ಇಂಡಿ : ತಾಲೂಕಿನ ಚೌಡಿಹಾಳ ಗ್ರಾಮದ ಶ್ರೀ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಪೌರಾಣಿಕ ನಾಟಕ ಪುಂಡ ಪರಶುರಾಮ ನಾಟಕ ಪ್ರದರ್ಶನವನ್ನು ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪೌರಾಣಿಕ ನಾಟಕಗಳು ಉಳಿದರೆ ನಾಡಿನ ಸಂಸ್ಕೃತಿಕ ಉಳಿಕೆಗೆ ಸಾಹಯಕವಾಗುತ್ತದೆ. ಐತಿಹಾಸಿಕ ನಾಟಕಗಳಲ್ಲಿ ಮನುಷ್ಯನ ಮನಸ್ಸುಗಳ ಪರಿವರ್ತನೆಗೆ ಸಹಾಯಕ ಆಗುತ್ತದೆ. ಇಂದಿನ ಆಧುನಿಕ ಮಾಧ್ಯಮಗಳ ದಿಂದ ನಾಟಕ ನೋಡುವವರ ಸಂಖ್ಯೆ ಕಡಿಮೆ ಆಗಿದ್ದು, ನಮ್ಮ ಐತಿಹಾಸಿಕ ಪುರುಷರ ಜೀವನ ಮೌಲ್ಯಗಳನ್ನು ಇಂದಿನ ಯುವ ಪೀಳಿಗೆ ಅಳವಡಿಸಿ ಕೋಳ್ಳಬೇಕು ಎಂದರು.
ನಾಟಕದ ನೇತೃತ್ವವನ್ನು ದುಂಡಯ್ಯ ಹಿರೇಮಠ ವಹಿಸಿದರು, ಅತಿಥಿಗಳಾಗಿ ರಮೇಶಗೌಡ ಬಿರಾದಾರ, ಅಲ್ಲಾವುದ್ದೀನ್ ಚೌಧುರಿ, ಮಾಹಾದೇವ ಅಡಕಿ, ರಾಜುಗೌಡ ಬಿರಾದಾರ, ಸಾಹೇಬಗೌಡ ಬಿರಾದಾರ, ಪ್ರಕಾಶ ಹಲಸಂಗಿ, ಸಂಜೀವ ಮಲ್ನಾಡ್, ಸಿದ್ದರಾಯ ಉಮರಾಣಿ, ಮಲಕಾರಿ ಪೂಜಾರಿ ,ಚಿದಾನಂದ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.