ಇಂಡಿ: ಜಿಟಿ ಜಿಟಿ ಮಳೆ, ನಿಂತ ನೀರಿನಿಂದಾಗಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತದೆ. ಮಳೆಗಾಲದಲ್ಲಿ ಜನರು ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಈ ಹಿನ್ನಲೆಯಲ್ಲಿ ಸಾಲೋಟಗಿಯ ಶಿವ ಯೋಗೀಶ್ವರ ಪ್ರೌಢಶಾಲೆಯಲ್ಲಿ ಡೆಂಗ್ಯೂ ಮಾಶಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶಿವಯೋಗಿಶ್ವರ ಪ್ರೌಢಶಾಲೆ ಸಾಲೋಟಗಿ ಗ್ರಾಮದಲ್ಲಿ ಡೆಂಗ್ಯೂ ಮಸಾಚರಣೆ ಕಾರ್ಯಕ್ರಮಕ್ಕೆ ಡಾ: ಪ್ರಶಾಂತ ಧೂಮ್ ಗೊಂಡ ಚಾಲನೆ ನೀಡಿ, ಮಾತನಾಡಿದ ಅವರು ಡೆಂಗ್ಯೂ, ಚಿಕನ್ ಗುನ್ಯ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತೆಗಾಗಿ ಶಾಲಾ ಮಕ್ಕಳಿಗೆ ಆರೋಗ್ಯ ಹಾಗೂ ಮಾಹಿತಿ ಶಿಕ್ಷಣ ನೀಡಲಾಗುತ್ತಿದೆ.
ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆ ಸಿಬ್ಬಂದಿಯವರು ಮನೆ ಬಾಗಿಲಿಗೆ ಬಂದಾಗ ಸಹಕರಿಸಿರಿ ಡೆಂಗ್ಯೂ ಚಿಕನ್ ಗುನ್ಯಾ ಕಾಯಿಲೆ ಬರದಂತೆ ಮುಂಜಾಗ್ರತೆ ವಹಿಸಬೇಕು. ವಾರಕ್ಕೊಮ್ಮೆ ನೀರಿನ ಪರಿಕರಗಳು ಸಂಪೂರ್ಣವಾಗಿ ಖಾಲಿ ಮಾಡಿ, ಒಣಗಿದ ನಂತರ ಪುನಃ ನೀರು ಸಂಗ್ರಹ ಮಾಡಬೇಕು. ನೀರಿನಲ್ಲಿರುವ ಸಣ್ಣ ಪ್ರಮಾಣದ ಹುಳವನ್ನು ಲಾರ್ವ ಎಂದು ಕರೆಯುತ್ತೇವೆ. ಲಾರ್ವ ಸೊಳ್ಳೆ ಮನುಷ್ಯನಿಗೆ ಕಚ್ಚಿದಾಗ ಡೆಂಗ್ಯೂ ಕಾಯಿಲೆ ಬರುತ್ತದೆ. ಜ್ವರ, ಕಣ್ಣು ಕೆಂಪಾಗುವುದು, ಕತ್ತಿನ ಹಿಂಭಾಗ ನೋವು ಕಂಡು ಬಂದಲ್ಲಿ ಸಮೀಪದ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಿರಿ ಎಂದು ಹೇಳಿದರು.
ಇನ್ನು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೈ ಎಮ್ ಪೂಜಾರ್ ಮಾತನಾಡಿ ದೈನಂದಿನ ಬಳಕೆ ನಿರುಪಯುಕ್ತ ತ್ಯಾಜ್ಯ ವಸ್ತುಗಳು, ಬೇಕಾಬಿಟ್ಟಿಯಾಗಿ ಎಸೆದಿರುವ ಟೈಯರು, ಪ್ಲಾಸ್ಟಿಕ್ ವಸ್ತುಗಳಲ್ಲಿ ಒಡೆದು ಹಾಳಾದ ಘನತ್ಯಾಜ್ಯ ವಸ್ತುಗಳಲ್ಲಿ ಮಳೆಯಿಂದ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ತಾಣಗಳ ತವರಾಗದಂತೆ ಎಚ್ಚರವಹಿಸಿ ನಿಂತ ನೀರು ಚೆಲ್ಲಿ ಸೂಕ್ತವಾದ ರೀತಿಯಲ್ಲಿ ವಿಲೇವಾರಿ ಮಾಡಿ ಎಂದು ಹೇಳುತ್ತಾ, ಕಲುಷಿತ ನೀರು, ವಿಷಪೂರಿತ ಆಹಾರ ಸೇವನೆಯಿಂದ ವಾಂತಿಭೇದಿ ಪ್ರಕರಣಗಳು ಕಂಡು ಬರುತ್ತವೆ. ಕಾಯಿಸಿ ಹಾರಿಸಿದ ನೀರು ಸೇವನೆ ಮಾಡಿಬೇಕು. ಬಿಸಿಯಾದ ಆಹಾರವನ್ನು ಸೇವಿಸಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನೀರಿಕ್ಷಣಾಧಿಕಾರಿ ಎಸ್ ಹೆಚ್ ಅತನೂರ್, ಪ್ರೌಢಶಾಲೆ ಮುಖ್ಯ ಗುರುಗಳು, ವೈ ಎಸ್ ಉಪಾಸೇ, ಎಸ್ ಬಿ ಡಾಣೆ, ಪಿ ಬಿ ಹ್ಯಾಳಾದ, ಜೆ ಎಂ. ಕಡಣಿ, ಬಿಕೆ ಪಾಟೀಲ್, ಆರ್ ಎನ. ನಿಂಬಾಳ, ಕೂಸುರ್, ಆಶಾ ಕಾರ್ಯಕರ್ತೆ ಜಗದೇವಿ ಮಂದೇವಾಲ ಹಾಗೂ ವಿದ್ಯಾರ್ಥಿಗಳು ಇದ್ದರು.