VOJ ನ್ಯೂಸ್ ಡೆಸ್ಕ್:
ಬೆಂಗಳೂರು: ರಾಜಕೀಯದ ಜೊತೆಗೆ ಇದೀಗ ಮಾಜಿ ಸಿಎಂ. ಬಿ.ಎಸ್. ಯಡಿಯೂರಪ್ಪ ಬೆಳ್ಳಿ ಪರದೆಯ ಮೇಲೆ ಮಿಂಚಲಿದ್ದಾರೆ. ತನುಜಾ ಎಂಬ ಸಿನಿಮಾದಲ್ಲಿ ಅವರು ಮುಖ್ಯಮಂತ್ರಿಯಾಗಿ ಕಾಣಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೊದಲ ಬಾರಿಗೆ ಬಣ್ಣಹಚ್ಚಿ ಸ್ಯಾಂಡಲ್‍ವುಡ್‍ಗೆ ಪದಾರ್ಪಣೆ ಮಾಡಿದ್ದಾರೆ. ಯಡಿಯೂರಪ್ಪ ಜತೆಗೆ ಹಿರಿಯ ಪತ್ರಕರ್ತರಾದ ವಿಶ್ವೇಶ್ವರ್ ಭಟ್ ಕೂಡ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರಕ್ಕೆ ಹರೀಶ್ ಎಂಡಿ ಹಳ್ಳಿ ನಿರ್ದೇಶನವಿದೆ. ನೈಜ ಘಟನೆಯನ್ನು ಆಧರಿಸಿ ಚಿತ್ರ ನಿರ್ಮಿಸಲಾಗಿದೆ. ಶಿವಮೊಗ್ಗ ಹಾಗೂ ಬೆಂಗಳೂರಿನ ಹಲವೆಡೆ ಚಿತ್ರೀಕರಣಗೊಂಡಿದೆ ಎಂದು ತನುಜಾ ಚಿತ್ರತಂಡ ಮಾಹಿತಿ ಹೊರಹಾಕಿದೆ.