ಇಂಡಿ : ಹಿಂದುತ್ವ ತಿಳಿಯಲು ಗೂಗಲ್ ನೋಡಬೇಡಿ, ಧ್ಯಾನದಿಂದ ಅಧ್ಯಯನ ಮಾಡಿ ಎಂದು ಶಾಸಕ ಸತೀಶ ಜಾರಕಿಹೊಳಿಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ನಡೆದ ಕಾರ್ಯಕರ್ತರ ಸಂಕಲ್ಪ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಪದೇ ಪದೇ ಹಿಂದುತ್ವದ ಬಗ್ಗೆ ಯಾಕೆ ಅಪಮಾನ ಮಾಡುತ್ತಿದ್ದಾರೋ ಗೊತ್ತಿಲ್ಲ. ದೇಶದಲ್ಲಿ ಕಾಂಗ್ರೆಸ್ ಸರ್ವನಾಶವಾಗುತ್ತಿದ್ದು, ಇದೀಗ ಸತೀಶ ಜಾರಕಿಹೊಳಿ ಹೇಳಿಕೆ ವಿನಾಶ ಕಾಲೇ ವಿಪರೀತ ಬುದ್ದಿ ಎನ್ನುವಂತಾಗಿದೆ ಎಂದರು.
ಹಿಂದೂ ಎಂಬುದು ನಮ್ಮ ಸಂಸ್ಕೃತಿ. ಅದರ ಬಗ್ಗೆ ನಮಗೆ ಗರ್ವ ಇದೆ. ಇಡೀ ದೇಶವಾಸಿಗಳ ಗರ್ವವಾಗಿದೆ. ಕಾಂಗ್ರೆಸ್ ನಾಯಕರು ಪದೇ ಪದೇ ಹಿಂದುತ್ವದ ಬಗ್ಗೆ ಯಾಕೆ ಅಪಮಾನ ಮಾಡುತ್ತಿದ್ದಾರೆ ತಿಳಿಯುತ್ತಿಲ್ಲ ಎಂದರು. ಇನ್ನೂ ಕಾರ್ಯಕರ್ತರು, ಭೂತ ಮಟ್ಟದ ಸಮಿತಿಯ ಅಧ್ಯಕ್ಷರು ಇಂಡಿಯಿಂದ 2023 ರ ವಿಧಾನ ಸಭೆಯ ಚುನಾವಣೆಯಲ್ಲಿ ಕಮಲ ಅರಳಿಸುವ ಬಗ್ಗೆ ಸಂಕಲ್ಪ ತೋಡಿ ಎಂದು ಹೇಳಿದರು. ಅದಲ್ಲದೇ ಮೋದಿ ಸರಕಾರದ ಮತ್ತು ಬಸವರಾಜ ಬೊಮ್ಮಾಯಿ ಸರಕಾರ ಮಾಡಿದ ಅನೇಕ ಅಭಿವೃದ್ಧಿ ಕೆಲಸ ಮತ್ತು ಕಾರ್ಯಕ್ರಮಗಳು ಜನರಿಗೆ ತಲುಪಿಸುವ ಜವಾಬ್ದಾರಿ ಕೆಲಸ ಮಾಡಿ. ಒಬಿಸಿ, ಪರಿಶಿಷ್ಟ ಪಂಗಡ, ಪರಿಶಿಷ್ಟ ವರ್ಗದ ಮೀಸಲಾತಿ ಹೆಚ್ಚಿಸುವ ಜೊತೆಗೆ ತಳವಾರ ಪರಿವಾರದ ಸಮುದಾಯ ಜನರಿಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ಕೊಡುವಂತಹ ಮಹತ್ವದ ಕೆಲಸ ಮಾಡಿದ್ದೆವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಸಿದ್ದರಾಜು, ಸಂಸದ ರಮೇಶ ಜಿಗಜಿಣಿಗಿ ಮತ್ತು ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್ ಪಾಟೀಲ ಕೋಚಬಾಳ ಮಾತಾನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರಕಾರ ಅಭಿವೃದ್ಧಿ ವಿಷಯದಲ್ಲಿ ಎಂದೂ ಹಿನ್ನಡೆ ಮಾಡಿಲ್ಲ, 75 ವರ್ಷಗಳಿಂದ ಆಗದ ಅಭಿವೃದ್ಧಿ ಕೆಲಸಗಳು ನಮ್ಮ ಜಿಲ್ಲೆಯಲ್ಲಿ ನಡೆದಿದೆ. ಕೇವಲ 8 ವರ್ಷದಲ್ಲಿ ಅಭಿವೃದ್ಧಿ ಪರ್ವದ ಕಾರ್ಯಕ್ರಮಗಳಿಂದ ಜಗತ್ತು ಭಾರತನತ್ತ ನೋಡುವಂತಾಗಿದೆ. ಇನ್ನೂ ನಮ್ಮ ಜಿಲ್ಲೆ ಬರದ ಹಣೆಪಟ್ಟಿ ಕಟ್ಟಿಕೊಂಡು ಯಾವಾಗಲೂ ತತ್ತಿರಿಸುತ್ತಿತ್ತು. ಆದರೆ ಇಂದು ಕೆರೆ ತುಂಬಿವ ಯೋಜನೆ, ರೇವಣಸಿದ್ದೇಶ್ವರ ಏತ ನೀರಾವರಿ, ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ಮೂಲಕ ನೀರು ಹರಿಸಿ ರೈತರ ಮೊಗದಲ್ಲಿ ಸಿರಿ ಮೂಡಿಸುವಂತಹ ಕೆಲಸವಾಗಿದೆ. ಇನ್ನೇನೂ ಸ್ವಲ್ಪ ಸಮಯದಲ್ಲಿ ಜಿಲ್ಲೆಯಿಂದ ವಿಮಾನ ಹಾರಾಟವಾಗುವ ಸಂದರ್ಭ ಬಂದಿದೆ, ಜೊತೆಗೆ ಜೆಜೆಎಮ್ ಯೋಜನೆ ಮೂಲಕ ಪ್ರತಿ ಮನೆಗೆ ಶುದ್ದ ಕುಡಿಯುವ ನೀರು ಪೂರೈಸುವಂತಹ ಅನೇಕ ಮಹತ್ವ ಕೆಲಸ ಬಿಜೆಪಿ ಸರಕಾರ ಮಾಡಿದೆ. ಹಾಗಾಗಿ ಕಾರ್ಯಕರ್ತರು ಬಿಜೆಪಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನ ಜನರಿಗೆ ತಲುಪಿಸುವ ಮೂಲಕ ತಿಳಿಸಬೇಕು ಎಂದು ಹೇಳಿದರು. ಲಿಂಬೆ ನಾಡಿನಿಂದಲೇ ೨೦೨೩ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಂಕಲ್ಪ ತೊಡಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಅಪ್ಪಸಾಹೇಬ ಪಟ್ಟಣಶೆಟ್ಟಿ, ವಿಭಾಗಿಯ ಪ್ರಭಾರಿ ಪ್ರಚಂದ್ರಶೇಖರ ಕವಟಗಿ, ಶಿವರುದ್ರ ಬಾಗಲಕೋಟ, ಜಿಲ್ಲಾ ಉಪಾಧ್ಯಕ್ಷ ದಯಾಸಾಗರ ಪಾಟೀಲ, ರೈತ ಮೂರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ, ಶ್ರೀಶೈಲಗೌಡ ಬಿರಾದಾರ, ಶಂಕರಗೌಡ ಡೋಮನಾಳ, ರಾಜಕುಮಾರ ಸಗಾಯಿ, ಮುತ್ತು ದೇಸಾಯಿ, ಮಲ್ಲಿಕಾರ್ಜುನ ಕಿವಡೆ, ಸಿದ್ಧಲಿಂಗ ಹಂಜಗಿ, ಯಲ್ಲಪ್ಪ ಹದರಿ, ವಿಜಯಲಕ್ಷ್ಮಿ ರೂಗಿಮಠ, ಬನ್ನೆಮ್ಮ ಹದರಿ ಇನ್ನೂ ಕಾರ್ಯಕರ್ತರು ಉಪಸ್ಥಿತರಿದ್ದರು.