ವಿಶ್ವಕಪ್ ಎರಡನೇ ಪಂದ್ಯದಲ್ಲೂ ಸೋತ ಆಸ್ಟ್ರೇಲಿಯಾ..!
Australia vs South Africa World Cup 2023:
Voice Of Janata Desk News
ICC World CUP 2023 : ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ ಭರ್ಜರಿ ಗೆಲುವು ಸಾಧಿಸಿದೆ. ಟೂರ್ನಿಯಲ್ಲಿ ಹರಿಣಗಳು ಸತತ ಎರಡು ಗೆಲುವು ಕಂಡರೆ, ಆಸೀಸ್ ತಂಡವು ಕ್ರಮವಾಗಿ ಎರಡು ಪಂದ್ಯಗಳಲ್ಲಿ ಸೋತಿದೆ. ವಿಶ್ವಕಪ್ ಇತಿಹಾಸದಲ್ಲಿ ಆಸ್ಟ್ರೇಲಿಯಾಗೆ ಇದು ಅತಿ ದೊಡ್ಡ ಅಂತರದ ಸೋಲು.
ದಕ್ಷಿಣ ಆಫ್ರಿಕಾ ವಿರುದ್ಧ ಬಲಿಷ್ಠ ಆಸ್ಟ್ರೇಲಿಯಾ (Australia vs South Africa) ತಂಡವು ಹೀನಾಯ ಸೋಲು ಕಂಡಿದೆ. ಆ ಮೂಲಕ ಭಾರತ ನೆಲದಲ್ಲಿ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಸತತ ಎರಡನೇ ಸೋಲು ಕಂಡಿದೆ. ಲಖನೌನ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆಸೀಸ್ ವಿರುದ್ಧ ದಕ್ಷಿಣ ಆಫ್ರಿಕಾ ತಂಡವು 134 ರನ್‌ಗಳಿಂದ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಸತತ ಎರಡು ಅಮೋಘ ಗೆಲುವುಗಳೊಂದಿಗೆ ಅದ್ಭುತ ಪ್ರದರ್ಶನ ಮುಂದುವರೆಸಿದೆ.
ಎರಡು ತಂಡಗಳ ಸ್ಕೋರ್ ಕಾರ್ಡ
ದಕ್ಷಿಣ ಆಫ್ರಿಕಾ: 50 ಓವರ್‌ಗಳಲ್ಲಿ7 ವಿಕೆಟ್‌ಗೆ 311 (ಕ್ವಿಂಟನ್ ಡಿ ಕಾಕ್ 109, ಏಡೆನ್ ಮಾಕ್ರ್ರಮ್ 56, ಬವುಮಾ 35, ಹೆನ್ರಿಚ್ ಕ್ಲಾಸೆನ್ 29, ಮಾರ್ಕೊ ಜಾನ್ಸನ್ 26, ಡಸ್ಸೆನ್ 26; ಮಿಚೆಲ್ ಸ್ಟಾರ್ಕ್ 53ಕ್ಕೆ 2, ಗ್ಲೆನ್ ಮ್ಯಾಕ್ಸ್‌ವೆಲ್ 34ಕ್ಕೆ 2).
ಆಸ್ಪ್ರೇಲಿಯಾ: 40.5 ಓವರ್‌ಗಳಲ್ಲಿ177 (ಲ್ಯಾಬುಶೇನ್ 46, ಮಿಚೆಲ್‌ಸ್ಟಾರ್ಕ್ 27, ಕಮಿನ್ಸ್ 22; ರಬಾಡ 33ಕ್ಕೆ 3, ಕೇಶವ್ 30ಕ್ಕೆ 2, ಶಮ್ಸಿ 38ಕ್ಕೆ 2).