ರಾಯಚೂರು: ರತ್ನಗಿರಿ ಬೆಟ್ಟ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮೂರನೇ ವರ್ಷದ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ಶಿಖರ ಪೂಜೆ ಕಾರ್ಯಕ್ರಮ, ಎಲ್ಲಾ ದೇವತೆಗಳ ಪಂಚಾಮ್ರುತ ಅಭಿಷೇಕ ಮತ್ತು ಅಯ್ಯಪ್ಪ ಸ್ವಾಮಿಗೆ ಬೆಳ್ಳಿಯ ಕವಚ ಸಮರ್ಪಣೆ ಮತ್ತು ಬಲಿ ಪೀಠಗಳಿಗೆ ಬಲಿಹರಣ ಪೂಜೆ ಕಾರ್ಯಕ್ರಮ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ವಿಧಾನಪರಿಷತ್ ಸದಸ್ಯರಾದ ಎನ್. ಎಸ್ ಬೋಸ್ ರಾಜ್ .ಶಂಕ್ರಪ್ಪ ವಕೀಲ್, ಕಾಂಗ್ರೆಸ್ ಹಿರಿಯ ಮುಖಂಡರಾದ ಕೆ. ಶಾಂತಪ್ಪ.ನಗರಸಭೆ ಹಿರಿಯ ಸದಸ್ಯರಾದ ಜಯಣ್ಣ.ಕೆ. ಟಿ. ಶ್ರೀನಿವಾಸ್ ಗುರುಸ್ವಾಮಿ,ಜಿ. ಶಿವಮೂರ್ತಿ,ಸೇರಿದಂತೆ ಶಿಷ್ಯವೃಂದ ಉಪಸ್ಥಿತರಿದ್ದರು.