ಇಂಡಿ : ಉಜನಿ ಜಲಾಶಯದಿಂದ ಹೆಚ್ಚಿನ ನೀರು ಬಿಟ್ಟಿರುವ ಹಿನ್ನಲೆ ವಿಜಯಪುರ ಜಿಲ್ಲೆಯ ಭೀಮಾ ನದಿಪಾತ್ರದ ಗ್ರಾಮಗಳಿಗೆ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಭೇಟಿ ನೀಡಿದರು.
ಇನ್ನು ಹೆಚ್ಚು ನೀರು ಬಂದರೆ ಜಮೀನುಗಳಿಗೆ ಹಾಗೂ ಗ್ರಾಮಗಳಿಗೆ ಭೀಮಾ ನದಿ ನೀರು ನುಗ್ಗುವ ಆತಂಕವಾಗಿದೆ. ಅದಕ್ಕಾಗಿ ಭೀಮಾತೀರದ ಬ್ಯಾರೇಜ್ ಹಾಗೂ ಕೆಲ ಗ್ರಾಮಗಳಿಗೆ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಹಾಗೂ ಆಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ,ನದಿ ತೀರದ ಗ್ರಾಮಗಳ
ಹಿಂಗಣಿ, ಬರಗುಡಿ, ಪಡನೂರ, ಶಿರಗೂರ ಇನಾಂ ಗ್ರಾಮದ ಜನರು ಸುರಕ್ಷತಾ ಕ್ರಮ ತೆಗದುಕೊಳ್ಳುವಂತೆ ಮನವಿ ಮಾಡಲಾಯಿತು. ಜನ ಜಾನುವಾರುಗಳು ನದಿಯಲ್ಲಿ ಇಳಿಯಬಾರದೆಂದು ಸೂಚನೆ ನೀಡಿದ್ದು, ಪ್ರವಾಹ ಉಂಟಾದರೆ ಸಮರ್ಪಕವಾಗಿ ಪ್ರವಾಹ ಎದುರಿಸೋದಾಗಿ ಡಿಸಿ ಜನರಿಗೆ ಭರವಸೆ ನೀಡಿದರು. ಇನ್ನೂ ಅಧಿಕಾರಿಗಳಿಗೆ ಕಾಳಜಿ ಕೇಂದ್ರ ಮತ್ತು ಮುಂಜಾಗ್ರತಾ ಕ್ರಮವಾಗಿ ಶೇಡ್ ನಿರ್ಮಾಣ ಬಗ್ಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ರಾಮಚಂದ್ರ ಗಡದೆ ಉಪವಿಭಾಗದ ಅಧಿಕಾರಿ, ನಾಗಯ್ಯ ಹಿರೇಮಠ ತಹಶಿಲ್ದಾರ, ಕಂದಾಯ ನಿರೀಕ್ಷಕ ಬಿ.ಎ. ರಾವೂರ, ಬಳ್ಳೊಳ್ಳಿ ಕಂದಾಯದ ನಿರೀಕ್ಷಿಕ ಕೊಡಹೊನ್ನ ಪಿಎಸ್ಐ ಪ್ರಕಾಶ ನಾಯಕ, ಗ್ರಾಮ ಲೆಕ್ಕಾಧಿಕಾರಿ ಹಾಗೂ ಅನೇಕರು ಉಪಸ್ಥಿತಿರು..