ಡಾ. ಎಂ.ಎಂ. ಪಡಶೆಟ್ಟಿ, ನಾಡಿನ ಜಾನಪದ ಶಕ್ತಿ : ವೈ.ಜಿ. ಬಿರಾದಾರ
ಇಂಡಿ: ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಡಾ. ಎಂ.ಎಂ. ಪಡಶೆಟ್ಟಿ ಅವರು ವಿಮರ್ಶೆ, ಜಾನಪದ, ಸಂಶೋಧನೆ, ಗ್ರಂಥ ಸಂಪಾದನೆ, ಜೀವನ ಚರಿತ್ರೆ, ವೈಚಾರಿಕ ಲೇಖನಗಳ ಮೂಲಕ ಕನ್ನಡದ ಸಹೃದಯರಿಗೆ
ದಣಿವರಿಯದ ಜಾನಪದ ತಜ್ಞರಾಗಿ ಪ್ರೇರಕ
ಶಕ್ತಿಯಾಗಿದ್ದಾರೆ ಎಂದು ಶಿಕ್ಷಕ ವೈ.ಜಿ. ಬಿರಾದಾರ
ಹೇಳಿದರು.
ಶನಿವಾರ ಪಟ್ಟಣದ ಭೀಮಾಂತರಂಗ ಜಗಲಿ, ಆನ್ ಲೈನ್
ಸಾಹಿತ್ಯಿಕ-ಸಾಂಸ್ಕøತಿಕ ಸಂಸ್ಥೆಯಿಂದ ಹಮ್ಮಿಕೊಂಡ
ಉಪನ್ಯಾಸ ಮಾಲಿಕೆ-2 ರಲ್ಲಿ ಜಾನಪದ ವಿದ್ವಾಂಸ ಡಾ. ಎಂ.ಎಂ. ಪಡಶೆಟ್ಟಿ ಬದುಕು ಬರಹ ಕುರಿತು ಉಪನ್ಯಾಸ ನೀಡುತ್ತಾ ಈ ಮಾತುಗಳನ್ನು ಅವರು ಹೇಳಿದರು.
ಗಟ್ಟಿ ಸಾಹಿತ್ಯ ಸೃಷ್ಟಿಯ ಡಾ. ಎಂ.ಎಂ. ಪಡಶೆಟ್ಟಿ ಅವರು
ರೈತಾಪಿ ಕುಟುಂಬದಲ್ಲಿ ಜನಿಸಿ, ಸ್ವಯಂ ಪ್ರತಿಭೆ ಮತ್ತು
ಪರಿಶ್ರಮಗಳಿಂದ ಸಾಧನೆಯ ಮೆಟ್ಟಿಲುಗಳನ್ನೇರಿದವರು. ಸರಳತೆ, ಪ್ರಾಮಾಣಿಕತೆ, ಸಹೃದಯತೆಗಳಂತಹ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡ ಅವರ ಆಸಕ್ತಿಯ ವ್ಯಾಪ್ತಿ ಜಾನಪದದμÉ್ಟ ವಿಶಾಲವಾಗಿದೆ ಎಂದು ಹೇಳಿದರು.
ಸಿಂದಗಿಯಲ್ಲಿ ನೆಲೆ ಪ್ರಕಾಶನ ಆರಂಭಿಸಿದ ಅವರು
ಗೆಳೆಯರ ಜೊತೆ ಬೆರೆತು ಸಾಹಿತ್ಯದ ಬೆಳಕನ್ನು ಸಾರಸ್ವತ ಲೋಕಕ್ಕೆ ನೀಡಿದವರು. ಕೆಲಸ ಮಾಡುತ್ತ ಮಾಡುತ್ತ ಬೆಳೆದು ನಿಂತವರು. ನಿರಂತರ ಕಷ್ಟ- ಕಾರ್ಯದಿಂದ ಮಾತ್ರ ಬೆಳವಣಿಗೆ ಎನ್ನುವುದನ್ನು ಸಾಧಿಸಿ ತೋರಿಸಿದ ಸಂಘಜೀವಿ ಅವರಾಗಿದ್ದರು ಎಂದು ಹೇಳಿದರು.
ವಿಜಯಪುರದ ವಿಮರ್ಶಕರಾದ ಮನು ಪತ್ತಾರ
ಅಧ್ಯಕ್ಷತೆ ವಹಿಸಿ ಮಾತನಾಡಿ, ವಚನ ಸಾಹಿತ್ಯ-ಸಂಸ್ಕೃತಿಯ ಪರಿಸರದಲ್ಲಿ ಬೆಳೆದ ಡಾ. ಎಂ.ಎಂ. ಪಡಶೆಟ್ಟಿ ಅವರು ಸದಾ ಹಸನ್ಮುಖಿ. ಅವರ ಮನಸ್ಸು ಸಹ ‘ನಿರಾಳ’. ಪರಿಶ್ರಮ ಸಂಸ್ಕೃತಿ ಸಂತೃಪ್ತ ಬದುಕನ್ನು ನಿರ್ವಹಿಸಿದ ಧೀಮಂತ. ಸಹೃದಯರಾಗಿ ಅಪಾರ ಸ್ನೇಹಿತ, ಶಿಷ್ಯಗಣವನ್ನು ಹೊಂದಿದ ಅವರ ವ್ಯಕ್ತಿತ್ವ ಮತ್ತು ಬದುಕು ಎರಡೂ ಸಾರ್ಥಕ.ನಾಡಿನ ಜಾನಪದ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿ ಬಗೆಗೆ ಆಸಕ್ತಿಯಿಂದ ಅಧ್ಯಯನ ಮಾಡುವವರಿಗೆ ಅವರ ಗ್ರಂಥ ಉಪಯುಕ್ತವಾಗುವುದರಲ್ಲಿ ಯಾವುದೇ
ಸಂಶಯವಿಲ್ಲ ಎಂದು ಹೇಳಿದರು.
ಡಾ. ಚನ್ನಪ್ಪ ಕಟ್ಟಿ, ಡಾ ಎಂ.ಎಂ. ಪಡಶೆಟ್ಟಿ, ಗೀತಯೋಗಿ,
ಸಿ.ಎಂ. ಬಂಡಗರ, ಲಿಂಗಪ್ಪ ಕಲಬುರ್ಗಿ, ರಾಚು ಕೊಪ್ಪ,
ಸಂಗನಗೌಡ ಹಚಡದ, ಶ್ರೀಧರ ಹಿಪ್ಪರಗಿ, ಸಾಹೇಬಗೌಡ
ಬಿರಾದಾರ, ಸಂತೋಷ ಜೇವರ್ಗಿ, ಸತೀಶ ಕುರುಂದವಾಡೆ
ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಭಾಗವಹಿಸಿದ್ದರು.
ಶಿಕ್ಷಕ ಸಂತೋಷ ಬಂಡೆ ಸ್ವಾಗತಿಸಿ, ಪರಿಚಯಿಸಿದರು.
ಶಿಕ್ಷಕ ವೀರಣ್ಣ ದಸ್ತರೆಡ್ಡಿ ನಿರೂಪಿಸಿದರು. ಶಿಕ್ಷಕಿ ಬಿ.ಸಿ.
ಭಗವಂತಗೌಡರ ವಂದಿಸಿದರು.