ಇಂಡಿ: ಜನೇವರಿ 22 ರಂದು ಅಯೋಧ್ಯಯಲ್ಲಿ ನಿರ್ಮಿಸಿದ ನೂತನ ಶ್ರೀರಾಮ ಮಂದಿರದ ಲೋಕಾರ್ಪಣೆ ಶ್ರೀರಾಮ ಲಲ್ಲಾನ ವಿಗ್ರಹ ಪ್ರತಿಷ್ಠೆಯ ಹಿನ್ನೆಲೆಯಲ್ಲಿ ಶನಿವಾರ ಅಯೋಧ್ಯೆಯಲ್ಲಿ ಪೂಜಿಸಲ್ಪಟ್ಟ ಮಂತ್ರಾಕ್ಷತೆ ಇಂಡಿ ನಗರಕ್ಕೆ ಆಗಮಿಸಿತು.
ಪಟ್ಟಣದ ಶಾಂತೇಶ್ವರ ದೇವಸ್ಥಾನದಲ್ಲಿ ಶಿರಶ್ಯಾಡದ ಅಭಿನವ ಮುರುಘೇಂದ್ರ ಶಿವಾಚಾರ್ಯರು, ಗೌಡಗಾಂವಿಯ ಶಾಂತವೀರ ಶಿವಾಚಾರ್ಯರು, ಜೈನಾಪೂರದ ರೇಣುಕ ಶಿವಾಚಾರ್ಯರ ಸಮ್ಮುಖದಲ್ಲಿ ಮಂತ್ರಾಕ್ಷತೆಯ ಭವ್ಯ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆಯಲ್ಲಿ ಇಂಗಳಗಿ ಭಜನಾ
ತಂಡದವರು ಹಾಗು ವಿವಿಧ ಗ್ರಾಮಗಳ ಕಲಾವಿದರು, ರಾಮ ಭಜನೆಯ ಮೂಲಕ ಶ್ರೀ ರಾಮನ ಭಕ್ತಿ ಸ್ತುತಿಸಿದರು.
ಮೆರವಣಿಗೆ ಬಸವೇಶ್ವರ ವೃತ್ತ, ಅಂಬೇಡ್ಕರ ವೃತ್ತ,
ಮಹಾವೀರ ವೃತ್ತದ ಮೂಲಕ ಅಗಸಿ ಹನುಮಾನ ದೇವಸ್ಥಾನಕ್ಕೆ ತಲುಪಿ ಅಲ್ಲಿ ಮಂತ್ರಾಕ್ಷತೆಗೆ ಪೂಜಿಸಿ, ನಂತರ ವಿಠ್ಠಲ ರುಕ್ಮಿಣಿ ದೇವಸ್ಥಾನದವರೆಗೆ ಭವ್ಯವಾದ ಶೋಭಾಯಾತ್ರೆ ಸಾಗಿತು. ಮಂತ್ರಾಕ್ಷತೆಯನ್ನು ನ್ಯಾಯವಾದಿ ಮಲ್ಲಿಕಾರ್ಜುನ ಬಿರಾದಾರ ಅವರು ಕಾವಿ ಬಟ್ಟೆ ಧರಿಸಿ ಪೂಜಾ-ವಿಧಿ ವಿಧಾನಗಳಿಂದ ಹೊತ್ತು ಮೆರವಣಿಯಲ್ಲಿ ಸಾಗಿದರು.
ಶ್ರೀಮಂತ ದುದಗಿ, ಪ್ರಕಾಶ ಬಿರಾದಾರ, ಕಾಸುಗೌಡ
ಬಿರಾದಾರ, ಯಮನಾಜಿ ಸಾಳುಂಕೆ, ನೇತಾಜಿ ಪವಾರ,
ಅನೀಲಗೌಡ ಬಿರಾದಾರ, ಅನೀಲ ಜಮಾದಾರ, ದೇವೆಂದ್ರ ಕುಂಬಾರ, ಅಶೋಕಗೌಡ ಬಿರಾದಾರ, ಶಂಕರಸಿಂಗ ಹಲವಾಯಿ, ಅಶೋಕ ಅಕಲಾದಿ, ಸೋಮು ನಿಂಬರಗಿಮಠ,ಶಿಲವಂತ ಉಮರಾಣಿ, ಮಲ್ಲಿಕಾರ್ಜುನ ಕಿವುಡೆ, ರಾಮಸಿಂಗ್ ಕನ್ನೊಳ್ಳಿ, ರಾಜಗುರು ದೇವರ, ಪ್ರಸಾದ ಮಠ, ರಾಜು ಉಕ್ಕಲಿ, ರವಿ ಗವಳಿ,ಅರವಿಂದ ಬಿರಾದಾರ, ಶಾಂತು ದೇವರ,ಮಹೇಶ್ ಪೂಜಾರಿ ವಿಠ್ಠಲ ಹೊಸಮನಿ, ಶರಣು ಬಿರಾದಾರ, ಶಶಿಕಾಂತ ಕೋಳೆಕರ್, ಧರ್ಮರಾಜ ಮದರಖಂಡಿ, ಅವಿನಾಶ ಬಗಲಿ, ಆನಂದ ದೇವರ, ಸತೀಶ ಕುಂಬಾರ, ಅಪ್ಪು ಪವಾರ, ಶಶಿಕಾಂತ ಬಡಿಗೇರ ಇದ್ದರು.
ಇಂಡಿ: ಅಯೋಧ್ಯಯಲ್ಲಿ ನಿರ್ಮಿಸಿದ ನೂತನ
ಶ್ರೀರಾಮ ಮಂದಿರದ ಲೋಕಾರ್ಪಣೆ ಶ್ರೀರಾಮ
ಲಲ್ಲಾನ ವಿಗ್ರಹ ಪ್ರತಿಷ್ಠೆಯ ಹಿನ್ನೆಲೆಯಲ್ಲಿ
ಶನಿವಾರ ಅಯೋಧ್ಯೆಯಲ್ಲಿ ಪೂಜಿಸಲ್ಪಟ್ಟ
ಮಂತ್ರಾಕ್ಷತೆ ಇಂಡಿ ನಗರಕ್ಕೆ ಆಗಮಿಸಿದಾಗ ಭವ್ಯ
ಮೆರವಣಿಗೆಗೆ ಚಾಲನೆ ನೀಡಲಾಯಿತು.