ಕ್ಷಯರೋಗ ನಿರ್ಮೂಲನೆಯಲ್ಲಿ ಬಿಸಿಜಿ ಲಸಿಕೆ ಪ್ರಮುಖವಾದ ಪಾತ್ರ ವಹಿಸುತ್ತದೆ.
ವಯಸ್ಕರರಿಗೆ ಬಿ.ಸಿ.ಜಿ. ಲಸಿಕೆ ನೀಡುವ ಲಸಿಕಾ ಅಭಿಯಾನಕ್ಕೆ ಚಾಲನೆ:
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಕ್ಷಯರೋಗ ನಿರ್ಮೂಲನೆಯಲ್ಲಿ ಲಸಿಕೆ ಪ್ರಮುಖವಾದ ಪಾತ್ರವನ್ನು ನಿರ್ವಹಿಸಲಿದ್ದು ದುರ್ಬಲ ವರ್ಗದ ಜನರಾದ 60 ವರ್ಷ ಮೇಲ್ಪಟ್ಟವರು, ಮಧುಮೇಹದಿಂದ ಬಳಲುತ್ತಿರುವವರು, ಧೂಮಪಾನ ಹಾಗೂ ಮಧ್ಯ ವ್ಯಸನಿಗಳು, ಅಪೌಷ್ಠಿಕತೆಯಿಂದ ಬಳಲುತ್ತಿರುವವರು (<18 ಬಿ.ಎಂ.ಐ), ಕ್ಷಯರೋಗಿಗಳ ಸಂಪರ್ಕಿತರು ವಯಸ್ಕರ ಬಿ.ಸಿ.ಜಿ. ಲಸಿಕಾಕರಣದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಲೂಕಾ ಆರೋಗ್ಯ ಅಧಿಕಾರಿ ಡಾ.ಸತೀಶ್ ತಿವಾರಿ ಹೇಳಿದರು.
ಇಲ್ಲಿನ ಹೊರಪೇಟೆ ಗಲ್ಲಿಯಲ್ಲಿರುವ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರಣ ವಿಭಾಗ, ವಿಜಯಪುರ ಹಾಗೂ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಮುದ್ದೇಬಿಹಾಳ ಇವರ ಸಂಯುಕ್ತ ಆಶ್ರಯದಲ್ಲಿ ವಯಸ್ಕರರಿಗೆ ಬಿ.ಸಿ.ಜಿ. ಲಸಿಕೆ ನೀಡುವ ಲಸಿಕಾ ಅಭಿಯಾಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಬಿ.ಸಿ.ಜಿ ಈ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತದೆ ಲಸಿಕೆ ತೆಗೆದುಕೊಳ್ಳಲು ಬರುವಾಗ ಫಲಾನುಭವಿಗಳು ಕಡ್ಡಾಯವಾಗಿ ಆಧಾರ ಕಾರ್ಡನ್ನು ಜೊತೆಗೆ ತೆಗೆದುಕೊಂಡು ಬರಬೇಕು ಲಸಿಕೆ ನೀಡಿದ ನಂತರ ಟಿ ಬಿ ವಿನ್ ಪೋರ್ಟಲ್ ಆನ್ಲೈನ್ ನಲ್ಲಿ ನೊಂದಣಿ ಮಾಡಲಾಗುವುದೆಂದು ತಿಳಿಸಿದರು.
ನಗರ ಆರೋಗ್ಯ ನಿರೀಕ್ಷಣಾಧಿಕಾರಿ ಎಂ ಎಸ್ ಗೌಡರ ಮಾತನಾಡಿ ಕ್ಷಯರೋಗ ನಿರ್ಮೂಲನೆಯಲ್ಲಿ ಔಷಧಿ ಹಾಗೂ ಆರೈಕೆಯ ಜೊತೆಗೆ ಕುಟುಂಬದ ಸಹಯೋಗ ಅತೀ ಅವಶ್ಯವಿದ್ದು, ಕ್ಷಯರೋಗದಿಂದ ಆಗಬಹುದಾದ ಸೋಂಕನ್ನು ತಡೆಗಟ್ಟುವಲ್ಲಿ ವಯಸ್ಕರ ಬಿ ಸಿ ಜಿ ಲಸಿಕೆ ಪ್ರಮುಖವಾದ ಪಾತ್ರವನ್ನು ನಿರ್ವಹಿಸಲಿದ್ದು ಎಲ್ಲಾ ಕ್ಷಯರೋಗದ ಫಲಾನುಭವಿಗಳು ಹಾಗೂ ಸಂಘ ಸಂಸ್ಥೆಗಳು ಈ ಅಭಿಯಾನದ ಕುರಿತು ಜಾಗೃತಿ ಮೂಡಿಸಿ ಎಲ್ಲರೂ ಈ ಲಸಿಕಾಕರಣದ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಸಾಂಕೇತಿಕವಾಗಿ 18 ಫಲಾನುಭವಿಗಳಿಗೆ ಬಿ ಸಿ ಜಿ ಲಸಿಕೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿಗಳಾದ ಡಾ. ಸಂಗಮೇಶ ದಶವಂತ ಡಾ.ತೈಸನ್ ಮೇಲ್ವಿಚಾರಕರಾದ ಎ ಎಸ್ ತೆರದಾಳ, ಐ ಸಿ ಮಾನಕರ್, ಯಲ್ಲಪ್ಪ ಚಲವಾದಿ, ಫಾರ್ಮಸಿ ಅಧಿಕಾರಿ ಎ ಐ ಕೇಶಾಪೂರ, ಕ್ಷಯ್ ರೋಗ ಘಟಕದ ಶಿವರಾಜ್ ದೀಕ್ಷಿತ್ ಝೆಡ್, ಎಂ ಬೀಳಗಿ, ವ್ಹಿ ಕೆ ಪಾಟೀಲ್, ಆರೋಗ್ಯ ನಿರೀಕ್ಷಣಾಧಿಕಾರಿ ಇಸ್ಮಾಯಿಲ್ ವಾಲಿಕಾರ, ಸಂಗೀತಾ ಬಸರಕೋಡ, ಆಶಾ ಮೇಲ್ವಿಚಾರಕಿ ಪ್ರಶಿಭಾರಾಣಿ ಆಶಾ ಕಾರ್ಯಕರ್ತೆಯರು ಸೇರಿದಂತೆ ಉಪಸ್ಥಿತರಿದ್ದರು.