ಶಿಕ್ಷಣಕ್ಕಾಗಿ ಬದುಕನ್ನೆ ಮೀಸಲಿಟ್ಟ ಬಂಥನಾಳ ಶ್ರೀ
ಇಂಡಿ : ಈ ನಾಡಿನಲ್ಲಿ ಅಕ್ಷರ ದಾಸೋಹಿ ಬಂಥನಾಳದ
ಲಿಂಗೈಕ್ಯ ಪೂಜ್ಯ ಶ್ರೀ ಸಂಗನಬಸವ ಮಹಾಶಿವಯೋ – ಗಿಗಳು ಬದುಕನ್ನೆ ಮುಡಿಪಾಗಿಟ್ಟು ಶಾಲೆ ಕಾಲೇಜುಗಳನ್ನು ಸ್ಥಾಪಿಸಿದ್ದಾರೆ. ಅವರು ಅಂದು ಬೆಳಗಿದ ಶಿಕ್ಷಣದ
ಜ್ಯೋತಿ ಇಂದಿಗೂ ನಂದಾದೀಪ ದಂತೆ ಬೆಳಗುತ್ತಿದೆ ಎಂದು ಗದಗ ಹಾಗೂ ಶಿರಹಟ್ಟಿ ಸಂಸ್ಥಾನ ಮಠದ ಜಗದ್ಗುರು ಫಕಿರಸಿದ್ಧರಾಮ ಮಹಾಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಲಚ್ಯಾಣದಲ್ಲಿ ಲಿಂಗೈಕ್ಯ ಶ್ರೀ ಸಿದ್ಧಲಿಂಗ ಮಹಾರಾಜರ ೯೬ನೇ ಪುಣ್ಯಾರಾಧನೆ ಅಂಗವಾಗಿ
ಬುಧವಾರದಂದು ನಡೆದ “ಶರಣರ ದರ್ಶನ ಕುರಿತ ಪ್ರವಚನ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಲಿಂಗೈಕ್ಯ ಸಂಗನಬಸವ ಮಹಾಶಿವ – ಯೋಗಿಗಳು ಹರ್ಡೇಕರ ಮಂಜಪ್ಪನವರ ಸ್ವಾತಂತ್ರ್ಯದ ಚಳುವಳಿಗೆ ಸಾಥ್ ನೀಡಿದ್ದರು. ಪರಸ್ಪರರು
ರಾಷ್ಟ್ರ ಧೀಕ್ಷೆ, ಧರ್ಮದೀಕ್ಷೆ ಪಡೆದು ನಾಡಿನ ಏಳಿಗೆಗಾಗಿ ಶ್ರಮಿಸಿದರು ಎಂದು ಸ್ಮರಿಸಿದರು. ಸಬ್ ಕಾ ಮಾಲಿಕ ಏಕ್ ಹೈ, ಭಕ್ತರು ದೇವರ ಮೇಲೆ ನಂಬಿಕೆ ಇಡಬೇಕು. ಭಕ್ತಿಯಿಂದ ಧ್ಯಾನ ಮಾಡಬೇಕು. ಭಕ್ತಿ ಇಲ್ಲವಾದರೆ
ದೇವರು ಒಲಿಯುವದಿಲ್ಲ. ಮಹಾತ್ಮರ ವಾಣಿ
ಮಂತ್ರ ಇದ್ದಹಾಗೆ. ಒಂದು ಮಂತ್ರ, ಉತ್ತಮ ನಡುವಳಿಕೆ – ಯಿಂದ ಲಿಂಗೈಕ್ಯ ಸಿದ್ಧಲಿಂಗ ಮಹಾರಾಜರು ೧ ಕೋಟಿ ಜನರ ದಾಸೋಹ ಕೇಂದ್ರ ನಡೆಸಿದರು. ಆದ್ದರಿಂದ ಭಕ್ತರು
ಮಹಾತ್ಮರ ವಾಣಿ ಆಲಿಸಬೇಕು ಎಂದರು.
ಸಾನಿಧ್ಯವಹಿಸಿದ ಬಾಲಗಾಂವ – ಕಾತ್ರಾಳ ಆಶ್ರಮದ ಪೂಜ್ಯ ಶ್ರೀ ಅಮೃತಾನಂದ ಮಹಾಸ್ವಾಮೀಜಿ ಮಾತನಾಡಿ, ಗುರು – ಶಿಷ್ಯರ ಸಂಬಂಧ ಗಟ್ಟಿಯಾಗಿರಬೇಕು. ಶಿಷ್ಯ ಒಳ್ಳೆಯವನಾಗಿ ಬೆಳೆದರೆ ಗುರು ಬೆಳೆಯುತ್ತಾನೆ. ಆದ್ದರಿಂದ ಶಿಷ್ಯ ಉತ್ತಮ
ನಡತೆ ಉಳ್ಳವನಾಗಿರಬೇಕು ಎಂದರು.
ಹುಣಶ್ಯಾಳ ಪಿ.ಜಿ. ಗ್ರಾಮದ ಶ್ರೀ ಸಿದ್ಧಲಿಂಗ
ಕೈವಲ್ಯಾಶ್ರಮದ ನಿಜಗುಣಾನಂದ ದೇವರು ಮಾತನಾಡಿ, ಪ್ರತಿಯೊಂದಕ್ಕೂ ಗುರು ಬೇಕು. ಸದ್ಗುರು ಇಲ್ಲದೆ ಉದ್ಧಾರವಿಲ್ಲ. ನಾವು ಈ ಭೂಮಿಗೆ ಕರೆಯದೆ ಬಂದರೆ, ಸದ್ಗುರು ಆಹ್ವಾನದ ಮೇರೆಗೆ ಬಂದಿರುತ್ತಾರೆ ಎಂದರು.
ಪ್ರವಚನಕಾರರಾದ ತುಂಗಳದ ಶ್ರೀ ಸಿದ್ಧಲಿಂಗ ಶಾಂಭವಿ ಆಶ್ರಮದ ಮಾತೋಶ್ರೀ ಅನುಸೂಯಾದೇವಿ ಶರಣರ ದರ್ಶನ ಕುರಿತು ಪ್ರವಚನ ನೀಡಿದರು.
ಇದೇ ಸಂದರ್ಭದಲ್ಲಿ ಮಠದಲ್ಲಿ ನಿರ್ಮಾಣವಾಗುತ್ತಿರುವ ಗುರುವಿನ ಬೃಹತ್ ಗೋಪುರಕ್ಕೆ ಜಂಬಗಿ ಗ್ರಾಮದ ಭಕ್ತೆ
ಭೀಮವ್ವ ಹಚಡದ ೫ ಲಕ್ಷ ರೂ. ದೇಣಿಗೆ ನೀಡಿ
ಭಕ್ತಿ ಸಮರ್ಪಿಸಿದರು.
ಬಂಥನಾಳ ಹಾಗೂ ಲಚ್ಯಾಣ ಮಠದ ಪೀಠಾಧೀಶರಾದ ಶ್ರೀ ಡಾ. ವೃಷಭಲಿಂಗೇಶ್ವರ ಮಹಾಸ್ವಾಮೀಜಿ, ಅಗರಖೇಡ ಅಭಿನವ ಪ್ರಭುಲಿಂಗ ದೇವರು, ತಡವಲಗಾದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಸಾನಿಧ್ಯವಹಿಸಿದ್ದರು. ನಿವೃತ್ತ ಶಿಕ್ಷಕ ಎಂ.ಎಂ. ಮುಜಗೊಂಡ ಸ್ವಾಗತಿಸಿದರು. ಶಿಕ್ಷಕ ಎ.ಎಸ್. ಸರಸಂಬಿ ಕಾರ್ಯಕ್ರಮ ನಿರೂಪಿಸಿದರು.