ಲಿಂಗಸಗೂರು: ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಶ್ರಾವಣ ಮಾಸದ ಮೂರನೇ ಸೋಮವಾರ ಗ್ರಾಮದೇವತೆ ದ್ಯಾಮಮ್ಮ ದೇವಿಯ ಜಾತ್ರಾಮಹೋತ್ಸವದ ಅಂಗವಾಗಿ ಸಮಸ್ತ ನಗರಹಾಳ ಹಾಗೂ ತುಂಬಲಗಡ್ಡಿ ಗ್ರಾಮಸ್ಥರಿಂದ ಶ್ರೀ ಅಂಕಲಿಮಠದ ದಾಸೋಹ ರತ್ನ ವೀರಭದ್ರ ಮಹಾ ಸ್ವಾಮಿಗಳಿಗೆ ತುಲಾಬಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ತುಂಬಲಗಡ್ಡಿ ಸರ್ಕಲ್ ನಿಂದ ಡೊಳ್ಳು ಹಾಗೂ ಕಳಸಗಳೊಂದಿಗೆ ಶ್ರೀಗಳಿಗೆ ಸ್ವಾಗತ ಕೋರಲಾಯಿತು.
ಈ ವೇಳೆ ಮಾತನಾಡಿದ ಶ್ರೀಗಳು ಇದು ನಿಮ್ಮೂರ ಹಾಗೂ ನಮ್ಮೂರ ಜಾತ್ರೆ. ತಾಯಿ ದೇವಿಯ ಆಶೀರ್ವಾದ ನಿಮ್ಮೆಲರ ಮೇಲಿರಲಿ. ಗ್ರಾಮದ ಜನರೆಲ್ಲರೂ ಸೇರಿ ತನು ಮನ ಧನದಿಂದ ತಾಯಿಗೆ ಪ್ರಾರ್ಥನೆ ಮಾಡಿದ್ದೀರಿ. ದೇವರ ಮೂಲಕವೇ ನಾವೆಲ್ಲ ಒಳಿತನ್ನು ಕಾಣುತ್ತೆವೆ. ಮುಂದಿನ ದಿನಮಾನಗಳಲ್ಲಿ ಎಲ್ಲಾ ಗುರುಗಳ ಆಶೀರ್ವಾದ ನಿಮಗೆ ದೊರಕಲಿ ಎಂದು ಆಶೀರ್ವಚನ ನೀಡದರು. ಶ್ರೀ ಗಳಿಗೆ ಇದು 1062 ನೇ ತುಲಾಬಾರ ಕಾರ್ಯಕ್ರಮವಾಗಿತ್ತು.
ಈ ಸಂದರ್ಭದಲ್ಲಿ ಅರ್ಚಕರು, ಗ್ರಾಮದ ಹಿರಿಯರು, ಮಹಿಳೆಯರು, ಯುವಕರು ಉಪಸ್ಥಿತರಿದ್ದರು.