ಇಂಡಿ ಡಿ ಸಿ ಸಿ ಬ್ಯಾಂಕ್ ಏಟಿಎಂ ಹಣ ಕಳ್ಳತನಕ್ಕೆ ಯತ್ನ..!
ಎಸ್ಕೇಪ್ ಆದ ಸೆಕ್ಯೂರಿಟಿ ಗಾರ್ಡ್..!
ಇಂಡಿ : ಬ್ಯಾಂಕಿನ ಎಟಿಎಂ ಸೆಕ್ಯುರಿಟಿ ಗಾರ್ಡ್‌ನೇ ಎಟಿಎಂನಲ್ಲಿರುವ ಹಣಕ್ಕೆ ಆಸೆಪಟ್ಟಿರುವ ಘಟನೆ ಭೀಮಾತೀರದಲ್ಲಿ ನಡೆದಿದೆ. ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿರುವ ಡಿಸಿಸಿ ಬ್ಯಾಂಕಿನ ಸೆಕ್ಯುರಿಟಿ ಎಟಿಎಂ ದರೋಡೆಗೆ ಪ್ರಯತ್ನಿಸಿ, ಪರಾರಿಯಾಗಿದ್ದಾನೆ. ಬ್ಯಾಂಕಿನ ಸೆಕ್ಯುರಿಟಿ ಕಾರ್ಯನಿರ್ವಹಿಸುತ್ತಿದ್ದ ರೇವಣ್ಣಸಿದ್ದ @ ಸಾಗರ ಲಾಸಂಗಿ ವಿರುದ್ಧ ಕೇಸ್ ದಾಖಲಾಗಿದೆ. ಇನ್ನು ಈತ ತನ್ನ ದ್ವಿಚಕ್ರ ವಾಹನ ಕೆಎ 28 ಇ ಝಡ್ 4351 ಹೋಂಡಾ ಕಂಪನಿಯ ವಾಹನದಲ್ಲಿ ಕಬ್ಬಿಣ ಕಟ್ ಮಾಡುವ ಗ್ರ್ಯಾಂಡರ್ ಮಶೀನ, ಸುತ್ತಿಗೆ, ಕತ್ತರಿ ತೆಗೆದುಕೊಂಡು ಬಂದು ಡಿಸಿಸಿ ಬ್ಯಾಂಕಿನ ಎಟಿಎಂ ಮೇಲ್ಭಾಗದ ಬಾಗಿಲು ತೆರೆದು ಲಾಕರ್ ಕಟ್ ಮಾಡಲು ಪ್ರಯತ್ನಿಸಿದ್ದಾನೆ. ಲಾರ್ಕರ್ ಕಟ್ ಆಗದೆ ಇದ್ದ ಕಾರಣ ಹಣ ಕಳ್ಳತನ ಮಾಡಲು ಆಗಿಲ್ಲ. ಆತನ ವಾಹನ ಸಹ ಬ್ಯಾಂಕಿನ ಕಾಂಪೌಂಡ್ ಒಳಗಡೆ ಇಟ್ಟು ಪರಾರಿಯಾಗಿದ್ದಾನೆ. ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ಈರಣ್ಣ ತೆಲ್ಲೂರ ಇಂಡಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.