42ನೇ ದಿನದ ಧರಣಿ ಸತ್ಯಾಗ್ರಹಕ್ಕೆ ಭಾರತೀಯ ಕಿಸಾನ ಸಂಘದ ರಾಜ್ಯಾಧ್ಯಕ್ಷರಾದ ಬಿ ಎಂ ಕೊಕರೆ ಬೆಂಬಲ
ವಿಜಯಪುರ. 42 ನೆಯ ದಿನದ ಧರಣಿ ಸತ್ಯಾಗ್ರಹಕ್ಕೆ ಭಾರತೀಯ ಕಿಸಾನ ಸಂಘದ ರಾಜ್ಯಾಧ್ಯಕ್ಷರಾದ ಬಿ ಎಂ ಕೊಕರೆ ಹಾಗೂ ಬೆಂಬಲಿಗರು ಬೆಂಬಲ ಸೂಚಿಸಿದರು. ಧರಣಿಯನ್ನುದ್ದೇಶಿಸಿ ಮಾತನಾಡಿದ ಕೊಕರೆಯವರು ರಾಜ್ಯ ಸರ್ಕಾರ ಸರ್ಕಾರಿ ಆಸ್ತಿಗಳನ್ನು ಮಾರಾಟ ಮಾಡಲು ಮುಂದಾಗಿರುವುದು ನೋವಿನ ಸಂಗತಿ,ರಾಜಕಾರಣಿಗಳು ರಾಜ್ಯ ಸರ್ಕಾರವನ್ನು ಸಹಿತ ಪಿಪಿಪಿ ಮಾದರಿಯಲ್ಲಿ ನಡೆಸಲಿ ಅಂದಾಗಲೇ ಇವರಿಗೆ ಬುದ್ಧಿಬರುತ್ತೆ ಇವರೇನು ರಾಜಕಾರಣಿಗಳನಾ ಅಥವಾ ಉದ್ಯೋಗಪತಿಗಳನಾ ಎಂಬುವದು ಒಂದು ಗೊತ್ತಾಗುತ್ತಿಲ್ಲ ಜನ ಎಚ್ಚೆತ್ತು ಕೊಂಡಿದ್ದಾರೆ ನಿಮ್ಮ ಆಟ ನಡೆಯಲ್ಲ ನಮ್ಮ ಜಿಲ್ಲೆಗೆ ಯಾಕೆ ಸರ್ಕಾರಿ ವೈದ್ಯಕೀಯ ಕಾಲೇಜು ಬೇಡ ಎಂಬುವದು ಸರ್ಕಾರ ಸ್ಪಷ್ಟ ಪಡಿಸಲಿ ನೀವು ಕೂಡಲೇ ಸರ್ಕಾರಿ ವೈದ್ಯಕ್ಕಿಯ ಕಾಲೇಜು ಸ್ಥಾಪನೆ ಮಾಡಿ ಆರಂಭಿಸಿದರೆ ಒಳ್ಳೆಯದು ನಿಮ್ಮ ಜನ ವಿರೋಧಿ ನೀತಿ ಯನ್ನು ಕೂಡಲೇ ಕೈಬಿಡಬೇಕು ಒಂದು ಇದೇರೀತಿ ಮುಂದುವರೆದಿದ್ದೆ ಆದರೆ ಸರ್ಕಾರದ ವಿರುದ್ಧ ಬೃಹತ್ ಆಂದೋಲನ ನಡೆಯಲಿದೆ ಜಿಲ್ಲೆಯ ರಾಜಕಾರಣಿಗಳು ಲಾಭಗಳಿಕೆಯ ಬಗ್ಗೆ ಯೋಚನೆ ಮಾಡಿದ್ದರೆ ತಪ್ಪು ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ನುಡಿದರು.ಉತ್ತರ ಕರ್ನಾಟಕದ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷರಾದ ಮಲ್ಲನಗೌಡ ಪಾಟೀಲರವರು ಮಾತನಾಡುತ್ತ ಸರ್ಕಾರ ಮಧ್ಯ ಮಾರಾಟದ ಬಗ್ಗೆ ಇಲಾಖೆಗಳಿಗೆ ಟಾರ್ಗೆಟ್ ಫಿಕ್ಸ್ ಮಾಡಿದೆ ಬಡವರಿಗೆ ಅನುಕೂಲವಾಗಿರುವ ಸರಕಾರಿ ವೈದ್ಯಕೀಯ ಕಾಲೇಜು ಮಾರಾಟ ಮಾಡಿಕೊಂಡು ಜಿಲ್ಲೆಯ ಜನತೆಯ ಕಣ್ಣಲ್ಲಿ ಮಣ್ಣು ಹಾಕುವ ಹುನ್ನಾರ ನಡೆಸಿದೆ ನಾವು ಕಣ್ಣು ಮುಚ್ಚಿ ಕುಳಿತಿಲ್ಲ ನಾವು ಎದ್ದರೆ ಯಾವ ಸರ್ಕಾರವು ಉಳಿಯಲ್ಲ ರೈತರ ಶಕ್ತಿ ಏನು ಅಂತ ಸರ್ಕಾರಕ್ಕೆ ಗೊತ್ತಿದ್ದೇ ಸಾಮಾಜಿಕ ಹಾಗೂ ಸಮಾನತೆಯ ಹರಿಕಾರರು ಇದರ ಬಗ್ಗೆ ಚಿಂತನೆಮಾಡಲಿ ನಮ್ಮ ಜಿಲ್ಲೆಯ ಜನತೆ ಅತೀ ಕಡುಬಡತನದಿಂದ ಕೂಡಿರುವ ಬರಗಾಲ ಜಿಲ್ಲೆ ಇದರಲ್ಲಿ ನಮ್ಮ ಜಿಲ್ಲೆಯ ರಾಜಕಾರಣಿಗಳು ಆಲಸ್ಯ ತೋರಬಾರದು ಕೂಡಲೇ ಸರಕಾರಿ ವೈದ್ಯಕೀಯ ಕಾಲೇಜು ಆರಂಭಿಸುವಂತೆ ಒತ್ತಾಯಿಸಿದರು.ಭಾರತೀಯ ಕಿಸಾನ್ ಸಂಘದ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಗುರುನಾಥ ಬಾಗಲಿಯವರು ಮಾತನಾಡಿ ನಿಮಗೆ ಸರ್ಕಾರ ನಡೆಸಲು ಬರದಿದ್ದರೆ ಮನೆಗೆ ಹೋಗಿ ಎಲ್ಲವೂ ಖಾಸಗಿಯವರಿಗೆ ಮಾರಾಟ ಮಾಡಿ ರಾಜ್ಯದ ಜನತೆಯನ್ನು ಬಂಡವಾಳ ಶಾಹಿಗಳಿಗೆ ಒಪ್ಪಿಸಿಬಿಡಿ ನಮ್ಮ ಮತ ಖರೀದಿಸಿ ರಾಜಕಾರಣ ಮಾಡುತ್ತಿದ್ದೀರಿ ಮಾಡಿ ಮುಂಬರವ ಚುನಾವಣೆಯಲ್ಲಿ ಈ ಸರಕಾರಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ನುಡಿದರು.ಆಲ್ ಇಂಡಿಯಾ ರಾಹುಲ್ ಗಾಂಧಿ ಬ್ರಿಗೇಡ್ ಉಪಾಧ್ಯಕ್ಷರಾದ ಬಾವಸಾಹೇಬ ಹತ್ತರಿಕಿಹಾಳ ಹಾಗೂ ಪದಾಧಿಕಾರಿಗಳು ಇಂದಿನ ಹೋರಾಟಕ್ಕೆ ಬೆಂಬಲಿಸಿದರು.
ಸರ್ಕಾರಿ ವೈಧ್ಯಕೀಯ ಕಾಲೇಜು ಸ್ಥಾಪನೆ ಕೂಡಲೇ ಮಾಡಬೇಕು ನಾವು ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿದ್ದೇವೆ ಎಂದು ಹೇಳಿದರು.ಈ ಸಂದರ್ಭದಲ್ಲಿ ರುಕ್ಮಿಣಿ ಹೆಗಡೆ, ಸಂಗೀತಾ ಘಟಗೆ, ಎಂ.ಸಿ.ಹೊಸರ್, ಕಾಸರ್ ಭಾಗವಾನ್, ಕಮಲಾ ಚಲವಾದಿ, ನೀಲಮ್ಮ್ ಕೊರತಿ, ಚಂದ್ರಶೇಖರ್ ಕೊರತಿ, ನಾಗೇಶ್ ಪೂಜಾರಿ, ಐ. ಟಿ.ಪಡಗನೂರ್, ಮುಮ್ತಾಜ್ ಮಕಂದಾರ್, ಅನುಜ್ ಗಣಿಯಾರ್, ಹಾವೀದಾ ಗಡ್ಡಿ, ಮೇಹಬೂಬಾ ಗಡ್ಡಿ, ಮಕ್ಕ್ತಾಬಿ ಮನುಗುಲಿ, ಬಸಮ್ಮ ರೆಡ್ಡಿ, ಹಜರತ್ ಮಕಂದಾರ್, ಜನತಾ ನದಾಫ್, ಮಕ್ತುಂಬಿ ಮನಗುಲಿ, ದವಲ್ ಮುಲ್ಲಾ, ಹುಸೇಇಂಸಾಬ್ ಮುಲ್ಲಾ, ಪ್ರಶಾಂತ್ ದಾಂಡೇಕರ್, ನಿಹಾಜ್ ನದಾಫ್, ವೈಭವ ಚವನ್, ಗುರುನಾಥ್ ಬಗಲಿ, ಗೋವಿಂದ್ ಯಲ್ವಾರ್, ರವೀಂದ್ರ ನಾಥ್ ಮೆಂಡಗರ್, ವಿ.ಆರ್.ಏಳಗಿ, ವಿ.ಜಿ.ಬಿದರಿ, ಕೆ.ರ್ಸ್.ಸುಂಕದ, ಸಂಗು ಹುಣಸಗಿ, ಬಸಪ್ಪ ಚೌಧರಿ, ರೇಣುಕಾ ಪಾಟೀಲ್, ನಾನಾಗೌಡ ಬೋರಾವತ, ಸೋಮಶೇಖರ್ ಪಾಟೀಲ್, ಮಹಾಂತೇಶ್ ಬಾಗೇವಾಡಿ, ಬಸವರಾಜ್ ದಡ್ಡಿ, ರಫೀಕ್ ಮುಲ್ಲಾ, ಬಂದೆನವಾಜ್ ರಘಟಿ, ಎಂ.ಎಂ.ಕಲಕಿ, ಎಸ್.ಎಂ. ಬಿರಾದಾರ್, ಅರುಣ್ ತೆರದಾಳ್, ಭೀಮಣ್ಣ ಕುಂಬಾರ್, ಪರಮಾನಂದ್ ಕುಂಬಾರ್, ಪೂಜಾ ಜಿಮಿವಾಲೇ, ಅವಿನಾಶ್ ಐಹೊಳೆ ಹಾಗೂ ಹೋರಾಟ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.



















