ಜ- 3 ರಂದು ಇಂಡಿಗೆ ರಾಜ್ಯ ನೌಕರ ಸಂಘದ ನೂತನ ಸಾರಥಿ ಸಿ.ಎಸ್ ಷಡಕ್ಷರಿ ಆಗಮನ: ತಾಲ್ಲೂಕು ಅಧ್ಯಕ್ಷ ರಾವೂರ
ಇಂಡಿ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ಎರಡನೇ ಬಾರಿ ಆಯ್ಕೆಯಾದ ಸಿ.ಎಸ್.ಷಡಕ್ಷರಿ ಅವರು ಜನೇವರಿ 3 ಶುಕ್ರವಾರದಂದು ಇಂಡಿ ನಗರಕ್ಕೆ ಆಗಮನ ಮಾಡುತ್ತಿದ್ದು,ಅವರಿಗೆ ತಾಲೂಕು ಸರಕಾರಿ ನೌಕರರ ಸಂಘದ ವತಿಯಿಂದ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ.
ಬೆಳಗ್ಗೆ 11 ಗಂಟೆಗೆ ಇಂಡಿ ಪಟ್ಟಣದ ಸರಕಾರಿ ನೌಕರರ ಸಂಘದ ಸಭಾ ಭವನದಲ್ಲಿ ಏರ್ಪಡಿಸಿದ ಅಭಿನಂದನಾ ಸಮಾರಂಭದಲ್ಲಿ ನೌಕರ ಸಂಘದ ರಾಜ್ಯಧ್ಯಕ್ಷ ಷಡಕ್ಷರಿ ಹಾಗೂ ನೌಕರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶಡಶ್ಯಾಳ ಭಾಗವಹಿಸುವರು.
ಈ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಎಲ್ಲ ಇಲಾಖೆಯ ನೌಕರರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ತಾಲ್ಲೂಕು ಸರಕಾರಿ ನೌಕರ ಸಂಘದ ಅಧ್ಯಕ್ಷ ಬಸವರಾಜ ರಾವೂರ ಹಾಗೂ ಸಂಘದ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.