ವಿಜಯಪುರ ನಗರದಲ್ಲಿ ಏಪ್ರಿಲ್ 11 ರಿಂದ 14 ರವರೆಗೆ ಅಂಬೇಡ್ಕರ್ ಬೃಹತ್ ಹಬ್ಬದ ಕಾರ್ಯಕ್ರಮ ನಡೆಯುತ್ತದೆ
ವಿಜಯಪುರ 09 ಏಪ್ರಿಲ್ : ಡಾ. ಬಾಬಾಸಾಹೇಬ ಅಂಬೇಡ್ಕರ್ ರವರ 135 ನೇ ಜಯಂತೋತ್ಸವದ ಅಂಗವಾಗಿ ಎಪ್ರಿಲ್ 11 ರಿಂದ 14 ರ ವರೆಗೆ ಹಲವು ಕಾರ್ಯಕ್ರಮಗಳನ್ನ ಆಯೋಜನೆ ಮಾಡಲಾಗಿದೆ ಎಂದು ದಲಿತ ವಿದ್ಯಾರ್ಥಿ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಶ್ರೀನಾಥ್ ಪೂಜಾರಿ ಯವರು ಮಾಧ್ಯಮ ಗೋಷ್ಠಿಯ ಮೂಲಕ ಹೇಳಿದರು.
ಇಂದು ವಿಜಯಪುರ ನಗರದ ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾ ಗೋಷ್ಠಿ ಯಲ್ಲಿ ಮಾದ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಾ ಈ ಬಾರಿ ಜಿಲ್ಲೆಯಲ್ಲಿ ಅಂಬೇಡ್ಕರ್ ಜಯಂತೋತ್ಸವವನ್ನು ವಿಶೇಷವಾಗಿ ನಾಲ್ಕೂದಿನ ಆಚರಿಸಲಿದ್ದೇವೆ ವಿಜಯಪುರ ನಗರದ ಅಂಬೇಡ್ಕರ್ ಸರ್ಕಲ್ ನಲ್ಲಿ ವಿಚಾರ ಸಂಕಿರಣ, ಸಂವಾದ, ಪುಸ್ತಕ ಮಳಿಗೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಹಲವು ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಹಬ್ಬದ ರೀತಿಯಲ್ಲಿ ಜಯಂತಿ ಆಚರಣೆಗೆ ತುಂಬಾ ವಿಜರಾಮನೆಯಿಂದ ನಡೆಸಲು ನಿರ್ಧರಿಸಲಾಗಿದೆ ಎಂದರು.
ಇನ್ನೂ ಎಪ್ರಿಲ್ 11 ರಂದು ಜ್ಯೋತಿಭಾ ಫುಲೆ ಯವರ ಜನ್ಮದಿನಾಚರಣೆ ಎಂದು ಮಹಿಳೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಈ ಕಾರ್ಯಕ್ರಮ ಕಾರ್ಮಿಕ ಇಲಾಖೆ ಸಚಿವ ಸಂತೋಷ ಲಾಡ್ ಉದ್ಘಾಟನೆ ಮಾಡುವರು,
ಎರೆಡನೆ ಗೋಷ್ಠಿಯು ಸಂಜೆ 5 ಗಂಟೆಗೆ ಸಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಎಪ್ರೀಲ್ 12 ರಂದು ಸಾಂಸ್ಕೃತಿಕ ನಾಯಕ ಬಸವಣ್ಣ ಎಂಬ ವಿಚಾರದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದ್ದು ಇದನ್ನು ಕಂದಾಯ ಇಲಾಖೆ ಸಚಿವ ಕೃಷ್ಣ ಬೈರೇಗೌಡ ಅವರು ಉದ್ಘಾಟನೆ ಮಾಡುವರು ಅವರ ಜೊತೆ ಬಸವ ಚಿಂತನೆ ವುಳ್ಳ ಶಿವಾಚಾರ್ಯ ಸಾನಿಹಳ್ಳಿ ವ್ವಾಮೀಜಿಯವರು ಉಪಸ್ಥಿತಿ ಇರುತ್ತಾರೆ.
ಸಂಜೆ 5 ಗಂಟೆಗೆ ಸಂಸ್ಕೃತಿಕ ಕಾರ್ಯಕ್ರಮ ಮತ್ತು ನಾಟಕಗಳು ಇರುತ್ತವೆ.
ಎಪ್ರಿಲ್ 13 ರಂದು ರಾಜಕೀಯದ ಪರಿವರ್ತನೆ ಸಾಧ್ಯತೆ ಎಂಬ ಕಾರ್ಯಕ್ರಮವನ್ನು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರು ಶಾಸಕರಾದ ಬಿ ಆರ್ ಪಾಟೀಲ ಅವರು ಉದ್ಘಾಟನೆ ಮಾಡುವರು.
ಸಂಜೆ 5 ಗಂಟಗೆ ಸಂಸ್ಕೃತಿಕ ಕಾರ್ಯಕ್ರಮ ಮತ್ತು ನಾಟಕ ಇರುತ್ತದೆ.
ಎಪ್ರಿಲ್ 14 ರಂದು ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ವನ್ನು ಬೃಹತ್ ಕೈಗಾರಿಕಾ ಸಚಿವರು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ ಬಿ ಪಾಟೀಲ ಅವರು ಉದ್ಘಾಟನೆ ಮಾಡುವರು ಎಂದರು.
ಎಂದಿನಂತೆ ಸಂಜೆ 5 ಗಂಟೆಗೆ ಸಂಸ್ಕೃತಿಕ ಕಾರ್ಯಕ್ರಮ ನಾಟಕ ವನ್ನು ಆಯೋಜಿಸಲಾಗಿದೆ ಎಂದರು.
ಇನ್ನೂ ದಲಿತ ವಿದ್ಯಾರ್ಥಿ ಪರಿಷತ್, ಜಾಗೃತ ಕರ್ನಾಟಕ, ಅನೌಪಚಾರಿಕ ಶಿಕ್ಷಣ ಸಂಸ್ಥೆ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಬಹುತ್ವ ಭಾರತ ಕಲ್ಪನೆಯೊಂದಿಗೆ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಎಪ್ರಿಲ್ 14 ರಂದು ಬೃಹತ್ ರಕ್ತದಾನ ಶಿಬಿರ ವನ್ನು ಕೂಡ ಆಯೋಜನೆ ಮಾಡಲಾಗಿದೆ.
ಇನ್ನೂ ಕಾರ್ಯಕ್ರಮಕ್ಕೆ ಸರ್ಕಾರದಿಂದ ಯಾವುದೇ ಅನುದಾನ ಪಡೆಯದೇ ಸಮಾಜದ ಮುಖಂಡರಿಂದ ಸಣ್ಣ ಪ್ರಮಾಣದ ವಂತಿಗೆ ಪಡೆದು ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಅಂಬೇಡ್ಕರ್ ಹಬ್ಬದ ಪೋಸ್ಟರ್ ಬಿಡುಗಡೆ ಮಾಡಿದರು.
ಇನ್ನೂ ಮಾದ್ಯಮ ಅನೌಪಚಾರಿಕ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಫಾದರ್ ಟಿಯೋಲೋ ಮೆಚಾಡೋ, ರಾಜೇಶ್ವರಿ ಮಾಟಪತಿ, ದಲಿತ ಮುಖಂಡ ಚನ್ನು ಕಟ್ಟಿಮನಿ, DVP ಮುಖಂಡ ಅಕ್ಷಯಕುಮಾರ ಅಜಮನಿ, ಮಾದೇಶ್ ಚಾಲವಾದಿ, ಶೆಂಕರ್, ನವೀನ್ ಸೇರಿದಂತೆ ಹಲವರು ಹೆಣ್ಣುಮಕ್ಕಳು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು…