ಸಮಾಜಮುಖಿ ಸೇವೆಗೆ ಬಸವರಾಜ ಹಾರಿವಾಳ ಆದರ್ಶ : ಸಚಿವ ಶಿವಾನಂದ
ಬಸವನಬಾಗೇವಾಡಿ : ಸಾಧನೆ ಮಾಡಿಯೂ ಎಲೆಮರೆ ಕಾಯಿಯಂತೆ ಬದುಕುತ್ತಿರುವ ಜಾನಪದ ಹಿರಿಯ ಕಲಾವಿದ ಬಸವರಾಜ ಹಾರಿವಾಳ ಅವರನ್ನು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಅರಸಿ ಬಂದಿದೆ. ನಿಸ್ವಾರ್ಥ ಮನೋಭಾವದಿಂದ ತಮ್ಮ ಇಡೀ ಜೀವನವನ್ನು ಸಮಾಜಮುಖಿ ಕಾರ್ಯಕ್ಕೆ ಮುಡಿಪಾಗಿಟ್ಟಿರುವ ಜಾನಪದ ಹಿರಿಯ ಕಲಾವಿದ ಬಸವರಾಜ ಹಾರಿವಾಳ ಆದರ್ಶಪ್ರಾಯರು ಎಂದು ಜವಳಿ, ಕೃಷಿ ಮಾರುಕಟ್ಟೆ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವರಾದ ಶಿವಾನಂದ ಪಾಟೀಲ ಬಣ್ಣಿಸಿದರು.
ಭಾನುವಾರ ಬಸವನಬಾಗೇವಾಡಿ ಪಟ್ಟಣದ ಬಸವ ಭವನದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಜಾನಪದ ಕಲಾವಿದ ಬಸವರಾಜ ಹಾರಿವಾಳ ಅವರ ಅಭಿನಂದನಾ ಸಮಾರಂಭ ಹಾಗೂ 50ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ಬಸವರಾಜ ಹಾರಿವಾಳ ಅವರ ನಿಸ್ವಾರ್ಥ ಸೇವೆ, ಪಡೆದ ಕೀರ್ತಿ, ಮಾಡಿದ ಸಾಧನೆ, ಗಳಿಸಿದ ಪ್ರಶಸ್ತಿ ಸಮ್ಮಾನಗಳಿಂದ ಬಸವನಬಾಗೇವಾಡಿ ಮಾತ್ರವಲ್ಲ ಇಡೀ ವಿಜಯಪುರ ಜಿಲ್ಲೆಗೆ ಕೀರ್ತಿ ಬಂದಿದೆ. ಕಳೆದ 75 ವರ್ಷಗಳಲ್ಲಿ ಬಸವನಬಾಗೇವಾಡಿ ತಾಲೂಕಿಗೆ ಬಸವರಾಜ ಹಾರಿವಾಳ ಮೂಲಕ ರಾಜ್ಯೋತ್ಸವದ ಎರಡನೇ ಪ್ರಶಸ್ತಿ ಸಂದಿದೆ. ಇವರಿಗೆ ಬಂದಿರುವ ಕೀರ್ತಿ ಈ ನೆಲದ ನಮ್ಮೆಲ್ಲರಿಗೂ ಸಂದ ಗೌರವವೂ ಹೌದು ಎಂದು ವಿಶ್ಲೇಷಿಸಿದರು.
ಲಾವಣಿ, ಹಂತಿಪದಗಳಂಥ ಜಾನಪದ ಪರಂಪರೆ ಕೊಂಡಿಗಳನ್ನು ಕಟ್ಟುವಲ್ಲಿ ಬಸವರಾಜ ಹಾರಿವಾಳ ಅವರ ಕೊಡುಗೆ ಅನುಪಮ. ಜಾತಿ, ಮತ ಪಂಥಗಳನ್ನು ನೋಡದೇ ಇಡೀ ಸಮುದಾಯದ ಹಿತಚಿಂತನೆ ಮೂಲಕ ಬಸವಾದಿ ಶರಣರು ಕಂಡ ಜಾತ್ಯಾತೀತ ಸೇವೆ ಅನುಕರಣೀಯವಾಗಿದೆ ಎಂದರು.
ಇಂದಿನ ತಲೆಮಾರಿನವರು 50 ವರ್ಷಬದುಕುವುದೇ ಅಪರೂಪ ಎಂಬಂತಾಗಿರುವ ಸಂದರ್ಭದಲ್ಲಿ ಸದಾಸಮಾಜಮುಖಗಿ ಚಿಂತನೆಯ ಜೀವನ ನಡೆಸಿದ ಬಸವರಾಜ ಅವರು 50ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ. ಪತ್ನಿಯ ಸಹಕಾರದಿಂದ ಸಮಾಜಮುಖಿ ಕಾಯಕದೊಂದಿಗೆ ಆದರ್ಶ ದಾಂಪತ್ಯ ಸವೆಸಿದ್ದಾರೆ. ಇವರ ವೈವಾಹಿಕ ಜೀವನ ಶತಮಾನ ಕಾಣಲಿ ಎಂದು ಆಶಿಸಿದ ಸಚಿವರು, ಅಂದುಕೊಂಡುದನ್ನು ಸಾಧಿಸುವ ಛಲಗಾರ ಎಂದರು.
ಬಸವರಾಜ ಹಾರಿವಾಳ ಎಂಥ ಸಾಧಕರು ಎಂಬುದಕ್ಕೆ ಸಮಾಜ ಹಿತದ ಕಾಳಜಿಯವರು ಎಂಬುದಕ್ಕೆ ಅವರನ್ನು ಅಭಿನಂದಿಸಲು ಸೇರಿರುವ ಅಭಿಮಾನಿ ಬಳಗವೇ ಸಾಕ್ಷಿ. ನೀವು ಹಾಕು ಶಾಲು-ಹಾರ ಪ್ರಾಂಜಲ ಮನಸ್ಸಿನಿಂದ ಕೂಡಿದ್ದು, ಸ್ಫೂರ್ತಿದಾಯಕವಾಗಿದೆ ಎಂದು ಶ್ಲಾಘಿಸಿದರು.
ಬಸವನಬಾಗೇವಾಡಿ ಕೀರ್ತಿ ಹೆಚ್ಚಿಸುವಲ್ಲಿ ಸಮಾಜಮುಖಿ ಕಾರ್ಯದಿಂದಲೇ ಹೆಸರಾದ ಸಂಗಪ್ಪ ಹಾರಿವಾಳ ಹಾಗೂ ಸಂಗಪ್ಪ ಅಡಗಿಮನಿ ಅವರೂ ಸ್ಮರಣಾರ್ಹರು ಎಂದ ಸಚಿವರು, ಸಾಧಕ ಬಸವರಾಜ ಹಾರಿವಾಳ ಅವರು ಸಮಾಜಕ್ಕೆ ಸದಾ ಆದರ್ಶ ಹಾಗೂ ಚೈತನ್ಯದಾಯಕವೆಂದು
ಇಂಗಳೇಶ್ವರದ ವಚನಶಿಲಾ ಮಂಟಪದ ಚನ್ನಬಸವಶ್ರೀಗಳು, ಮಸಬಿನಾಳ ವಿರಕ್ತಮಠದ ಸಿದ್ಧರಾಮಶ್ರೀಗಳು, ಮನಗೂಳಿಯ ಅಭಿನವ ಸಂಗನಬಸವ ಶ್ರೀಗಳು, ಹಿರೇಮಠದ ಶಿವಪ್ರಕಾಶಶ್ರೀಗಳು, ವಿರಕ್ತಮಠದ ಸಿದ್ಧಲಿಂಗಶ್ರೀಗಳು, ನಂದಿಹಾಳದ ಕೋಟೇಕಲ್ ಮಠದ ಸಂಗಯ್ಯಶ್ರೀಗಳು, ಸಂಗಯ್ಯ ಕಳೇಶ್ವರಮಠ, ಶಾಸಕರಾದ ರಾಜುಗೌಡ ಪಾಟೀಲ, ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಶಿವನಗೌಡ ಬಿರಾದಾರ, ಶ್ರೀಬಸವೇಶ್ವರರ ಅರ್ಬನ್ ಬ್ಯಾಂಕ್ ಅಧ್ಯಕ್ಷರಾದ ಲೋಕನಾಥ ಅಗರವಾಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಹಿರಿಯ ಸಾಹಿತಿ ಲ.ರು.ಗೊಳಸಂಗಿ, ಜಾನಪದ ಪರಿಷತ್ ತಾಲೂಕಾಧ್ಯಕ್ಷ ದೇವೇಂದ್ರ ಗೋನಾಳ, ಕೂಡಗಿ ಗ್ರಾಮದ ಶಿವಣ್ಣ ಗುಡದಿನ್ನಿ, ಉಕ್ಕಲಿ ಗ್ರಾಮದ ಶಾಂತಪ್ಪ ಇಂಡಿ, ಕತ್ನಳ್ಳಿಯ ನಿಂಗಪ್ಪ ಹೊನ್ನುಟಗಿ, ಲಕ್ಷ್ಮಣ ಜುಗತಿ, ತಹಶೀಲ್ದಾರ ವೈ.ಎಸ್. ಸೋಮನಕಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
1985 ರಲ್ಲಿ ತೋಟದ ಮನೆಯಲ್ಲಿ ವಾಸವಿದ್ದಾಗ ನೆರೆಯ ಬಂಜಾರಾ ತಾಂಡಾದ ಜನತೆಯ ಸಹಕಾರದಿಂದ, ರಂಗ ಆಸಕ್ತರು ನೀಡುತ್ತಿದ್ದ ಸಹಕಾರ ಅವರ್ಣನೀಯ. ಹೆತ್ತವರ ಆಶೀರ್ವಾದದಿಂದ ಸಮಾಜಕ್ಕೆ ಸಮರ್ಪಿಸಿಕೊಂಡ ನನ್ನನ್ನು ಸಮಾಜವೂ ಅಪ್ಪಿಕೊಂಡು ಸಾಕಿದೆ. ಇದಕ್ಕಾಗಿ ನಾನು ಸಮಾಜಕ್ಕೆ ಋಣಿಯಾಗಿದ್ದೇನೆ.
ಬಸವರಾಜ ಹಾವಿರಾಳ ಕರ್ನಾಟಕ ರಾಜ್ಯೋತ್ಸವ ವಿಜೇತ ಕಲಾವಿದರು ಬಸವನಬಾಗೇವಾಡಿ
3ಬಿಬಿ-ಎಸ್.ಎಸ್.ಪಿ.2_ಎ
ಬಸವನಬಾಗೇವಾಡಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಲಾವಿದ ಬಸವರಾಜ ಹಾರಿವಾಳ ಅಭಿನಂದನಾ ಸಮಾರಂಭಕ್ಕೆ ಸಚಿವರಾದ ಶಿವಾನಂದ ಪಾಟೀಲ ಚಾಲನೆ ನೀಡಿದರು.
3ಬಿಬಿ-ಎಸ್.ಎಸ್.ಪಿ.2_ಬಿ :
ಬಸವನಬಾಗೇವಾಡಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಲಾವಿದ ಬಸವರಾಜ ಹಾರಿವಾಳ ಅಭಿನಂದನಾ ಸಮಾರಂಭದಲ್ಲಿ ಸಚಿವರಾದ ಶಿವಾನಂದ ಪಾಟೀಲ ಅವರು ಹಾರಿವಾಳ ದಂಪತಿಯನ್ನು ಸನ್ಮಾನಿಸಿ, ಅಭಿನಂದಿಸಿದರು.