ಬಿಇಡಿ ಕೊರ್ಸ ಪ್ರವೇಶ ; ದಾಖಲೆಗಳು ಪರಿಶೀಲನೆ, ಯಾವಾಗಿನಿಂದ ಗೊತ್ತಾ..!
Voice Of Janata : ಪ್ರಸ್ತಕ ವರ್ಷದ ಬಿ. ಎಡ್ ಕೋರ್ಸ್ ನ ಸರಕಾರಿ ಕೋಟಾದ ಸೀಟುಗಳ ದಾಖಲಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅರ್ಹ ಅಭ್ಯರ್ಥಿಗಳ 2ನೇ ಸುತ್ತಿನ ಪರಿಶೀಲನಾ ಪಟ್ಟಿಯನ್ನು ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಜ.2ರಿಂದ ಜ.6ರ ವರೆಗೆ ನೋಡಲ್ ಕೇಂದ್ರಗಳಲ್ಲಿ ಮೂಲ ದಾಖಲೆಗಳನ್ನು ಪರಿಶೀಲಿನೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಮೊದಲನೆ ಸುತ್ತಿನಲ್ಲಿ ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗದೆ ಇರುವ ವಿದ್ಯಾರ್ಥಿಗಳು ತಮ್ಮ ದಾಖಲೆಗಳನ್ನು ಪರಿಶೀಲನೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್‍ಸೈಟ್
www.schooleducation.karanataka.gov.in
ಗೆ ಅಥವಾ ಸಿಟಿಇ/ಡಿಐಇಟಿ ನೋಡಲ್ ಕೇಂದ್ರಗಳನ್ನು ಸಂಪರ್ಕಿಸುವಂತೆ ಪ್ರಕಟನೆಯಲ್ಲಿ ತಿಳಿಸಿದೆ.