ಅಫಜಲಪುರ: ಎಪ್ರಿಲ್ 1 ಬಂದರೆ ಸಾಕು ಎಲ್ಲರೂ ಎಪ್ರಿಲ್ ಫೂಲ್ ಮಾಡಿ ಮನರಂಜನೆ ಪಡೆದುಕೊಳ್ಳುತ್ತಿರೆ. ಆದರೆ ತಾಲೂಕಿನ ಮಾಶಾಳ ಗ್ರಾಮದ ಯುವಕರು ಬಿಸಿಲಿನ ಧಗೆಯನ್ನು ಕಡಿಮೆ ಮಾಡಲು ಸಸಿಗಳನ್ನು ನೆಟ್ಟು ಎಪ್ರಿಲ್ ಕೂಲ್ ಮಾಡುವ ಪ್ರಯತ್ನ ಮಾಡಿದ್ದಾರೆ.
ಮಾಶಾಳ ಗ್ರಾಮದ ಭಗತಸಿಂಗ್ ಯುವ ಜಾಗೃತಿ ಸಮಿತಿಯ ಅಧ್ಯಕ್ಷರಾದ ಆಸೀಫ ಪಿಂಜಾರ ಅವರು ಮಾತನಾಡಿ ನಮ್ಮ ಭಾಗ ಬಿಸಿಲು ನಾಡೆಂದು ಖ್ಯಾತಿಯಾಗಿದೆ. ಸಾಧ್ಯವಾದಷ್ಟು ಗಿಡ ಮರಗಳನ್ನು ನೆಟ್ಟು ಪರಿಸರ ಜಾಗೃತಿಯನ್ನು ಮೂಡಿಸುತ್ತಿದ್ದೇವೆ ಎಂದರು. ಈ ಸಂದರ್ಭದಲ್ಲಿ ರಫೀಕ ಅಳ್ಳಗಿ, ಇರ್ಫಾನ ಬೋರುಟಿ ಇದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.