ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆ ಲೇಖಕಿ ಬಾನು ಮುಷ್ತಾಕ್ ಆಯ್ಕೆ ಮಾಡಿದ್ದು,ರಾಜ್ಯ ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ಖಂಡಿಸುತ್ತೆವೆ : ಬಿಜೆಪಿಯ ಮುಖಂಡ ನಾಗೇಶ
ಇಂಡಿ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಬಿಜೆಪಿಯ ಮುಖಂಡ ನಾಗೇಶ ಹೆಗಡ್ಯಾಳ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಕನ್ನಡ ತಾಯಿಯ ಬಗ್ಗೆ ಅಭಿಮಾನ ಇಲ್ಲದವರು ಉದ್ಘಾಟನೆ ಮಾಡಬಾರದು ದಸರಾ ಸಂಭ್ರಮವು ಹಿಂದೂ ಧರ್ಮದ ಹಬ್ಬವಾಗಿದ್ದು, ಅದರ ಸಾಂಪ್ರದಾಯಿಕ ಮಹತ್ವವನ್ನು ಕಾಪಾಡಬೇಕು ಎಂದು ಹೇಳಿದ್ದಾರೆ.
ಹಿಂದೂ ಧರ್ಮದ ವಿವಿಧ ಕಾರ್ಯಕ್ರಮಗಳ ಪೂಜೆ, ಉದ್ಘಾಟನೆ, ಹಿಂದುಗಳಿಂದ ಮಾತ್ರ ಆಗಬೇಕು. ಸರ್ಕಾರವು ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಚಾಳಿ ಮುಂದುವರೆಸಿದೆ. ಸರ್ಕಾರವು ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕೆಂದು ಆಗ್ರಹಿಸಿದ್ದಾರೆ.



















