ವಿಜಯಪುರ : ಭೀಮಾತೀರದ ಹಂತಕ ಧರ್ಮರಾಜ್ ಚಡಚಣ ಹತ್ಯೆ ಕೇಸ್ನಲ್ಲಿಂದು ವಿಜಯಪುರದ ಜಿಲ್ಲಾ ಕೋರ್ಟ್ಗೆ ಮಹಾದೇವ ಸಾಹುಕಾರ್ ಸೇರಿದಂತೆ 16 ಆರೋಪಿಗಳು ಕೋರ್ಟ್ಗೆ ಹಾಜರಾದರು.
ಇದೇ ವೇಳೆಯಲ್ಲಿ ವಕೀಲ ಸಂಗಯ್ಯ ಹಿರೇಮಠ ಮಾತನಾಡಿ, ಚಡಚಣ ಮರ್ಡರ್ ಕೇಸ್ನಲ್ಲಿ ಮಹಾದೇವ ಸಾಹುಕಾರ್ ಸೇರಿದಂತೆ 16 ಜನ ಆರೋಪಿಗಳು ಕೋರ್ಟ್ಗೆ ಹಾಜರಾಗಿದ್ದಾರೆ. ಜೂನ್ 8ಕ್ಕೆ ಮತ್ತೇ ಕೋರ್ಟ್ ದಿನಾಂಕ ನೀಡಿದೆ. ಇನ್ನು 17 ಜನ ಆರೋಪಿಗಳ ಪೈಕಿ 16 ಜನರು ಕೋರ್ಟ್ಗೆ ಹಾಜರು ಆಗಿದ್ದಾರೆ. ಓರ್ವ ಸಾವನ್ನಪ್ಪಿದ್ದಾನೆ ಎಂದರು. ಅಲ್ಲದೇ, ಸಾಹುಕಾರ್ಗೆ ಜೀವ ಭಯ ಹಿನ್ನಲೆ ಕೋರ್ಟ್ ಎದುರು ಪೊಲೀಸ ಬಂದೋಬಸ್ತ್ ನೀಡಲಾಗಿತ್ತು ಎಂದರು. ಇನ್ನು ಕಳೆದ ಬಾರಿ ಸಾಹುಕಾರ್ ಮೇಲೆ ಚಡಚಣ ಗ್ಯಾಂಗ್ ಅಟ್ಯಾಕ್ ಮಾಡಿತ್ತು. ಅದಕ್ಕಾಗಿ ಸಾಹುಕಾರ್ ಮೇಲೆ ಅಟ್ಯಾಕ್ ಆಗದಂತೆ ಜಿಲ್ಲಾ ಪೊಲೀಸರು ಬಂದೋಬಸ್ತ್ ನೀಡಿದ್ದರು.