ಭಾಗವಾ ಧ್ವಜ ವಿವಾವ | ಕಾಂಗ್ರೆಸ್ ವಿರುದ್ಧ ಕಿಡಿ..!
Voice Of Janata :ಮಂಡ್ಯ : ಮಂಡ್ಯದಲ್ಲಿ ಭಗವಾ ಧ್ವಜ ಗಲಾಟೆ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ಪಿತೂರಿ ಆಗಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ವಿಜಯಪುರ ನಗರದಲ್ಲಿ ರವಿವಾರ 12 ಗಂಟೆಗೆ ಮಾಧ್ಯಮದ ಎದುರು ಮಾತನಾಡಿದ ಅವರು, ಹನುಮ ಧ್ವಜ ಹಾರಿಸಲು ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದು ಧ್ವಜ ಸ್ತಂಭನಿರ್ಮಾಣ ಮಾಡಲಾಗಿತ್ತು. ಈ ಘಟನೆ ನಾವು ಭಾರತದಲ್ಲಿದ್ದೇವಾ ಅಥವಾ ಬೇರೆ ದೇಶದಲ್ಲಿದ್ದೇವೆ ಎಂಬ ಅನುಮಾನ ಉಂಟು ಮಾಡಿತ್ತು. ಅಲ್ಪಸಂಖ್ಯಾತ ಓಲೈಕೆ ಕಾರಣದಿಂದ ಹನುಮ ಧ್ವಜ ಹಾರಿಸಲು ಅವರು ಪ್ರಶ್ನೆ ಮಾಡುತ್ತಾರೆ. ಕಾಂಗ್ರೆಸ್‌ನವರಿಗೆ ಅಧಿಕಾರ ಮತದಿಂದ ಹೀಗೆ ಮಾಡಿದ್ದಾರೆ ಎಂದು ಕಿಡಿಕಾರಿದರು. ಅಲ್ಲದೇ, ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಧಾನ ಮಾಡುವ ವಿಚಾರ, ಹಿಂದಿನಿಂದಲೂ ಈ ಕುರಿತು ಚರ್ಚೆ ನಡೆಯುತ್ತಿದೆ. ಎಲ್ಲದಕ್ಕೂ ಸಮಯ ಕೂಡಿ ಬರಬೇಕು. ಮುಂಬರುವ ದಿನಗಳಲ್ಲಿ ಒಳ್ಳೆಯದಾಗುತ್ತದೆ ಎಂದರು. ಎಐಸಿಸಿ ಅಧ್ಯಕ್ಷ ಖರ್ಗೆ ಬಿಜೆಪಿ ಸೇರ್ಪಡೆಯಾಗುತ್ತಾರೆಂಬ ವಿಚಾರಕ್ಕೆ ಉತ್ತರಿಸಿದ ಅವರು, ಇಡೀ ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಉಂಟಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪಿಎಂ ಆಗಬೇಕೆಂಬ ಮತದಾರರ ಆಶಯ. ಇದು ಎಲ್ಲೆಟೆ ವ್ಯಕ್ತವಾಗುತ್ತಿದೆ. ಮೊನ್ನೆ ಖರ್ಗೆ ಅವರು ಕೂಡ ಬಿಜೆಪಿ 400ಕ್ಕೂ ಅಧಿಕ ಸ್ಥಾನ ಬರುತ್ತವೆ ಎಂಬ ಮಾತು ಬಂದಿದೆ. ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುತ್ತಾರೆಂಬ ಮಾತು ಖರ್ಗೆ ಅವರ ಬಾಯಿಂದ ಬಂದಿದೆ. ಸತ್ಯ ಇದು. ಇದು ಎಲ್ಲರಿಗೂ ಆಗಿದೆ ಎಂದರು.