ಭಗೀರಥ ಮಹರ್ಷಿ ಧರೆಗೆ ಗಂಗೆಯನ್ನೇ ಕರೆತಂದರು : ಕರವೇ ಕೆಂಗನಾಳ ಹೇಳಿಕೆ..
ಇಂಡಿ : ತಾಂಬಾ ಗ್ರಾಮದ ಭಗೀರಥ ಮಹರ್ಷಿ ವೃತ್ತದಲ್ಲಿ ಮಹರ್ಷಿ ಜಯಂತಿಯು ಬಹಳ ವಿಜೃಂಭಣೆಯಿಂದ ನಡೆಯಿತು ಈ ಸಮಯದಲ್ಲಿ ಮಾತನಾಡಿದ ಕರವೇ ಅಧ್ಯಕ್ಷ ಶಿವರಾಜ್ ಕೆಂಗನಾಳ ಅವರು ನಮ್ಮ ನಾಡಿಗೆ ಕೆಟ್ಟ ಪರಸ್ಥಿತಿ ಬಂದಾಗ ಭಗೀರಥ ಮಹರ್ಷಿಗಳು ಅತ್ಯಂತ ಕಠಿಣ ಯಜ್ಞ ಯಾಗಧಿಗಳನ್ನು ಮಾಡಿ ಗಂಗೆಯನ್ನು ಭೂಮಿಗೆ ತಂದು ಮನು ಕುಲವನ್ನೇ ಉದ್ಧಾರ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಈ ಸಮಯದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ತಾಲೂಕು ಪಂಚಾಯತ ಸದಸ್ಯರು ಹಾಗೂ ಉಪ್ಪಾರ ಸಮಾಜದ ಭಾಂದವರು ತಾಯಂದಿರು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.