ಭಕ್ತಿ ಮಾರ್ಗ ಮುಕ್ತಿಗೆ ದಾರಿ – ಗುರುಲಿಂಗ ಶ್ರೀಗಳು
ಇಂಡಿ : ಭಕ್ತಿ ಮಾರ್ಗವನ್ನು ಅನುಸರಿಸಿದರೆ ಮುಕ್ತಿ ಖಚಿತ, ಶಕ್ತಿಗಿಂತ ಭಕ್ತಿ ಮುಖ್ಯ ಎಂದು ಕಕಮರಿಯ ರಾಯಲಿಂಗೇಶ್ವರ ಮಠದ ಪೀಠಾಧ್ಯಕ್ಷ ಸದ್ಗುರು ಅಭಿನವ ಗುರುಲಿಂಗ ಜಂಗಮ ಶ್ರೀಗಳು ಹೇಳಿದರು.
ಪಟ್ಟಣದ ಸಾತಪುರದ ಮಾರತಂಡ ಗುಡ್ಲ ಇವರ ಹೊಲದ ಆವರಣದಲ್ಲಿ ನಡೆದ ಜ್ಞಾನ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಮೃತತ್ವವನ್ನು ಕಳೆದುಕೊಂಡು ಪ್ರತಿ ಜೀವಿಯು ಅಮರತ್ವಕ್ಕಾಗಿ ಹಪಹಪಿಸುತ್ತಿರುತ್ತದೆ. ಇದು ಪ್ರತಿ ಜೀವದ ಆಳ, ಗಾಢ ಬಯಕೆ, ಶಾಶ್ವತವಾಗಿ ಬದುಕಬೇಕು ಎಂಬ ಉದ್ದೇಶದಿಂದ ಎಲ್ಲ ಪ್ರಯತ್ನಗಳನ್ನು ಮಾಡುತ್ತಿರುತ್ತಾನೆ ಎಂದರು.
ಮಲ್ಲಿಕಾರ್ಜುನ ಮಹಾರಾಜರು ಮಾತನಾಡಿ ಶರಣರ ಕುರಿತು ಆದ್ಯಾತ್ಮಿಕ ಪ್ರವಚನಗಳು ತುಂಬಾ ಮಹತ್ವ ಪಡೆದಿವೆ. ಪ್ರವಚನ ಕೇಳುವದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ಸಿಗುತ್ತದೆ. ಹೀಗಾಗಿ ಎಲ್ಲರೂ ಭಾಗಿಯಾಗಿ ಪ್ರವಚನ ಆಲಿಸಬೇಕು ಎಂದರು.
ಹೆಸ್ಕಾA ನಿವೃತ ಅಧಿಕಾರಿ ಎಂ.ವಿ.ಅಗಸರ ಮಾತನಾಡಿ ಶರಣರು, ಸಂತರು ಬರೆದ ವಚನ ಮತ್ತು ಸುಂದರ ಮಾತುಗಳನ್ನು ಆಲಿಸುವದರಿಂದ , ದೇವತಾ ಕಾರ್ಯಗಳಲ್ಲಿ ಭಾಗವಹಿಸುವದರಿಂದ ಸಂತೋಷ ನೆಮ್ಮದಿ ಮುಕ್ತಿ ಸಿಗಲು ಸಾದ್ಯ ಎಂದರು.
ಬಸಗೊಂಡ ಬಿರಾದಾರ, ಪ್ರಕಾಶ ಗುಡ್ಲ ಮಾತನಾಡಿದರು.
ಸಮಾರಂಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಮಾರತಂಡ ಗುಡ್ಲ,ಮಲ್ಲಪ್ಪ ಮೈಲಾರಿ, ಮಹಾದೇವ ರೂಗಿ, ಮಲಕಪ್ಪ ಬೆನೂರ,ಮೈಲಾರಿ ಗುಡ್ಲ, ದಾದು ಗುಡ್ಲ, ಮಾಳಪ್ಪ ಬಗಲಿ,ಶ್ರೀಕಾಂತ ಗುಡ್ಲ ಮತ್ತಿತರಿದ್ದರು.
ಸಮಾರಂಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಮಾರತಂಡ ಗುಡ್ಲ,ಮಲ್ಲಪ್ಪ ಮೈಲಾರಿ, ಮಹಾದೇವ ರೂಗಿ, ಮಲಕಪ್ಪ ಬೆನೂರ,ಮೈಲಾರಿ ಗುಡ್ಲ, ದಾದು ಗುಡ್ಲ, ಮಾಳಪ್ಪ ಬಗಲಿ,ಶ್ರೀಕಾಂತ ಗುಡ್ಲ ಮತ್ತಿತರಿದ್ದರು.
ಇಂಡಿ ಪಟ್ಟಣದ ಸಾತಪುರದ ಮಾರತಂಡ ಗುಡ್ಲ ಇವರ ಹೊಲದ ಆವರಣದಲ್ಲಿ ನಡೆದ ಜ್ಞಾನ ಸಪ್ತಾಹ ಕಾರ್ಯಕ್ರಮದಲ್ಲಿ ಗುರುಲಿಂಗ ಶ್ರೀಗಳು ಮಾತನಾಡಿದರು.



















