ಬಸರಕೋಡ ಗ್ರಾಮದಲ್ಲಿ ಗ್ರಾಪಂ ದಿವ್ಯ ನಿರ್ಲಕ್ಷ್ಯಕ್ಕೆ ಗ್ರಾಮ ಅಸ್ವಸ್ಥತೆಯಿಂದ ಬಳಲುವಂತೆ ಆಗಿದೆ.
ಗ್ರಾಮದಲ್ಲಿ ಹೂಳು ತುಂಬಿದ ಚರಂಡಿ ನೀರು ರಸ್ತೆಯ ಮಧ್ಯೆ ಹರಿಯುತ್ತವೆ.
ಅವ್ಯವಸ್ಥೆ ಆಗರವಾದ ಬಸರಕೋಡ ಗ್ರಾಮ ಸ್ವಚ್ಛತೆ ಮರೀಚಿಕೆ ರೋಗದ ಬೀತಿ ?
ವಿಶೇಷ ವರದಿ : ಬಸವರಾಜ ಈ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ : ಗ್ರಾಮದ ಸ್ವಚ್ಚತೆ ಮರೀಚಿಕೆ ಆಗಿದ್ದು ಆಗರವಾಗಿದೆ.ಚರಂಡಿಗಳಲ್ಲಿ ಹೂಳು ತುಂಬಿಕೊಂಡಿದ್ದ ನೀರು ಸಾಕಷ್ಟು ಅವಾಂತರ ಸೃಷ್ಟಿಯಾಗುತ್ತದೆ.ಕೇಂದ್ರ ರಾಜ್ಯ ಸರಕಾರ ಯೋಜನೆಗಳನ್ನು ಗ್ರಾಮ ಪಂಚಾಯತಿಗೆ ಬರುತ್ತದೆ ಸಾರ್ವಜನಿಕ ಅನುಕೂಲ ಸಾಕಷ್ಟು ಅನುದಾನ ಬಂದರು ಗ್ರಾಮಗಳು ಅಭಿವೃದ್ಧಿ ಆಗುತ್ತೀಲ್ಲವೇ ಎಕ್ಸ್ ಪ್ರಶ್ನೆ ಯಾಗಿದೆ.
ತಾಲ್ಲೂಕಿನ ಬಸರಕೋಡ ಗ್ರಾಮದಲ್ಲಿ ಗ್ರಾಪಂ ಅವರ ದಿವ್ಯ ನಿರ್ಲಕ್ಷ್ಯಕ್ಕೆ ಗ್ರಾಮ ಅಸ್ವಸ್ಥತೆಯಿಂದ ಬಳಲುವಂತೆ ಆಗಿದೆ ತುಂಬಿದ ಚರಂಡಿ ನೀರು ರಸ್ತೆಯ ಮಧ್ಯೆ ಹರಿಯುತ್ತವೆ ದೇವಾಲಯ ಹೋಗುವ ಭಕ್ತರು ಚರಂಡಿ ಕೊಳಚೆ ನೀರಿನಲ್ಲಿ ಆಲಯಕ್ಕೆ ಹೋಗುವ ದುಸ್ಥಿತಿಯಿದೆ. ಇದರಂತೆ ಗ್ರಾಮದಲ್ಲಿ ಬಹುತೇಕ ರಸ್ತೆಯಗಳ ಮೇಲೆ ಹೂಳು ತುಂಬಿದ ಚರಂಡಿ ನೀರು ಹರಿಯುತ್ತದೆ ತುಂಬಿ ಹರಿಯುವ ಚರಂಡಿ ಸ್ವಚ್ಚತೆಯ ಗೂಡವೆ ನಮಗೇತಕೆ? ಎಂಬಂತ ಪರಿಸ್ಥಿತಿ ಗ್ರಾಮದಲ್ಲಿದೆ.
ಮುಖ್ಯ ರಸ್ತೆ ಸಂಪರ್ಕಕ್ಕೆ ಬರುವ ಗ್ರಾಮಗಳಾದ ಸಿದ್ದಾಪುರ,ಗುಂಡಕರಜಗಿ,ಗುಡದಿನ್ನಿ, ಕೊಪ್ಪ,ಮುಖ್ಯ ರಸ್ತೆ ಹಾಗೂ ಬಸರಕೋಡ ಹುಲ್ಲೂರ ನಿಡಗುಂದಿ ಕೂಡವ ರಸ್ತೆ ವಿವಿಧ ಗ್ರಾಮ ಸಂಪರ್ಕಿಸುವ ರಸ್ತೆಯಲ್ಲಿರುವ ಚರಂಡಿಗಳು ಶಿಥಿಲಗೊಂಡಿವೆ. ಇದರಲ್ಲಿ ತ್ಯಾಜ್ಯ ತುಂಬಿಕೊಂಡು ರಸ್ತೆ ಮೇಲೆ ಕೊಳಚೆ ಚರಂಡಿ ನೀರು ಹರಿಯುತ್ತದೆ.
ಬಸರಕೋಡ ಗ್ರಾಮ ಪಂಚಾಯತಿಯಲ್ಲಿ ೨ ಪೌರ ಕಾರ್ಮಿಕರು ಹಾಗೂ ೩ ಜನ ವಾಟರ್ ಮ್ಯಾನಗಳಿದ್ದಾರೆ ಪಂಚಾಯತಿ ಸಿಬ್ಬಂದಿ ಇದ್ದಾರೆ ಗ್ರಾಮದ ಶುದ್ದ ಪರಿಸರ ನಿರ್ಮಾಣ ಹಾಗೂ ಹಾಳುಕೂಂಪೆಯಾಗಲು ಕಾರಣವಾದವರ ಮೇಲೆ ಸಂಬಂಧಿಸಿದ ತಾಪಂ ಅಧಿಕಾರಿಗಳು ಕುಡಿಯುವ ನೀರು ಸರಬರಾಜು ತಾಲೂಕ ಅಧಿಕಾರಿಗಳು ಮಾಧ್ಯಮಗಳ ವರದಿಗೆ ಎಚ್ಚತ್ತು ಕ್ರಮಕೈಗೂಳ್ಳುತ್ತಾರಾ? ಕಾಯ್ದುನೋಡಬೇಕಿದೆ.
ಹೂರಗಿನಮಠಕ್ಕೆ ಹೋಗವ ದಾರಿಯಲ್ಲಿ ಗ್ರಾಪಂ ನಿರ್ಮಾಣ ಮಾಡಿದ ಬಟ್ಟೆ ಒಗೆಯಲು ದೋಬಿಘಾಟ್ ಪರಿಸ್ಥಿತಿ ಕಣ್ಣಾರೆ ನೋಡಿದರಷ್ಟೇ ತಿಳಿಯುತ್ತದೆ ಏಕೆಂದರೆ ಹಾಗಿದೆ ಅದರ ಪರಿಸ್ಥಿತಿ ದಿನದ 24 ಗಂಟೆಯು ನೀರು ಸದಾ ಹರಿಯುವ ಪರಿಣಾಮ ದೂಬಿಘಾಟ್ ಸಂಪೂರ್ಣ ಹಸಿರು ಪಾಚಿಯಿಂದ ತುಂಬಿ ನಿತ್ಯ ಹರಿದ್ವರ್ಣದಂತೆ ಹರಿಯುತ್ತದೆ ಅದರ ಮುಂದೆ ಶುದ್ದ ಕುಡಿಯುವ ನೀರಿನ ಘಟಕವಿದೆ ಅದರ ಪಕ್ಕದ ರಸ್ತೆಯಿಂದ ಹಾಗೂ ಅದರ ಮುಂದೆ ಚರಂಡಿ ತುಂಬಿ ಗಲೀಜು ನೀರು ಹರಿಯುತ್ತವೆ ,ಚರಂಡಿ ಗೆ ಹೊಂದಿಕೊಂಡ ತಿಪ್ಪೆಗಳು ಮೊದಲೆ ಸ್ವಚ್ಛ ಮಾಡದ ಚರಂಡಿಯನ್ನು ಇನ್ನಷ್ಟು ತುಂಬುತ್ತಿವೆ.
ಬಹುಹಳ್ಳಿಗಳಿಗೆ ಸರಬರಾಜು ಆಗುವ ಕುಡಿಯುವ ನೀರಿನ ಸಂಪ್ ಘಟಕದ ಪರಿಸ್ಥಿತಿ ಹೀನಾಯವಾಗಿದೆ ಪಾಚಿಗಟ್ಟಿದ ಅಶುದ್ದ ಪರಿಸ್ಥಿತಿಯಲ್ಲಿ ಕುಡಿಯುವ ನೀರು ಸರಬರಾಜು ಘಟಕ ( ಸಂಪ್ ) ಇದೆ ಯಾವುದೇ ಸ್ವಚ್ಚತೆ ಇಲ್ಲ ತುಂಬಿ ಹರಿಯುವ ನೀರು ಪುನಃ ಅದರೊಳಗೆ ಹೋಗುತ್ತದೆ ಮಾಲಿನ್ಯದ ಬಗ್ಗೆ ಕನಿಷ್ಠ ಪರಿಜ್ಞಾನವಿಲ್ಲದ ನೀರು ಪೂರೈಸುವ ಸಿಬ್ಬಂದಿ ಗ್ರಾಪಂ ಅಧಿಕಾರಿಗಳು ಸ್ವಚತೆಯ ಬಗ್ಗೆ ಲಕ್ಷ್ಯ ವಹಿಸದೆ ತಮ್ಮ ಪಾಡಿಗೆ ತಾವು ಇದ್ದಾರೆ ಅಶುದ್ದ ವಾತವರಣದಲ್ಲಿ ಕುಡಿಯುವ ನೀರಿನಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬಿರಿದರೆ ಇದಕ್ಕೆ ಯಾರು ಹೋಣೆ ಆಗುತ್ತಾರೆ?
ಹೆಸರು ಹೇಳದ ಗ್ರಾಮಸ್ಥರು.