ಇಂಡಿ : ಬಿ.ಡಿ. ಪಾಟೀಲ ಗೆದ್ದೆ ಗೆಲ್ಲುತ್ತಾರೆ. ಒಂದು ವೇಳೆ ಗೆಲ್ಲದಿದ್ದರೆ ಶಾಂತೇಶ್ವರ ದೇವಸ್ಥಾನ ದಲ್ಲಿ ಕಸಗೂಡಿಸುವ ಕೆಲಸ ಮಾಡುವೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಜಿ.ಪಾಟೀಲ ಹೇಳಿದರು.
ಇಂಡಿ ಪಟ್ಟಣದ ರಿಲಾಯನ್ಸ್ ಬಂಕ್ ಹತ್ತೀರ ಇರುವ ಜೆಡಿಎಸ್ ಕಛೇರಿಯ ಆವರಣದಲ್ಲಿ ಆಯೋಜ – ನೆಗೊಳಿಸಿರುವ ಜೆಡಿಎಸ್ ಅಧಿಕೃತ ಘೋಷಿಸಿತ ಅಭ್ಯರ್ಥಿ ಬಿ.ಡಿ. ಪಾಟೀಲರ ೫೧ ನೇ ಜನ್ಮ ದಿನಾಚರಣೆ ಆಚರಣೆಯಲ್ಲಿ ಮಾತಾನಾಡಿದರು.
ಈ ಬರದನಾಡು ಜಿಲ್ಲೆಯ ಇವತ್ತಿನ ಹಸಿರು ಕ್ರಾಂತಿಗೆ ದೇವೆಗೌಡರು ಕಾರಣ ಎಂದು ಹೇಳಿದರು. ಅದರೆ ಇವತ್ತು ದುಡಿಯುವರು ನೀವು, ಕಳತನ ಮಾಡುವರು ನಾವು ಎಂದು ಲೇವಡಿ ಮಾಡಿದರು. ಇನ್ನೂ ನುಡಿದಂತೆ ನಡೆದ ಕುಮಾರ್ ಅಣ್ಣಾ ಸರಕಾರ. ಕೇವಲ ೧೪ ತಿಂಗಳಕಾಲದಲ್ಲಿ ರೈತರ ಸಾಲ ಮನ್ನಾ ಮಾಡಿದವರು.
ಈ ಸಂದರ್ಭದಲ್ಲಿ ಬಿ.ಡಿ.ಪಾಟೀಲ, ಡಾ.ಸಾರ್ವಭೌಮ ಬಗಲಿ, ನಾನಾಗೌಡ ಬಿರಾದಾರ, ನಾಗೇಶ ತಳಕೇರಿ, ಸದ್ದಾಂ ಅರಬ್, ಅಯೂಬ್ ನಾಟೀಕಾರ, ಸುಧಾಕಾರ ಬಿರಾದಾರ, ವಿಜಯಕುಮಾರ್ ಬೊಸಲೆ ಇನ್ನೂ ಅನೇಕರು ಉಪಸ್ಥಿತರಿದ್ದರು.