ಇಂಡಿ : ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ನಿಂಬಾಳ ಗ್ರಾಮದಲ್ಲಿರುವ ಗುರುದೇವ ರಾನಡೆ ಆಶ್ರಮಕ್ಕೆ ಸರಸಂಘಚಾಲಕ ಮೋಹನ್ ಭಾಗವತ್ ಭೇಟಿ ನೀಡಿದರು. ಇನ್ನೂ ಮೋಹನ್ ಭಾಗವತ ಅವರ ಕಾರ್ಯಕ್ರಮ ಅತ್ಯಂತ ಖಾಸಗಿ ಕಾರ್ಯಕ್ರಮವಾಗಿದೆ. ಖಾಸಗಿ ಕಾರ್ಯಕ್ರಮವಾದ ಹಿನ್ನಲೆ ಸಾರ್ವಜನಿಕ ಭೇಟಿ ಅವಕಾಶ ನಿರಾಕರಣೆ ಮಾಡಲಾಗಿದೆ. ಆರ್ ಎಸ್ ಎಸ್ ಕಾರ್ಯಕರ್ತರಿಗೂ ಸಹ ಭೇಟಿಗೂ ಅವಕಾಶವಿಲ್ಲ. ಆದ್ರೇ, ಕೆಲವು ಹಿರಿಯ ನಾಯಕರು, ಮಾಜಿ ಸಚಿವರು ಮಾತ್ರ ಭಾಗಿಯಾಗಿದ್ದಾರೆ.