ಅಟೋ, ಟಮ್ ಟಮ್ ನಿಲುಗಡೆಗೆ ಸ್ಥಳಾವಕಾಶವನ್ನು ಮಾಡಿಕೊಡಿ..!
ಇಂಡಿ : ಅಟೋ, ಟಮ್ ಟಮ್ ನಿಲುಗಡೆಗೆ ಸ್ಥಳಾವಕಾಶವನ್ನು ಮಾಡಿಕೊಡಿ ಎಂದು ಅಟೋ ಚಾಲಕರ ಮಾಲಕರ ಸಂಘದವರು ತಾಲೂಕು ಆಡಳಿತ ಸೌಧಕ್ಕೆ ಆಗಮಿಸಿ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಪಟ್ಟಣದಲ್ಲಿ ಅಟೋ ಮತ್ತು ಟಮ್ ಟಮ್ ನಿಲುಗಡೆಗೆ ಎಲ್ಲಿಯೂ ಸ್ಥಳಾವಕಾಶವಿಲ್ಲ. ಆದ್ದರಿಂದ ಪ್ರತಿನಿತ್ಯ ಬರುವ ಸಾವಿರಾರು ಪ್ರಯಾಣಿಕರಿಗೆ ಮತ್ತು ಅಟೋ, ಟಮ್ ಟಮ್ ಚಾಲಕರಿಗೆ ಸಮಸ್ಯೆಯಾಗುತ್ತಿದೆ.
ಜಿಲ್ಲೆ ಮತ್ತು ನೆರೆ ಮಹಾರಾಷ್ಟ್ರ ರಾಜ್ಯದಿಂದ ಬರುವ ನಿತ್ಯದ ಪ್ರಯಾಣಿಕರಿಗೆ ಜನಸ್ನೇಹಿಯಾಗಿ ಅವರ ಸ್ಥಳಕ್ಕೆ ತಲುಪಿಸುವ ಕಾರ್ಯ ಮಾಡುತ್ತಿದ್ದೆವೆ.ಅದ್ದರಿಂದ ದೂರದ ಊರಿನ ಪ್ರಯಾಣಿಕರ ಸಹಕಾರಕ್ಕೆ ಮತ್ತು ವಾಹನ ಚಾಲಕರ ಸಮಸ್ಯೆ ತಪ್ಪಿಸಲು, ಪಟ್ಟಣದ ಬಸ್ ನಿಲ್ದಾಣ ಎದುರುಗಡೆ ಹಾಗೂ ಮಹಾವೀರ ವೃತದಲ್ಲಿ ಆಟೋ ಮತ್ತು ಟಮ್ ನಿಲುಗಡೆಗೆ ಸ್ಥಳಾವಕಾಶ ಮಾಡಕೊಡಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಅಟೋ ಚಾಲಕರ ಸಂಘದ ಅಧ್ಯಕ್ಷ ಖಾಜಾಸಾಹೇಬ ಬಾಗವಾನ, ಉಪಾಧ್ಯಕ್ಷ ಮಲ್ಲಿಕಾರ್ಜುನ ಮದರಕಂಡಿ, ರೈಸ್ ಅಷ್ಟೇಕರ್, ಇಸಾಕ ಎಕ್ಕವಾಲೆ, ಸಿದ್ರಾಮ ಹೊಸಮನಿ, ನರಸಪ್ಪ ಬಜಂತ್ರಿ, ಮಹೇಶ ಅಗಸರ, ರಿಜ್ವಾನ್ ಅಸ್ಟೆಕಾರ, ಅಸ್ಪಾಕ ಮುಲ್ಲಾ, ಸಿದ್ದಪ್ಪ ಬಾವಿಕಟ್ಟಿ, ಗೈಬುಸಾಬ ಬಾಗವಾನ, ಬಸವರಾಜ ರೋಡಗಿ, ಯುವರಾಜ ರಾಠೋಡ, ಮುಸ್ತಾಕ ಯಡ್ರಾಮಿ, ಪರಸುರಾಮ ಕೊಡಹೊನ್ನ, ಅಪ್ಪಾಜಿ ರಾಠೋಡ, ರಿಯಾಜ ಮುಲ್ಲಾ, ಅಸ್ಪಾಕ ರೂಗಿ, ಸಮೀರ ಜಾದವ, ಆಕಾಶ ಜಾಧವ ಉಪಸ್ಥಿತರಿದ್ದರು.