ಅಂತರ ರಾಜ್ಯ ಬೆಳ್ಳಿ ಬಂಗಾರ ಕಳ್ಳರ ಬಂಧನ..!
ಇಂಡಿ : ಬೆಳ್ಳಿ ಬಂಗಾರ ಆಭರಣಗಳನ್ನು ಸುಲಿಗೆ ಮತ್ತು ಕಳವು ಮಾಡುವ ಅಂತರ ರಾಜ್ಯ ದರೋಡೆಕೋರರನ್ನು ಬಂಧಿಸುವಲ್ಲಿ ಇಂಡಿಯ ಪೋಲಿಸ ಇಲಾಖೆ ಯಶಸ್ವಿಯಾಗಿದ್ದಾರೆ.
ಮಹಾರಾಷ್ಟçದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಪಾಂಡುತರಿ ತಾಂಡಾದ ವಿಕ್ಯಾ ಅಶೋಕ ಚವ್ಹಾಣ ಮತ್ತು ಸಂಜು ಪ್ರಲ್ಹಾದ ಪವಾರ ಇವರನ್ನು ಬಂದಿಸಿದ್ದಾರೆ.
ಇವರು ಇಬ್ಬರುಮಹಾರಾಷ್ಟçದಿಂದ ಇಂಡಿಗೆ ಬಂದು ಕಳೆದ ಒಂದು ವರ್ಷದಿಂದ ಇಂಡಿ ಬಂದು ಐದು ಜನ ಸಹಚರರೊಂದಿಗೆ ಹೊರ್ತಿ, ಅಗಸನಾಳ, ಹಳಗುಣಕಿ,ಇಂಚಗೇರಿ, ಗ್ರಾಮಗಳಲ್ಲಿ ಕಳ್ಳತನ ಮಾಡಿದ್ದ ೧೮೪ ಗ್ರಾಂ ಬಂಗಾರ, ೮೦ ಗ್ರಾಂ ಬೆಳ್ಳಿ, ಹೀಗೆ ಒಟ್ಟು ೯ ಲಕ್ಷ ೫೫ ಸಾವಿರ ಬೆಲೆ ಬಾಳುವ ಸಾಮಾನು ವಶ ಪಡಿಸಿಕೊಂಡಿದ್ದಾರೆ.
ಒಟ್ಟು ಐದು ಮನೆ ಕಳ್ಳತನ ಮತ್ತು ಒಂದು ಸುಲಿಗೆ ಪ್ರಕರಣ ಪತ್ತೆಯಾಗಿದ್ದು ಪೋಲಿಸ ಇಲಾಖೆಯ ಸಿ.ಪಿಐ ಗ್ರಾಮೀಣದ ಮಲ್ಲಿಕಾರ್ಜುನ ಡಪ್ಪಿನ ಇವರ ನೇತೃತ್ವದಲ್ಲಿ ಪಿಎಸ್ ಐ ದೀಪಾ ಗೋಡೆಕರ,ಎಸ್.ಎಸ್.ಮಾಳೆಜಾನ, ಸೋಮೇಶ ಗೆಜ್ಜಿ ಮತ್ತು ಸಿಬ್ಬಂದಿ ವಿ.ಜಿ.ಗಾರಗೆ, ವಿ.ಜಿ. ಶಿರಮಗೊಂಡ, ವಿ.ಎಂ. ಮದಬಾವಿ,ಎಂ.ಎನ್.ಹೊನ್ನಾಕಟ್ಟಿ,ಎಚದ.ಎA.ಮುಲ್ಲಾ, ವಿ.ಎಂ.ಪಾಟೀಲ,ಮಲ್ಲು ದ್ಯಾಮಗೋಳ, ಎಸ್.ಎಮ್. ಬಿರಾದಾರ ಇವರ ತಂಡವು ಯಶಸ್ವಿ ಯಾಗಿದ್ದಾರೆ.
ಪೋಲಿಸರ ಈ ಕಾರ್ಯಕ್ಕೆ ಇಂಡಿಯ ಡಿ.ವಾಯ್.ಎಸ್.ಪಿ ಜಗದೀಶ ಎಚ್.ಎಸ್, ಹೆಚ್ಚುವರಿ ಪೋಲಿಸ ಅಧೀಕ್ಷಕ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ ಮತ್ತು ಎಸ್.ಪಿ ಋಷಿಕೇಶ ಸೋನಾವನೆ ಇವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ಕೆ ಶ್ಲಾಘಿಸಿದ್ದಾರೆ.
ಇಂಡಿಯ ಪೋಲಿಸ ತಂಡದಿಂದ ನಡೆದ ಅಂತರ ರಾಜ್ಯ ದರೋಡೆಕೋರರ ತಂಡ