಡರಪುರ, ಪಾಗನಪುರ,
      ಪಾಂಡುರಂಗೆ ಎಂಬುದು ಕನ್ನಡ ಶಬ್ದವೆಂದು ಒಂದು ವಿಚಾರವಾಗಿದೆ.! ಇನ್ನೊಂದು ಮೂಲಗಳಲ್ಲಿ ಪಂಡರಾದ್ರಿರಂಗ ಪಾಂಡುರಾದ್ರಿ ರಂಗ ಎಂಬುವದು ಬಿಳಿಗಿರಿ ರಂಗ>ಪಂಡರಾದ್ರಿರಂಗ>ಪಾಂಡು>ರಂಗ>ಪಂಡರಾದ್ರಿರಂಗ ಎಂಬುವದು ಸಂಸ್ಕೃತ ರೂಪವಾಗಿದ್ದು ಆ ಶಬ್ದ ಆಕುಂಚನಗೊಂಡು ಪಾಂಡುರಂಗ ಆಯ್ತು ಎಂದು ಒಂದು ಜನಮಾನಸದ ಅನಿಸಿಕೆಯಾಗಿದೆ. ಇನ್ನೂ ಮರಾಠಿ ಭಾಷೆಯಲ್ಲಿ ಪಾಂಡರಾ ಎಂದರೇ ಬಿಳಿ ಬಣ್ಣ ಎಂದಾಗುವದು. ಮರಾಠಿಯಲ್ಲಿ ಪಾಂಡರಾ ಎಂದರೇ ಬಿಳಿ ವರ್ಣ ವಾಗಿದೆ. ಮರಾಠಿಯಲ್ಲಿ ಇಟ ಎಂದರೇ ‘ಇಟ್ಟಿಗೆ ‘ ಮೇಲೆ ನಿಂತವನೇ ವಿಠ್ಠಲ ! ಎನ್ನುವ ವಿಚಾರವಿದೆ. ಇನ್ನೂ ರಾಮಕೃಷ್ಣ ಭಂಡಾರ್ಕರರವರು ಪಾಂಡುರಂಗನಪುರವೇ ಪಂಡರಪುರವಾಯಿತೆಂದು ಈ ಶಬ್ದದ ಉತ್ಪತ್ತಿಯ ಕುರಿತು ತಮ್ಮ ಸಂಶೋಧನೆಯ ಮೂಲಕ ಪಂಡರಪುರದ ಕುರಿತು ಮತ್ತಷ್ಟು ಬೆಳಕು ಚೆಲ್ಲುತ್ತಾರೆ.

       

      ಪಂಡ (ಪಂಡರು) ಎಂಬುವದು ಯಾದವರ ರೀತಿಯಲ್ಲಿ ಉತ್ತರ ಭಾರತದ ಒಂದು ಪ್ರಾಚೀನ ಸಮುದಾಯವಾಗಿದ್ದು ಹೆಚ್ಚಾಗಿ ಇವರು ಬಲಾಡ್ಯರಾಗಿದ್ದು ರಾಜರು ರಾಜಕುಲದವರಾಗಿದ್ದುಕೊಂಡು ರಾಜ್ಯಭಾರ ಮಾಡುವರು. ಇವರಿಂದ ಪಂಡ>ಪಾಂಡು> ಪಾಂಡವರು ಎಂಬ ಶಬ್ದ ಬಂದಿದೆ ಎನ್ನಲಾಗಿದೆ. ಇವರು ಪ್ರಾಚೀನ ಕಾಲದಲ್ಲಿ ವಾಸಿಸುತ್ತಿದ್ದ ಪ್ರದೇಶ ಪಂಡರಪುರ. ಇವರು ಆರಾಧಿಸುತ್ತಿದ್ದ ಕೃಷ್ಣನ ಪಂಡರಪುರವೇ ಪಂಡರಪುರವಾಯಿತೆಂದು ಪ್ರತೀತಿಯನ್ನು ತಮ್ಮ ತರ್ಕದೊಂದಿಗೆ ಡಾ. ವಸಂತಕುಮಾರ ಪೆರ್ಲ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

      ಕ್ರಿ.ಶ.1000 ಕಾಲಕ್ಕೆ ಮುಂಚಿತವಾಗಿ ವಿಠಲ ಆರಾಧನೆಯು ಕರ್ನಾಟಕದಿಂದ ಹಿಂದೆ ಶೈವ ನಗರವಾಗಿದ ಪಂಡರಪುರಕ್ಕೆ ಸ್ಥಳಾಂತರವಾಯಿತು ಎಂದು ವಾಷಿಂಗ್ಟನ್ ವಿಶ್ವವಿದ್ಯಾಲಯದ ಕ್ರಿಸ್ಟನ್ ನೋವೆಲ್ ಸೂಚಿಸುತ್ತಾರೆ.

       

      ಕೃಷ್ಣದೇವರಾಯನ ಸುಪರ್ದಿಯ ಹಂಪಿಯಲ್ಲಿ ವಿಠ್ಠಲ ವಿರಾಜಮಾನನಾಗಿದ್ದ

       

      ನಂಬಿಕೆ, ದಂತಕತೆಯ ಪ್ರಕಾರ ವಿಜಯನಗರವನ್ನಾಳಿದ ಕೃಷ್ಣದೇವರಾಯನು ತನ್ನ ರಾಜ್ಯವನ್ನು ಆಳುತ್ತಿದ್ದಾಗ,
      ಒಂದು ಕಡೇ, ಯುವನರ (ಸುಲ್ತಾನರ) ದಾಳಿಯನ್ನು ಪ್ರಬಲವಾಗಿ ಎದುರಿಸುತ್ತಿದ್ದ. ಇನ್ನೊಂದು ಕಡೆ ತನ್ನ ರಾಜ್ಯದ ಸುತ್ತು ಮುತ್ತಲಿನ ಇತರ ರಾಜರುಗಳನ್ನು ಎದುರಿಸುವದು ಆತನಿಗೆ ದಿನ ನಿತ್ಯದ ಸವಾಲಾಗಿತ್ತು. ಇವೆಲ್ಲ ಸಂದಿಗ್ದ ಪರಿಸ್ಥಿತಿಗಳಲ್ಲಿ ಆತ ಪಂಡರಾಪುರದ ಪಾಂಡುರಂಗ ವಿಠಲ ಮೂರ್ತಿಯು ಸುರಕ್ಷತೆಯ ಕುರಿತು ಒಳಗೊಳಗೆ ಆತ ಚಿಂತಿತನಾಗಿದ್ದ. ಇನ್ನೊಂದು ಮೂಲಗಳ ಪ್ರಕಾರ ಕೃಷ್ಣದೇವರಾಯ ಪಾಂಡುರಂಗನ ವಿಗ್ರಹಕ್ಕೆ ಹಂಪಿ ಕ್ಷೇತ್ರದಲ್ಲಿ ವಿರಾಜಮಾನವಾಗಿಸಲು ಕಾರಣ ತನ್ನ ರಾಜ್ಯಾಡಳಿತದ ದಿನಗಳಲ್ಲಿ ಆತ ಧಾರ್ಮಿಕವಾಗಿ ಗೌರವ ಸಂಪಾದಿಸಲು, ಕೀರ್ತಿಯನ್ನು ಗಳಿಸಲು ವಿಜಯನಗರ ಸಾಮಾಜ್ಯದಲ್ಲಿ ವಿಠ್ಠಲನನ್ನು ಪ್ರತಿಷ್ಠಾಪನೆ ಮಾಡಿದನೆಂದು ಬಲ್ಲವರ ಮಾತಾಗಿದೆ.

      ಒಂದು ದಿನ ವಿಜಯನಗರದ ರಾಜನಾಗಿದ್ದ ಕೃಷ್ಣದೇವರಾಯನ ಕನಸಿನಲ್ಲಿ ಪಾಂಡುರಂಗ ವಿಠಲನು ಬಂದು ತನ್ನನ್ನು ಆದಷ್ಟು ಬೇಗ ಹಂಪಿಗೆ ಬರ ಮಾಡಿಕೊಳ್ಳಲು ಆದೇಶಿಸಿದಂತಾಯಿತು.
      ಅದರಂತೆ ಏಕನಾಥರ ಮಗ ಬಾನುದಾಸರಿಂದ ಪಂಡರಪುರದಿಂದ ಪಾಂಡುರಂಗ ವಿಠಲ ಮೂರ್ತಿಯು ಬರಮಾಡಿಕೊಂಡ ಕೃಷ್ಣದೇವರಾಯನು ಅದನ್ನು ಆರಾಧಿಸಿ ತೊಡಗಿದ. ಹೀಗೆ ಬಹಳ ದಿನಗಳ ಕಳೆದ ನಂತರ
      ಮತ್ತೆ ಪಾಂಡುರಂಗನ ವಿಠಲ ಮೂರ್ತಿಯನ್ನು ಅದರ ಸ್ವಸ್ಥಾನವಾದ ಪಂಡರಪುರಕ್ಕೆ ಕಳುಹಿಸುವಂತೆ ಪಾಂಡುರಂಗ ವಿಠ್ಠಲ ದೇವರಿಂದ,ಕೃಷ್ಣ ದೇವರಾಯನಿಗೆ ಪ್ರೇರಣೆಗಳು ದೊರಕಿದವು. ಆಗ ಕೃಷ್ಣದೇವರಾಯನು ವಿಠ್ಠಲನ ಮೂರ್ತಿಯನ್ನು ತನ್ನ ರಾಜಧಾನಿ ಹಂಪಿಯಿಂದ ಪುನಃ ಪಂಡರಪುರಕ್ಕೆ ಭಾನುದಾಸರ ಮೂಲಕ ಸ್ಥಳಾಂತರ ಮಾಡಿದ ಎಂಬುದು ಒಂದು ನಂಬಿಕೆಯ ಆಧಾರದ ಮೇಲಿನ ದಂತಕತೆಯಿದೆ..

      ಶಾಸನಗಳ ಪ್ರಕಾರ ಪಾಂಡುರಂಗ ವಿಠಲ ದೇವಸ್ಥಾನವನ್ನು ಹೊಯ್ಸಳ ದೊರೆ ವಿಷ್ಣುವರ್ಧನನು ಕ್ರಿ.ಶ.1108 ಮತ್ತು 1152 CE. ನಡುವೆ ಸಂತ ಪುಂಡಲೀಕರಿಂದ ವಿಷ್ಣುವರ್ಧನನಿಗೆ ಮನವರಿಕೆ ಮಾಡಿದ ನಂತರ ನಿರ್ಮಿಸಿದನು ಎಂದು ಡೆಕ್ಕನ್ ಕಾಲೇಜು ಮ್ಯಾಟೆಯವರ ತಿಳಿಸುತ್ತಾರೆ.!

      ಅದರಂತೆ ಕ್ರಿ.ಶ. 1209 ರಲ್ಲಿ ಆಳಂದಿಯಲ್ಲಿ ದೊರೆತ ವಿಠ್ಠಲ ರಖುಮಾಬಾಯಿಯನ್ನು ಉಲ್ಲೇಖಿಸುವ ಶಾಸನ ಅತ್ಯಂತ ಹಳೆಯ ಶಾಸನವಾಗಿದೆ ಎಂದು ರಾನಡೆಯವರು ಅದರ ಕುರಿತು ಮಾಹಿತಿ ಒದಗಿಸುತ್ತಾರೆ.!

      ಕ್ರಿ.ಶ. 1236 ರಲ್ಲಿ ಕನ್ನಡದ ದೊರೆ ಹೊಯ್ಸಳ ಸೋಮೇಶ್ವರ ಶಾಸನದಲ್ಲಿ ಭೀಮರಥಿ ನದಿ ತೀರ ಸಂ ನಿವಿಷ್ಟ ಪಂಡರಿಗೆ ನಾಮಾನಾಂ ಮಹಾಗ್ರಾಮ… ಎಂಬ ಉಲ್ಲೇಖದ ಶಾಸನದಲ್ಲಿ ಕಂಡು ಬರುವದಲ್ಲದೇ, ಹಾಗೆ 1249 ರ ಇನ್ನೊಂದು ತಾಮ್ರ ಶಾಸನದಲ್ಲಿ ಯಾದವ ರಾಜನಾದ ಕೃಷ್ಣನು ವಿಷ್ಣುವಿನ ಸನ್ನಿದಿಯಲ್ಲಿ ಭೀಮರತಿ ದಡದ ಪೌಂಡ್ರಿ ಕ್ಷೇತ್ರ ದಾನ ನೀಡವದರೊಂದಿಗೆ ನನ್ನ ಹೆಸರನ್ನು ಉಲ್ಲೇಖ ಮಾಡಲಾಗಿದೆ.

      ಇನ್ನೂ ಹದಿನೇಳನೆ ಶತಮಾನದ ಸಂತ ತುಕಾರಾಮರ ರಚಿಸಿದ ಸುಪ್ರಸಿದ್ಧ ಮಾಝೆ ಮಾಹೇರ ಪಂಢರಿ ಅಭಂಗ (ಕೀರ್ತನೆ)ಗಳಲ್ಲಿ ಮಾಝಿ ಬಹಣ ಚಂದ್ರಭಾಗ ಕರಿತಸ್ಯ ಪಾಪ ಭಂಗ.! ನನ್ನ ಸಹೋದರಿ ಚಂದ್ರಭಾಗಾ (ಚಂದ್ರಾಕಾರದಲ್ಲಿ ಹರಿಯುತ್ತಿರುವದರಿಂದ ಚಂದ್ರಭಾಗ ಹೆಸರು ಬಂದಿದೆ) ನಮ್ಮ ಪಾಪಗಳನ್ನು ಕಳೆದು ಜೀವನವನ್ನು ಪಾವನಗೊಳಿಸುತ್ತಾಳೆ.! ಎಂದು ಹಾಡಿ ನನ್ನನ್ನು ಹೊಗಳಿ ನನ್ನ ಪಾವಿತ್ಯತೆಯನ್ನು ಲೋಕಕ್ಕೆ ಸಾರಿದರು. ಸಂತ ತುಕಾರಾಮರ ತಮ್ಮ ಚಂದಾದ ಅಭಂಗಗಳಿಂದ ನನ್ನ ಕೀರ್ತಿಗೆ ಕಲಶವಿಟ್ಟಂತೆ ದೇಶದಾದ್ಯಂತ ನನ್ನ ಮಹಿಮೆಗೆ ಚೆಂಬೆಳಕು ಚೆಲ್ಲಿದರು. ಸಂತ ತುಕಾರಾಮರು ನಿತ್ಯ ನನ್ನಲ್ಲಿ ಮಿಂದು ತಮ್ಮ ಕೊನೆಯ ಉಸಿರನ್ನು ಪಾಂಡುರಂಗ ವಿಠ್ಠಲನ ದೇವಸ್ಥಾನ ಮೆಟ್ಟಿಲು ಮೇಲೆ ಬೀಡುತ್ತ ಮೋಕ್ಷ ಕಂಡುಕೊಂಡರು.

       

      ಇನ್ನೂ ಕನ್ನಡದ ರಾಷ್ಟ್ರಕೂಟರ ಆಳ್ವಿಕೆಯ ಕ್ರಿ.ಶ. 516 ತಾಮ್ರ ಶಾಸನಗಳಲ್ಲಿ ಪಾಂಡುರಂಗ ಎನ್ನುವ ಹೆಸರು ಉಲ್ಲೇಖವಾಗಿದೆ.! ಅದರ ನಂತರ ಈ ಪರಂಪರೆ ಮುಂದುವರೆದು 6ನೇ ಶತಮಾನದಲ್ಲಿ ವಿಠ್ಠಲನ ಆರಾಧನೆ ಪ್ರಾರಂಭವಾಗಿತ್ತು ಎನ್ನುವದು ರಿಚರ್ಡ್ ಮ್ಯಾಕ್ಸ್ ವೆಲ್ಲರ ಅಭಿಮತವಾಗಿದೆ.! ಇದಕ್ಕೆ ಪೂರಕವೆಂಬಂತೆ ಕ್ರಿ.ಶ.8ನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರಿಗೆ ಅನ್ವಯಿಸುವ ಪಾಂಡುರಂಗ ಶತಕ ಸ್ತೋತವು ವಿಠ್ಠಲನ ಆರಾಧನೆಯನ್ನು ತೋರಿಸಿ ಕೊಡುತ್ತದೆ.! ದಕ್ಷಿಣಾ ಪಥದ ಬಸಾಲ್ವ ಶಿಲೆಯಲ್ಲಿ ಕೆತ್ತಲಾದ 1984 ರಲ್ಲಿ ಪ್ರಕಟವಾದ ಸೊಲ್ಲಾಪುರ ಗೆಜಿಟಿಯರ್ ನಲ್ಲಿ ಭಗವಾನ ಲಾಲ ಇಂದ್ರಾಜೀಯವರು ಒಂದು ಹೆಜ್ಜೆ ಮುಂದೆ ಹೋಗಿ ವಿಠ್ಠಲನ ಮೂರ್ತಿಯೂ ಗುಪ್ತರ ಕಾಲದ್ದೆಂದು ವಿವರಿಸುತ್ತಾರೆ.!

       

      ಬಿಟ್ಟಿ>ಬಿಟ್ಟಿಗ>ಬಿಟ್ಟಲ>ಇಟ್ಟಲ> ವಿಠಲ>ವಿಷ್ಣುವರ್ಧನ

       

      ಪಂಡರಪುರದ ವಿಠಲನ ಚರಿತ್ರೆ ಬಹಳಷ್ಟು ನಿಗೂಢ ತಯಿಂದ ಮತ್ತು ಕುತೂಹಲಕಾರಿ ವಿಷಯಗಳಿಂದ ಕೂಡಿದೆ. ಪಾಂಡುರಂಗನ ಆರಾಧನೆಯೂ ವೈದಿಕ ಅಥವಾ ವೈದಿಕ ಪೂರ್ವಕಾಲದ್ದಾಗಿದೆ. ಅದು ಕೃಷ್ಣನ ಆರಾಧನೆಗಿಂತಲೂ ಹಿಂದಿನದು.! ಆಗಿನ ಕಾಲದ ಜನರು ತಮ್ಮ ಧನಕರುಗಳನ್ನು ಉಳಿಸಿಕೊಳ್ಳಲು ತಮ್ಮ ಪ್ರಾಣವನ್ನು ನೀಡಿದ ವಿವಿಧ ಸ್ಥಳಿಯ ವೀರರ ಮಿಶ್ರಣವಾಗಿದೆ.! ಮಹಾರಾಷ್ಟ್ರದಲ್ಲಿ ಧನಗಳ ಹೊಂದಿರುವ ಧನಗಾರರು ಪೂಜಿಸುತ್ತ ಗೋಪಾಲಕ ವಂಶಾವಳಿ ಹೊಂದಿದ ಯಾದವ ರಾಜವಂಶದ ಉದಯವು ವಿಠ್ಠಲನು ಕೃಷ್ಣನಾಗಿ ಕಾರಣವಾಗಿರಬಹುದೆನ್ನುತ್ತಾರೆ ರಾ. ಚಿಂ.ಢೇರೆಯವರು.

       

      ಮೊದಲಿಗೆ ವಿಠ್ಠಲನು ರಾಸುಗಳನ್ನು ಹೊಂದಿದ ಮಹಾರಾಷ್ಟ್ರದ ಯಾದವ,ಗವಳಿ ಧನಗರ ಜನಾಂಗದ ಸಂಸ್ಕೃತಿಕ ನಾಯಕನಾಗಿ ಆರಾಧಿಸಲ್ಪಟ್ಟಿದ್ದಾನೆ ಎನ್ನಲಾಗಿದೆ.
      ‘ವಿಠ್ಠಲನು ಗತಿಯಿಲ್ಲದವರ ನಿರ್ಗತಿಕರ ಬಡವರ ಪಾಲಿಗೆ ಹೆಚ್ಚು ಮಾನವೀಯನಾಗಿ’ ಅವರಿಗೆ ಹತ್ತಿರವಾಗಿ ಮಹಾ ಮಹೀಮನಾಗಿ ಬೆಳೆದು ನಿಂತನು. ಇನ್ನೂ ಬಿಹಾರದ ಅಹೀರ ದೇವತೆಗಳಲ್ಲಿ ಹೆಸರು ವಾಸಿಯಾಗಿರುವ ಬೀರ ಕುವರನು ಸೊಂಟದ ಮೇಲೆ ಕೈಯಿಟ್ಟ ಮೂರ್ತಿಗಳು ಪಾಂಡರಂಗ ವಿಠ್ಠಲನ ಮೂರ್ತಿಗೆ ಸಾಮ್ಯತೆಯ ಹೋಲಿಕೆಯಿದೆ.! ಎಂದು ಡೇರೆಯವರು ತಮ್ಮ ವಿಠ್ಠಲ ಒಂದು ಮಹಾ ಸಮನ್ವಯ ಗ್ರಂಥದಲ್ಲಿ ತಿಳಿಸುತ್ತಾರೆ. ಬಲು ವಿಶಿಷ್ಟವಾದ ಸಂಗತಿ ಎಂದರೆ, ಕಡೋಲಿ ಎನ್ನುವ ಭೀರೇಶ್ವರ ದೇವಸ್ಥಾನದ ಅಕ್ಕಪಕ್ಕದಲ್ಲಿ ಸೊಂಟದ ಮೇಲೆ ಕೈಯಿಟ್ಟ ವಿಠ್ಠಲನ ಮೂರ್ತಿಯನ್ನು ಹೋಲುವ ಹಲವು ಶಿಲ್ಪಗಳಿವೆ. ಬೀರದೇವರ ಪರಂಪರೆಯಲ್ಲಿ ವಿಠ್ಠಲ ಹೆಸರಿನ ಒಬ್ಬ ದೇವರು ಭೀರ ದೇವರ ಒಡನಾಡಿಯಾಗಿದ್ದು ಕಂಡು ಬರುತ್ತದೆ. ವಿಠ್ಠಲನು ಭೀರ ದೇವರಂತೆ ಮಹಾಲಿಂಗ ರಾಯರಿಗೆ ಗುರುವಾಗಿದ್ದು ಮಾರ್ಗದರ್ಶನ ನೀಡಿದ ಮಹಾತ್ಮನಾಗಿದ್ದಾನೆ.! ಸೊಂಟದ ಮೇಲೆ ಕೈಯಿಟ್ಟ ಇವನ ಚಿತ್ರಗಳು ಕಡೋಲಿಯ ದೇವಾಸ್ಥಾನದ ಆವರಣದಲ್ಲಿ ಕಂಡು ಬರುತ್ತವೆ. (ಸೊನ್ಯಾಳ ಗ್ರಾಮದ ಇಟರಾಯ ಕೌಜಲಗಿ ಗ್ರಾಮದ ವಿಠೋಬಾ
      ಕಡೋಲಿ ವಿಠೋಬಾ ಗ್ರಾಮಗಳಲ್ಲಿ ವಿಠೋಬಾನ ಹೆಸರಿನ ಜಾತ್ರೆಗಳು ನಡೆಯುತ್ತವೆ.)ಇನ್ನೂ ಮುಂದುವರೆದಂತೆ ಹಾಲುಮತ ಪರಂಪರೆಯಲ್ಲಿ ವಿಠೋಬಾನ ಪತ್ನಿಯ ಹೆಸರು ಪದುಬಾಯಿ ಪದ್ಮಾವತಿ ಎಂಬುದಾಗಿದೆ.

       

      ಇನ್ನೂ ಕರ್ನಾಟಕದ ಹೆಸರಾಂತ ಸಂಶೋಧಕರಾಗಿದ್ದ ಶಂ.ಭಾ. ಜೋಷಿಯವರು ತಮ್ಮ ಆಳವಾದ ಅಧ್ಯಯನದ ಪ್ರಕಾರ ಪಂಡರಪುರದ ವಿಠ್ಠಲನನ್ನು ಬಿಟ್ಟಿ>ಬಿಟ್ಟಿಗ> ಬಿಟ್ಟಲ> ಇಟ್ಟಲ ವಿಠಲ>ವಿಷ್ಣುವರ್ಧನ ಎಂಬ ನಿಷ್ಪತ್ತಿಯನ್ನು ಸಾದರ ಪಡಿಸುತ್ತಾರೆ.! ಈ ವಿಷಯಕ್ಕೆ ನಿಕಟವಾಗಿ
      ಪೂರ್ವ ಚಾಳುಕ್ಯರ ರಾಜಮನೆತನದಲ್ಲಿ ಹತ್ತಕ್ಕೂ ಹೆಚ್ಚು ಜನ ಬಿಟ್ಟಿದೇವ ಎಂಬ ಹೆಸರಿನ ರಾಜರೂ ಆಳಿದ್ದಾರೆ.! ಹೊಯ್ಸಳ ವಿಷ್ಣುವರ್ಧನ ಮೊದಲಿನ ಹೆಸರು ಬಿಟ್ಟಿಗ ವಿಟ್ಟಿಗ ವಿಠಲ ಎಂಬುದಾಗುವದು.!

       

      ( ಶ್ರೀ ವಿಠಲ ಮಹಾ ಸಮನ್ವಯ ಪುಟ 289/ಲಿಂಗದಳ್ಳಿ ಹಾಲಪ್ಪ ಆರ್ ಸಿ ಡೇರೆ ಅವರ ಚಿಂತನೆಗಳು ಪುಟ 33)

       

      ಡೆಕ್ಕನ್ ಕಾಲೇಜನ ಮಾಟೆಯವರ ಪ್ರಕಾರ ಪುಂಡಪುರದ ವಿಠ್ಠಲ ಮಂದಿರ ನಿರ್ಮಿಸಿದ, ಕನ್ನಡ ನೆಲದ ರಾಜ ವಿಷ್ಣುವರ್ಧನನ್ನು ಬಿಟ್ಟಿದೇವ ಅಂದರೇ, ಕಟ್ಟಡವನ್ನು ಕಟ್ಟಿದ ರಾಜ ಎಂಬ ಹೆಸರಿನ ಒಂದು ನಿಷ್ಟನ್ನ ವಾದ ವಿಠ್ಠಲ ಎಂದು ಹೆಸರಿಸಲಾಯಿತು. ಇದಕ್ಕೆ ಪೂರಕವಾಗಿ ವಿಠುರಾಯ ರಾಯ/ ರಾಯ ಎಂದರೇ,ರಾಜ ಎಂದು ಕರೆಯಲಾಗಿದೆ ಎನ್ನುತ್ತಾರೆ.
      ಕವಿ ಸಂತ ಜ್ಞಾನೇಶ್ವರರ ಗ್ರಂಥದಲ್ಲಿ ‘ಕಾನಡ’ ರಾಜಾ ಪಂಡರೀಚ.! ಎಂಬ ಪ್ರದೇಶವಾಚಕ ಸಾಲುಗಳಿರುವ ಗೀತೆಯಲ್ಲಿ ಕನ್ನಡ ಕರ್ನಾಟಕದ ಅಸ್ಮಿತೆ ತೋರತ್ತದೆ.? ಎನಿಸುವದು. ಆದರೆ ಮರಾಠಿಯಲ್ಲಿ ಕಾನಡ ಶಬ್ದವು ‘ತಿಳಿದುಕೊಳ್ಳಲು ಕಠಿಣನಾದವನು’ ಎಂದಾಗುವದು. ಒಟ್ಟಾರೆ ಪಾಂಡುರಂಗ ವಿಠ್ಠಲನ ಸಂಶೋಧನೆಯೂ ಅಗೆದಷ್ಟು ಬಗೆದಷ್ಟು ಮೊಗೆದಷ್ಟು ಹುಡುಕಿದಷ್ಟು ಬಹು ವಿಸ್ತಾರವಾಗಿ ವಿಶೇಷತೆಯಿಂದ ಕೂಡಿದೆ..

       

      ಪ್ರತ್ಯಕ್ಷವಾಗಿ ಪರೋಕ್ಷವಾಗಿ ಪಾಂಡುರಂಗ ವಿಠ್ಠಲನ ದರ್ಶನ

       

      ಭಾರತದ ಸನಾತನ ಪರಂಪರೆಯಲ್ಲಿ ಬರುವ ಬ್ರಹ್ಮ ವಿಷ್ಣು ಮಹೇಶ್ವರ ಸಹಿತ ಅಸಂಖ್ಯಾತ ದೇವಾನುದೇವತೆಗಳು ಸಾವಿರಾರು ಸಂಖ್ಯೆಯಲ್ಲಿ ಭಾರತೀಯರ ಮನದಾಳದಲ್ಲಿ ತಲೆತಲಾಂತರದಿಂದ ನಂಬುಗೆಯಾಗಿ ಬಂದಿವೆ. ಭಾರತದ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಪಂಡರಪುರ ವಿಠ್ಠಲ ತನ್ನ ಭಕ್ತರೊಂದಿಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕಂಡು ಬಂದು ಸಹಾಯದ ನೆರವಿನ ಹಸ್ತ ಚಾಚಿದ್ದು ನಾವು ಗಮನಿಸಬೇಕು.
      ಇದು ಬಹಳಷ್ಟು ವಿಶೇಷವಾದ ಮತ್ತು ಚಿಂತನೆಗೆ ಹಚ್ಚುವ ವಿಷಯವಾಗಿದೆ.

      ಮೊದಲಿಗೆ ಪಾಂಡುರಂಗ ವಿಠ್ಠಲನು ಪ್ರತ್ಯೇಕನಾಗಿ, ಕಂಡು ಬರುವದು ಸಂತ ಪುಂಡಲೀಕನ ಮನೆಯಂಗಳದಲಕೂಡಾ ಇಲ್ಲಿಂದ ನಾನು ನೀವು ವಿಠ್ಠಲನು ಪ್ರತ್ಯಕ್ಷನಾಗುವ ಕುರಿತು ಸೂಕ್ಷ್ಮವಾಗಿ ಗಮನಿಸುತ್ತ ಸಾಗಿದಂತೆ ಸಂತ ತುಕಾರಾಮರಿಗೆ ಸಾಲವಾಗಿ ಸಾಲಗಾರರು ಕಿರುಕುಳ ಕೊಡುತ್ತಾರೆ. ಪಡೆದ ಸಾಲವನ್ನು ತುಕಾರಾಮರು ತೀರಿಸಲು ಹೋದಾಗ ಆಶ್ಚರ್ಯಕರ ಸಂಗತಿ ಎಂದರೇ ಉದ್ರಿ ಸಾಲ ಕೊಟ್ಟವನ ಪುಸ್ತಕದಲ್ಲಿ ‘ಪಾಂಡುರಂಗ’ ಎಂದು ಬರೆದ ಹಸ್ತಾಕ್ಷರವಿರುತ್ತದೆ.
      ಸಂತ ತುಕಾರಾಮ ಜೀವನದಲ್ಲಿ ಪಾಂಡುರಂಗ ಅನೇಕ ರೀತಿಯಲ್ಲಿ ಅವನ ಬೆನ್ನಿಗೆ ನೆರಳಾಗಿ ನಿಂತು ನೆರವು ನೀಡಿದ ದಂತ ಕತೆಗಳಿವೆ.

      ಸತಿ ಸಕ್ಕೂಬಾಯಿ ವಿಷಯದಲ್ಲಿಯೂ ಕೂಡಾ ಅವಳ ಮನೆಯಲ್ಲಿ ಪಾಂಡುರಂಗ ಸ್ವತಃ ತಾನೇ, ಪ್ರತ್ಯಕ್ಷನಾಗಿ ಅದು ಅವಳು ಬೀಸುವ, ಕುಟ್ಟುವ ಕಾರ್ಯದಿಂದ ಹಿಡಿದು ಎಲ್ಲ ರೀತಿಯಲ್ಲಿ ಭಕ್ತಳಾದ ಸತಿ ಸಕ್ಕೂಬಾಯಿಗೆ ಮನೆಯಲ್ಲಿಯೇ, ನಿಂತು ಸಹಾಯ ಮಾಡುತ್ತಾನೆ. ಚಿನ್ನಾಭರಣದ ವ್ಯಾಪಾರಿ ಸೋನವಾಲೆ ನರಹರಿ ಪಾಂಡುರಂಗ ವಿಠ್ಠಲನಿಗೆ ನಿತ್ಯ ಅವಹೇಳನ ಮಾಡುತ್ತಿದ್ದನು. ಈ ಸಂದರ್ಭದಲ್ಲಿ
      ವಿಠಲನ ಮೂರ್ತಿಗೆ ಭಕ್ತಳೊಬ್ಬಳು ಸೊಂಟಪಟ್ಟಿ ಅರ್ಪಣೆ ಮಾಡುವೆ ಎಂದು ಬೇಡಿಕೊಂಡಿರುತ್ತಾಳೆ. ಅದರ ತಯಾರಿಯ ಉಸ್ತುವಾರಿ ಹೊತ್ತುಕೊಂಡ ಸೋನವಾಲೆ ನರಹರಿ ವಿಠ್ಠಲನ ವಿಗ್ರಹದ ಸೊಂಟಿನಳತೆಯನ್ನು ತೆಗೆದುಕೊಳ್ಳುವಾಗ ವಿಷಸರ್ಪವೊಂದು ಬುಸುಗುಟ್ಟಿಂದಾಗಿ ದೂರ ಸರಿದು ನಿಲ್ಲುತ್ತಾನೆ. ನಂತರ ನಡೆದ ಬೆಳವಣಿಗೆಯಲ್ಲಿ ಆತ ವಿಠಲನ ಭಕ್ತನಾಗುತ್ತಾನೆ. ಇನ್ನೂ ಭಕ್ತ ಕುಂಬಾರನ ಕಾಲ್ತುಳಿತಕ್ಕೆ ಸಿಕ್ಕು ಸತ್ತ ಹಸುಗೂಸನ್ನು ಪುನಃ ಪಾಂಡುರಂಗ ವಿಠ್ಠಲನು ಬದುಕಿಸಿ ಕೊಡುತ್ತಾನೆ. ಹೀಗೆ ಜ್ಞಾನದೇವ, ನಾಮದೇವ, ಮುಕ್ತಾಬಾಯಿ, ಏಕನಾಥ, ಭಾನುದಾಸ, ವಿಜಯನಗರದ ಕೃಷ್ಣ ದೇವರಾಯ, ಹೊಯ್ಸಳದ ವಿಷ್ಣುವರ್ಧನರ ಪಾಲಿನ ಸೌಭಾಗ್ಯದ ದೇವರಾಗಿ ಅವರನ್ನು ಅನವರತ ಹರಸಿದ ಮಹಾ ಸ್ವಾಮಿ ವಿಠ್ಠಲನಾಗಿದ್ದಾನೆ.

      ಭಾರತದಲ್ಲಿಯೇ, ಈ ರೀತಿಯ ಹಿನ್ನಲೆ ಹೊಂದಿ ಭಕ್ತರೊಂದಿಗೆ
      ಬಹು ನಿಕಟವಾಗಿ ಅತ್ಯಂತ ತ್ವರಿತ ವೇಗದಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಾಯ ಹಸ್ತ ನೀಡಿ ಪ್ರತ್ಯಕ್ಷವಾಗಿರುವ ಹಲವು ದೇವ- ದೈವಗಳಲ್ಲಿ ಪಾಂಡುರಂಗನ ವಿಠ್ಠಲನು ಅಗ್ರಗಣ್ಯ ಅಗ್ರಜನಾಗಿ ಕಂಡು ಬರುತ್ತಾನೆ. ನಿಮ್ಮ ಪ್ರತಿ ಕಷ್ಟ ಕಾರ್ಪಣ್ಯಗಳಲ್ಲಿ ಶ್ರೀ ಹರಿ ಪಾಂಡುರಂಗ ವಿಠ್ಠಲನು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಕಂಡು ಬಂದು ಸದಾನುಕಾಲ ನಿಮಗೆ ಅಭಯ ಹಸ್ತ ನೀಡಲಿ ಆಶೀರ್ವಾದ ಮಾಡಲಿ ಎಂದು ನಿಮ್ಮ ಅವ್ವ ಚಂದ್ರಭಾಗ ತಾಯಿ ಭೀಮವ್ವ ಭೀಮರತಿ ಕೈ ಮುಗಿದು ಬೇಡಿಕೊಳ್ಳುವೆ.!🙏🙏

      ಪ್ರತಿ ವಾರದ ಹೊಸ ವಿಷಯದ ಅಚ್ಚರಿಗಾಗಿ ಕಾಯಿರಿ!
      ಧನ್ಯವಾದಗಳು 🙏🌹

       

      ✍️ ದಶರಥ ಕೋರಿ ಶಿಕ್ಷಕರು ಇಂಡಿ

      ಆಕರಗಳು:
      ಪಾಂಡುರಂಗ ವಿಕಿಪಿಡಿಯ
      ಒಂದು ಮುಕ್ತ ಅಧ್ಯಯನ

      ಚಿಂತಾಮಣಿ ಡೇರೆಯವರ
      ಚಿಂತನೆಗಳು ಲೇಖಕರು ಡಾ.ಲಿಂಗದಳ್ಳಿ ಹಾಲಪ್ಪ

      ಪ್ರೇರಣೆ ಪ್ರೋತ್ಸಾಹ ಮಾರ್ಗದರ್ಶನ.
      ಶ್ರೀ ಕಿಶೋರ ಕಾಸಾರ ಸಾಹಿತಿಗಳು
      ಮಣೂರ.

      ಶ್ರೀ ಎ ಸಿ ಪಾಟೀಲ ವರದಿಗಾರರು
      ಪ್ರಜಾವಾಣಿ ಪತ್ರಿಕೆ ಇಂಡಿ

      ಶ್ರೀ ಖಾಜು ಸಿಂಗೆ ಕನ್ನಡ ಪ್ರಭ ವರದಿಗಾರು ಮತ್ತು ಪೂರ್ವಿ ಉದಯ ದಿನ ಪತ್ರಿಕೆಯ
      ಸಂಪಾದಕರು ಇಂಡಿ.

      ಶ್ರೀ ಪಿ ಜಿ ಕಲ್ಮನಿ ಶಿಕ್ಷಕರು ಅಧ್ಯಕ್ಷರು
      ಪದವೀಧರ ಶಿಕ್ಷಕರ ಸಂಘ ಇಂಡಿ.

      Tags: #Bhimateer Spl story#Bhimatheera: Kannadigar's heartbeat#indi / vijayapur#Public News#State News#Today News#Voice Of Janata#Voice Of Janata Desk News#ಭೀಮಾತೀರ : ಕನ್ನಡಿಗರ ಹೃದಯ ವೈಶಾಲ್ಯತೆಗೆ ಹಿಡಿದ ಕೈಗನ್ನಡಿ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಮಕ್ಕಳೊಂದಿಗೆ ಬಿಸಿಯೂಟ ಸವಿದ ಅಧಿಕಾರಿ ಮತ್ತು ಎಸ್.ಡಿ.ಎಂ.ಸಿ ಸದಸ್ಯರು

      ಮಕ್ಕಳೊಂದಿಗೆ ಬಿಸಿಯೂಟ ಸವಿದ ಅಧಿಕಾರಿ ಮತ್ತು ಎಸ್.ಡಿ.ಎಂ.ಸಿ ಸದಸ್ಯರು

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಮಕ್ಕಳೊಂದಿಗೆ ಬಿಸಿಯೂಟ ಸವಿದ ಅಧಿಕಾರಿ ಮತ್ತು ಎಸ್.ಡಿ.ಎಂ.ಸಿ ಸದಸ್ಯರು

      ಮಕ್ಕಳೊಂದಿಗೆ ಬಿಸಿಯೂಟ ಸವಿದ ಅಧಿಕಾರಿ ಮತ್ತು ಎಸ್.ಡಿ.ಎಂ.ಸಿ ಸದಸ್ಯರು

      July 31, 2025

      July 31, 2025
      ರಸಗೊಬ್ಬರ ಮಾರಾಟ ಮಳಿಗೆಗಳಿಗೆ ಜಂಟಿ ಕೃಷಿ ನಿರ್ದೇಶಕರ ದಿಢೀರ್ ಭೇಟಿ  ಪರಿಶೀಲನೆ

      ರಸಗೊಬ್ಬರ ಮಾರಾಟ ಮಳಿಗೆಗಳಿಗೆ ಜಂಟಿ ಕೃಷಿ ನಿರ್ದೇಶಕರ ದಿಢೀರ್ ಭೇಟಿ  ಪರಿಶೀಲನೆ

      July 31, 2025
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2025 VOJNews - Powered By Kalahamsa Infotech Private Limited.