ಕ್ಷುಲ್ಲಕ ಕಾರಣಕ್ಕೆ ಗುತ್ತಿಗೆದಾರನ ಮೇಲೆ ಹಲ್ಲೆ..!
ಇಂಡಿ : ಕ್ಷುಲ್ಲಕ ಕಾರಣಕ್ಕೆ ಗುತ್ತಿಗೆದಾರನ ಮೇಲೆ ಓರ್ವ ಹಲ್ಲೆಗೈದು, ಜೀವ ಬೆದರಿಕೆ ಹಾಕಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಂಜಗಿ ಕ್ರಾಸ್ ಹತ್ತಿರ ನಡೆದಿದೆ. ಹಂಜಗಿ ಕ್ರಾಸ್ ಹತ್ತಿರ ರಸ್ತೆ ಡಾಂಬರೀಕರಣ ಮಾಡುವ ಸಲುವಾಗಿ ರಸ್ತೆಗೆ ಗರಸು ಹಾಕುತ್ತಿದ್ದಾಗ ಗುತ್ತಿಗೆದಾರ ಹಾಗೂ ಅಂಜುಟಗಿ ಗ್ರಾಮದ ರಾಜೇಂದ್ರ ಡೆಂಗಿ ಮೇಲೆ ಹಲ್ಲೆ ಮಾಡಲಾಗಿದೆ. ಇನ್ನು ವಿವೇಕ ಪಾಟೀಲ್ ಹಲ್ಲೆಗೈದಿದ್ದಾನೆ. ಈ ರಸ್ತೆಯ ಪಕ್ಕದಲ್ಲಿ ಹಲ್ಲೆಗೈದಿರುವ ವಿವೇಕ ಜಮೀನು ಇದೆ. ಅದಕ್ಕಾಗಿ ಏಕೆ ಕಲ್ಲು ಹಾಕಿದ್ದಿಯಾ ಎಂದು ಬೈದು ಹಲ್ಲೆ ಮಾಡಿದ್ದಾನೆ. ಹಲ್ಲೆಗೊಳಗಾದ ಗುತ್ತಿಗೆದಾರ ರಾಜೇಂದ್ರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಇಂಡಿ ಗ್ರಾಮೀಣ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.