ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆ : ಮಾಜಿ , ಹಾಲಿ ಜಿದ್ದಾಜಿದ್ದಿ..!
ಇಂಡಿ: ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ
ಪ್ರಾರಂಭವಾಗಿ ಐದು ವರ್ಷ ಕಳೆದರೂ ಇದುವರೆಗೂ
ಸಾಲಮುಕ್ತವಾಗಿಲ್ಲ. ಪ್ರಾಮಾಣಿಕತೆಯಿಂದ ಆಡಳಿತ
ಮಂಡಳಿ ಕಾರ್ಯ ಮಾಡಿದ್ದರೆ ಇಷ್ಟೊತ್ತಿಗಾಗಲೆ
ಕಾರ್ಖಾನೆ ಸಾಲಮುಕ್ತವಾಗುತ್ತಿತ್ತು ಎಂದು ಮಾಜಿ ಶಾಸಕ
ಡಾ. ಸಾರ್ವಭೌಮ ಬಗಲಿ ಆರೋಪಿಸಿದರು.
ಅವರು ಶುಕ್ರವಾರ ತಾಲೂಕಿನ ಝಳಕಿ, ಬಳ್ಳೊಳ್ಳಿ,
ಕಪನಿಂಬರಗಿ, ಜೇವೂರ, ಇಂಚಗೇರಿ ಗ್ರಾಮದಲ್ಲಿ ನಡೆದ
ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ
ಮರಗೂರದ ಇದರ ನಿರ್ದೇಶಕ ಮಂಡಳಿಗೆ ನಡೆದ
ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಕಾರ್ಖಾನೆಯಲ್ಲಿ ರೈತ ಕುಟುಂಬದಲ್ಲಿ ಯಾರಿಗೂ ಒಂದು
ಕೆಲಸ ಕೊಟ್ಟಿಲ್ಲ, ಬೇರೆ ರಾಜ್ಯದ ಜನರಿಗೆ ಕೆಲಸ ನೀಡಿದ್ದಾರೆ. ನಮ್ಮ ರೈತ ಮಕ್ಕಳಿಗೆ ಕೆಲಸ ಇಲ್ಲಾ, ಕಾರ್ಖಾನೆಯಲ್ಲಿ ಪಲಾಗುತ್ತಿರುವ ಹಣ ತಡೆಯಲು, ರೈತರ ಬಗ್ಗೆ ಕಾಳಜಿ ಇಲ್ಲದೆ, ಯಾವ ಲಾಭ ಕೊಡದೆ ಇರುವುದು ನನ್ನ ಗಮನಕ್ಕೆ ಬಂದ ಕಾರಣ ಇಂದು ನಾನು ಚುನಾವಣೆ ಕಣದಲ್ಲಿ ಇದ್ದಿದ್ದೆನೆ ಎಂದ ಅವರು, ತಾಲ್ಲೂಕಿನಲ್ಲಿ ಅನೇಕ ಕೆಲಸ ರೈತಪರ ಕೆಲಸ ಮಾಡಿದ್ದೇನೆ. ಅದರ ಸಲುವಾಗಿ ನನಗೆ ಮತ ಹಾಕಿ ಎಂದು ಮತದಾರರಿಗೆ ಕೇಳಿಕೊಂಡರು.
ಸಂದರ್ಭದಲ್ಲಿ ಮುತ್ತಪ್ಪ ಪೋತೆ, ನಾಗನಾಥ ಬಿರಾದಾರ,
ಬಿಜೆಪಿ ಮಂಡಲ ಅಧ್ಯಕ್ಷ ಕಾಸುಗೌಡ ಬಿರಾದಾರ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಬಿ.ಡಿ. ಪಾಟೀಲ, ಶ್ರೀಶೈಲಗೌಡ ಬಿರಾದಾರ, ಗುರುನಾಥ ಬಗಲಿ, ಗಂಗಾಧರ ಖಾನಾಪುರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇಂಡಿ: ತಾಲೂಕಿನ ಜೇವೂರ ಗ್ರಾಮದಲ್ಲಿ ನಡೆದ ಶ್ರೀ
ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಮರಗೂರ ಇದರ ನಿರ್ದೇಶಕ ಮಂಡಳಿಗೆ ನಡೆದ ಚುನಾವಣೆ ಪ್ರಚಾರ ಸಭೆಯಲ್ಲಿ ಮಾಜಿ ಶಾಸಕ ಸಾರ್ವಭೌಮ ಬಗಲಿ ಮಾತನಾಡಿದರು.